More

    ಮಂಡಳಿ ಸದಸ್ಯರಿಗೆ ಕಲ್ಯಾಣ ನಿಧಿಯಿಂದ ತಲಾ 15 ಸಾವಿರ

    ಲಾಕ್‌ಡೌನ್‌ನಿಂದ ಕನ್ನಡ ಚಿತ್ರರಂಗ ಬಂದ್ ಆಗಿದ್ದು, ಚಿತ್ರರಂಗಕ್ಕೆ ಸೂಕ್ತ ನೆರವು ಕೊಡಿಸಬೇಕು ಎಂದು ಇತ್ತೀಚೆಗೆ ಚಿತ್ರರಂಗದ ನಿಯೋಗವೊಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಈ ಮಧ್ಯೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ತನ್ನ ಸದಸ್ಯನೆರವಿಗೆ ಬಂದಿದ್ದು, ಕಲ್ಯಾಣ ನಿಧಿಯಿಂದ ಪ್ರತಿ ಸದಸ್ಯರಿಗೂ ತಲಾ 15 ಸಾವಿರ ರೂಪಾಯಿ ಘೋಷಿಸಿದೆ.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ಎಂಬ ಮೂರು ವಲಯಗಳಿದ್ದು, 1400ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಈ ಮೂರೂ ವಲಯಗಳ ಸದಸ್ಯರಿಗೆ ಕಲ್ಯಾಣ ನಿಧಿಯಿಂದ 15 ಸಾವಿರ ರೂಪಾಯಿಗಳನ್ನು ಕೊಡುವುದಕ್ಕೆ ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

    ಈ ಕುರಿತು ಮಾತನಾಡುವ ಮಂಡಳಿ ಅಧ್ಯಕ್ಷ ಜಯರಾಜ್, ‘ನಮ್ಮ ಮಂಡಳಿಯ ಸದಸ್ಯರಿಗೆ ಕಲ್ಯಾಣ ನಿಧಿಯಿಂದ ಹಣ ಕೊಡುವ ಬಗ್ಗೆ ತೀರ್ಮಾನವಾಗಿದೆ. ಪ್ರಮುಖವಾಗಿ ಪ್ರತೀ ವರ್ಷ ಸದಸ್ಯತ್ವ ನವೀಕರಿಸಿರಬೇಕು. ಈಗಾಗಲೇ ಕಲ್ಯಾಣ ನಿಧಿಯಿಂದ ಹಣ ಪಡೆದವರಿಗೆ ಈ ಅವಕಾಶವಿಲ್ಲ. ಮಿಕ್ಕವರಿಗೆ ಅಪ್ಲೈ ಮಾಡಬಹುದು. ಎಷ್ಟು ಜನ ಅರ್ಜಿ ಸಲ್ಲಿಸುತ್ತಾರೋ ನೋಡಿಕೊಂಡು, ಹಣವನ್ನು ವರ್ಗಾಯಿಸುತ್ತೇವೆ’ ಎನ್ನುತ್ತಾರೆ ಜಯರಾಜ್.

    ಇರು ಅಪ್ಪಂಗೆ ಹೇಳ್ತಿನಿ ಅಂತ ಹರಿಪ್ರಿಯಾ ಹೇಳ್ತಿರೋದು ಯಾರಿಗೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts