More

    ಕೊನೆಗೂ ಅಭಿಮಾನಿಗಳ ಆಸೆ ಈಡೇರಿಸಿದ ಯಶ್!

    ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಬಗ್ಗೆ ಎಲ್ಲೆಡೆ ಕುತೂಹಲ ಇದೆ. ಆದರೆ, ಆಂಧ್ರದಲ್ಲಿ ಮೊದಲ ಚಾಪ್ಟರ್​​ಗೂ ಹೆಚ್ಚಿನ ಬೇಡಿಕೆ ಇದೆ. ಅರೇ, ಈಗಾಗಲೇ ಅಮೆಜಾನ್​ ಪ್ರೈಂನಲ್ಲಿ ತೆಲುಗು ಭಾಷೆಯಲ್ಲಿಯೇ ಸಿನಿಮಾ ಇದೆಯಲ್ಲ ಮತ್ಯಾಕೆ ಬೇಡಿಕೆ? ವಿಷಯ ಇರುವುದೇ ಇಲ್ಲಿ. ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಕೆಜಿಎಫ್​ ತೆರೆಕಂಡಿದೆ. ಬಳಿಕ ಟಿವಿಗಳಲ್ಲೂ ಪ್ರಸಾರವಾಗಿದೆ. ಆದರೆ, ತೆಲುಗು ಅವತರಣಿಕೆಯೊಂದನ್ನು ಬಿಟ್ಟು! ಇದೀಗ ಸುದೀರ್ಘ ಎರಡು ವರ್ಷದ ಬಳಿಕ ತೆಲುಗು ಕಿರುತೆರೆಯಲ್ಲಿ ಕೆಜಿಎಫ್​ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.

    ಇದನ್ನೂ ಓದಿ: ವಿಜಯ್​ಗೆ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿದ ಕೀರ್ತಿ!

    ಟಿವಿ ಹಕ್ಕುಗಳ ವಿಚಾರದಲ್ಲಿ ನಿರ್ಮಾಪಕರ ಮತ್ತು ತೆಲುಗು ವಿತರಕರ ನಡುವಿನ ಮಾತುಕತೆ ಅಂತಿಮ ಆಗಿರಲಿಲ್ಲ. ಒಂದಷ್ಟು ಕಾರಣಕ್ಕೆ ಅದು ಮುಂದೂಡುತ್ತಲೇ ಬಂದಿತ್ತು. ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಪ್ರದರ್ಶನವಾದಾಗ, ತೆಲುಗಿನಲ್ಲಿ ಕೆಜಿಎಫ್​ ಸಿನಿಮಾ ಯವಾಗ ಎಂದು ಅಭಿಮಾನಿಗಳು ಜಾಲತಾಣದಲ್ಲಿ ಪ್ರಶ್ನೆಗಳ ಮಹಾಪೂರವನ್ನೇ ಹರಿಸಿದ್ದರು. ಆದರೆ, ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕೊನೆಗೆ ಆ ಒಂದು ಘಟನೆಯಿಂದ ಸಿನಿಮಾ ಬಿಡುಗಡೆಗೆ ಅವಕಾಶ ಸಿಕ್ಕಿತು.

    ಇದನ್ನೂ ಓದಿ: ಸುದೀಪ್​ ಆಯ್ತು ಈಗ ದರ್ಶನ್​ ಸರದಿ: ದಚ್ಚು ವಾಸವಿರೋ ಅಪಾರ್ಟ್​ಮೆಂಟ್​ನಲ್ಲಿ ಕರೊನಾ ಪತ್ತೆ

    ಕಳೆದ ತಿಂಗಳು ಆಂಧ್ರದಲ್ಲಿ ಅಲ್ಲಿನ ಲೋಕಲ್​ ವಾಹಿನಿಯಲ್ಲಿ ಕೆಜಿಎಫ್​ ಸಿನಿಮಾ ಪ್ರಸಾರ ಕಂಡಿತ್ತು. ಇದನ್ನು ಅಭಿಮಾನಿಯೊಬ್ಬ ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಸಮೇತ ಶೇರ್​ ಮಾಡಿ, ಚಿತ್ರತಂಡದ ಗಮನಕ್ಕೆ ತಂದಿದ್ದ. ತಂಡದ ಅನುಮತಿ ಪಡೆಯದೇ, ಪ್ರಸಾರ ಮಾಡಿದ್ದಕ್ಕೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಹೇಳಿಕೊಂಡಿತ್ತು. ಜತೆಗೆ ಶೀಘ್ರದಲ್ಲಿ ತೆಲುಗುನಲ್ಲಿ ಸಿನಿಮಾ ಪ್ರೀಮಿಯರ್ ಆಗಲಿದೆ ಎಂದೂ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಹೇಳಿದ್ದರು. ಅದರಂತೆ ಸ್ಟಾರ್ ಮಾ ವಾಹಿನಿಯಲ್ಲಿ ಪ್ರೋಮೋ ಬಿತ್ತರವಾಗುತ್ತಿದ್ದು, ಯಾವಾಗ ಪ್ರಸಾರ ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳಿಕೊಳ್ಳಲಿದೆ.

    PHOTOS| ಬರ್ತಡೇ ಖುಷಿಯಲ್ಲಿರೋ ಜೊತೆ ಜೊತೆಯಲಿ ಖ್ಯಾತಿಯ ಮೀರಾ ನಿಜ ಜೀವನದಲ್ಲೂ ತುಂಬಾ ಬೋಲ್ಡ್​ !

    ಶಾರೂಖ್​ಗೆ ರಾಷ್ಟ್ರ ಪ್ರಶಸ್ತಿ ಏಕೆ ಬರಲಿಲ್ಲ? ಅಭಿಮಾನಿಗಳು ಹೇಳ್ತಾರೆ ಕೇಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts