ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕತ್ವದ ‘ಕೆಜಿಎಫ್’ ಸಿನಿಮಾ ಸ್ಯಾಂಡಲ್ವುಡ್ ಇತಿಹಾಸದಲ್ಲಿ ಹೊಸ ದಾಖಲೆಗೆ ಕಾರಣವಾದ ಸಿನಿಮಾ. ಮಾಸ್ ಪ್ರೇಕ್ಷಕರನ್ನು ಸೆಳೆದಿದ್ದ ಈ ಸಿನಿಮಾ, ಭಾವುಕ ಆಡಿಯನ್ಸ್ಗೂ ಇಷ್ಟವಾಗಿತ್ತು. ನಾಯಕ ಮತ್ತು ಆತನ ತಾಯಿಯ ಸೆಂಟಿಮೆಂಟ್ ಸಿನಿಮಾದ ಹೈಲೈಟ್ಗಳಲ್ಲೊಂದು. ಅದರಲ್ಲೂ ಗರ್ಭದಿ ನನ್ನಿರಿಸಿ.. ಹಾಡು ದೊಡ್ಡ ಜನಪ್ರಿಯತೆ ಗಿಟ್ಟಿಸಿಕೊಂಡಿತ್ತು. ಈಗ ಅದೇ ಹಾಡು ಮತ್ತೆ ಸುದ್ದಿಯಲ್ಲಿದೆ.
ಇದನ್ನೂ ಓದಿ: ಮದರ್ಸ್ ಡೇ ಪ್ರಯುಕ್ತ ಅಮ್ಮನ ಫೋಟೋ ಹಂಚಿಕೊಂಡ ಸಿನಿಮಾ, ಕಿರುತೆರೆ ತಾರೆಯರು..
ಹೌದು, ತಾಯಿಯ ಬಗ್ಗೆ ಹೇಳುವ ಈ ಹಾಡನ್ನು ತಾಯಂದಿರ ದಿನಕ್ಕೆ ಅರ್ಪಣೆ ಮಾಡಿದೆ ಕೆಜಿಎಫ್ ತಂಡ. ತಾಯಂದಿರ ದಿನದ ನಿಮಿತ್ತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಆ ಹಾಡಿನ ಲಿಂಕ್ ಅನ್ನು ಮತ್ತೆ ಪೋಸ್ಟ್ ಮಾಡಿಕೊಂಡು, ಈ ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ ಎಂದಿದೆ.
ಇದನ್ನೂ ಓದಿ: ಅಮಿತಾಬ್ ಬಚ್ಚನ್ ನಟನೆಯ ಈ ಎರಡು ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆ
ಸದ್ಯ ಬಹುತೇಕ ಚಿತ್ರೀಕರಣದ ಕೆಲಸಗಳನ್ನು ಮುಗಿಸಿಕೊಂಡಿರುವ ‘ಕೆಜಿಎಫ್’ ಅಕ್ಟೋಬರ್ ವೇಳೆಗೆ ತೆರೆಗೆ ಬರಲಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿದೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಮತ್ತು ರವೀನಾ ಟಂಡನ್ ಸಹ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ.
ಈ ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರು ಇಲ್ಲ.https://t.co/9kUHCJ2gfS#HappyMothersDay
— Hombale Films (@hombalefilms) May 10, 2020
ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ನಾಣ್ಯ ನೀಡಿದ ಸ್ಯಾಂಡಲ್ವುಡ್ ನಿರ್ಮಾಪಕಿ