More

    ಹೊಸ ಅವತಾರದಲ್ಲಿ ಖುಷ್ಬೂ … ಬರೋಬ್ಬರಿ 12 ಕೆಜಿ ಇಳಿಕೆ

    ಚೆನ್ನೈ: ‘ರಣಧೀರ’ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದು ಪಡ್ಡೆಗಳ ನಿದ್ದೆಗೆಡೆಸಿದ್ದ ನಟಿ ಖುಷ್ಬೂ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿರುವ ನೆಟ್ಟಿಗರು, ಅದರಲ್ಲಿರುವುದು ಖುಷ್ಬೂ ಅವರೇನಾ ಎಂದು ಹುಬ್ಬೇರಿಸುವಂತಿದೆ. ಅದಕ್ಕೆ ಕಾರಣ, ಖುಷ್ಬೂ ತೂಕ ಇಳಿಸಿಕೊಂಡಿರುವುದು.

    ಇದನ್ನೂ ಓದಿ: ‘ಕೇವಲ ಸೋದರರಲ್ಲ, ಸೋದರಿಯರೂ ರಕ್ಷಿಸಬಲ್ಲರು’ ಎನ್ನುತ್ತಾರೆ ನೃತ್ಯಜೋಡಿ ಶಕ್ತಿ, ಮುಕ್ತಿ!

    ಹೌದು, ಖುಷ್ಬೂ ತೂಕ ಇಳಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ತಮಿಳು ನಾಡು ಚುನಾವಣೆಗಳ ಸಂದರ್ಭದಲ್ಲಿ ದುಂಡಗಿದ್ದ ಖುಷ್ಬೂ, ಇತ್ತೀಚಿನ ಕೆಲವು ದಿನಗಳಲ್ಲಿ ಸಖತ್​ ವರ್ಕೌಟ್​ ಮಾಡಿ ತೂಕ ಇಳಿಸಿಕೊಂಡಿದ್ದಾರೆ. ಎಷ್ಟು ವೇಯ್ಟ್​ ಲಾಸ್​ ಆಗಿದೆ ಎಂದು ಖುಷ್ಬೂ ಹೇಳಿಕೊಳ್ಳದಿದ್ದರೂ, ಮೂಲಗಳ ಪ್ರಕಾರ ಕಳೆದ ಮೂರ್ನಾಲ್ಕು ತಿಂಗಳ ಅಂತರದಲ್ಲಿ ಅವರು 12 ಕೆಜಿ ಇಳಿಸಿಕೊಂಡಿದ್ದಾರಂತೆ.

    ಇದನ್ನೂ ಓದಿ: ಪ್ರಭಾಸ್ ಜತೆ ಮದುವೆ ಆಗುವಾಸೆ; ನಟಿ ಕೃತಿ ಸನಾನ್…

    ಫೋಟೋಗಳನ್ನು ಶೇರ್​ ಮಾಡಿಕೊಳ್ಳುವುದರ ಜತೆಜತೆಗೆ, ‘ನಾವು ಹಾಕಿದ ಶ್ರಮಕ್ಕೆ ಪ್ರತಿಫಲ ಸಿಕ್ಕರೆ, ಆ ಸಂತೋಷವನ್ನು ವರ್ಣಿಸಲು ಅಸಾಧ್ಯ’ ಎಂದು ಖುಷ್ಬೂ ಬರೆದುಕೊಂಡಿದ್ದಾರೆ. ಅವರ ಈ ಫೋಟೋಗಳನ್ನು ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುವುದರ ಜತೆಗೆ, ಖುಷ್ಬೂ ಅವರ ಹೊಸ ಅವತಾರವನ್ನು ಮೆಚ್ಚಿಕೊಂಡಿದ್ದಾರೆ.

    ಬ್ರೇಕಿಂಗ್​: 2022ರ ಏಪ್ರಿಲ್​ 14ಕ್ಕೆ ‘ಕೆಜಿಎಫ್​ 2’ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts