More

    ವೈಯಕ್ತಿಕ ಕಾರಣದಿಂದ ಶಿಬಿರದಿಂದ ಹೊರಗುಳಿದ ಈಜುಪಟು ಖಾಡೆ..!

    ನವದೆಹಲಿ: ದುಬೈನಲ್ಲಿ ನಿಗದಿಯಾಗಿರುವ ಎರಡು ತಿಂಗಳ ರಾಷ್ಟ್ರೀಯ ಈಜು ತರಬೇತಿ ಶಿಬಿರದಿಂದ ಏಷ್ಯಾಡ್​ ಕಂಚಿನ ಪದಕ ವಿಜೇತ ವೀರ್​ಧವಳ್​ ಖಾಡೆ ಹೊರಗುಳಿಯಲಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ಖಾಡೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಭಾರತೀಯ ಈಜು ಫೆಡರೇಷನ್​ (ಎಸ್​ಎಫ್ ಐ) ತಿಳಿಸಿದೆ. ಟೋಕಿಯೊ ಒಲಿಂಪಿಕ್ಸ್​ ಅರ್ಹತೆ ಪಡೆಯಲು ಈ ಶಿಬಿರ ಭಾರತೀಯ ಈಜುಪಟುಗಳ ಪಾಲಿಗೆ ಮಹತ್ವ ಪಡೆದಿದೆ. 28 ವರ್ಷದ ಖಾಡೆ, ಕರ್ನಾಟಕದ ಶ್ರೀಹರಿ ನಟರಾಜ್​, ಕುಶಾಗ್ರ ರಾವತ್​ ಜತೆಗೂಡಿ ದುಬೈಗೆ ತೆರಳಬೇಕಿತ್ತು. ಖಾಡೆ ಮಹಾರಾಷ್ಟ್ರದಲ್ಲಿ ತಹಶೀಲ್ದಾರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಇದನ್ನೂ ಓದಿ: ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟ ವಿರಾಟ್ ಕೊಹ್ಲಿ

    ವೈಯಕ್ತಿಕ ಕಾರಣದಿಂದ ಶಿಬಿರದಿಂದ ಹೊರಗುಳಿದ ಈಜುಪಟು ಖಾಡೆ..!ವೈಯಕ್ತಿಕ ಕಾರಣಗಳಿಂದಾಗಿ ಶಿಬಿರದಿಂದ ಹೊರಗುಳಿಯುತ್ತಿದ್ದೇನೆ ಎಂದು ಖಾಡೆ ಹೇಳಿಕೊಂಡಿದ್ದಾರೆ. ಖಾಡೆ ನಿರ್ವಹಿಸುತ್ತಿರುವ ಇಲಾಖೆಯಿಂದ ಅನುಮತಿ ಸಿಕ್ಕಬಳಿಕವಷ್ಟೇ ದುಬೈಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಅನುಮತಿ ಸಿಗುವವರೆಗೂ ಶಿಬಿರದಿಂದ ಖಾಡೆ ದೂರ ಉಳಿಯಲಿದ್ದು, ಮತ್ತೊಮ್ಮೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಎಸ್​ಎಫ್ಐ ಪ್ರಧಾನ ಕಾರ್ಯದರ್ಶಿ ಮೊನಾಲ್​ ಚೋಂಕ್ಷಿ ತಿಳಿಸಿದ್ದಾರೆ. ಕೋಚ್​ ಎಸಿ ಜಯರಾಜನ್​, ಶ್ರೀಹರಿ ನಟರಾಜನ್​, ರಾವತ್​ ಮಂಗಳವಾರ ಮಧ್ಯಾಹ್ನ ದುಬೈನತ್ತ ಪ್ರಯಾಣ ಬೆಳೆಸಿದರು.

    ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್ ಪೂರೈಸಿದ ವಿಶ್ವದ ಮೊದಲ ವೇಗಿ ಜೇಮ್ಸ್​ ಆಂಡರ್‌ಸನ್

    ಇದೀಗ ರಾಷ್ಟ್ರೀಯ ಶಿಬಿರಕ್ಕೆ ಸಜನ್​ ಪ್ರಕಾಶ್​ ಕೂಡ ಹೊಸದಾಗಿ ಸೇರ್ಪಡೆಗೊಳ್ಳಲಿದ್ದಾರೆ. ಸದ್ಯ ಫ್ಲುಕೆಟ್​ನಲ್ಲಿ ಕಳೆದ ಫೆಬ್ರವರಿಯಿಂದ ತರಬೇತಿ ಪಡೆಯುತ್ತಿದ್ದಾರೆ. ಪ್ರದಿಪ್​ ಕುಮಾರ್​, ಫಿಸಿಯೋ ಜತೆಗೂಡಿ ಪ್ರಕಾಶ್​ ಮಂಗಳವಾರ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಕರೊನಾ ವೈರಸ್​ ಭೀತಿಯಿಂದ ಮಾರ್ಚ್​ 25 ರಿಂದ ಭಾರತದಲ್ಲಿ ಈಜುಕೊಳಗಳು ಬಂದ್​ ಆಗಿದ್ದವು.

    VIDEO: ಷಟ್ಲರ್​ ಪಿವಿ ಸಿಂಧು ವಿಶ್ವ ಚಾಂಪಿಯನ್​ ಪಟ್ಟಕ್ಕೆ ಒಂದು ವರ್ಷ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts