More

    ಎಸ್ಸೆಸ್ಸೆಲ್ಸಿ ಪರೀಕ್ಷೆ ಬಳಿಕ ಮಗಳ ಮೊಬೈಲ್ ಪಡೆಯಲು ಹೋದ ಮಹಿಳೆಗೆ ಹೆಡ್​ ಮಾಸ್ಟರ್​ನಿಂದ ಶಾಕ್!​ ​

    ತಿರುವನಂತಪುರಂ: ಮಹಿಳೆಯೊಬ್ಬರು ಸತತ 8 ತಿಂಗಳು ಹೋರಾಡಿದರೂ ತಮ್ಮ ಮೊಬೈಲ್​ ಫೋನ್​ ಹಿಂಪಡೆಯುವಲ್ಲಿ ಯಶಸ್ವಿಯಾಗದೆ, ಶಾಲಾ ಹೆಡ್​ ಮಾಸ್ಟರ್​ನಿಂದ ಅವಮಾನಕ್ಕೆ ಒಳಗಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಕಣ್ಣೂರು ಜಿಲ್ಲೆಯ ನಿವಾಸಿ ಸಮೀರಾ ಕಮಲ್​ 2019 ಅಕ್ಟೋಬರ್​​ ತಿಂಗಳಲ್ಲಿ ತನ್ನ ಮೊಬೈಲ್​ ಅನ್ನು 15 ವರ್ಷದ ಮಗಳು ಶಹ್ಜಾ ಬ್ಯಾಗ್​ನಲ್ಲಿ ಇಟ್ಟಿದ್ದರು. ಅಂದು ಶಾಲಾ ಯೂತ್​ ಫೆಸ್ಟಿವಲ್​ ಆದ್ದರಿಂದ ಮಗಳು ಹೇಗಿದ್ದರೂ ತಡವಾಗಿ ಬರುತ್ತಾಳೆ ಎಂದು ವಿಳಂಬವಾದರೆ ಮಾಹಿತಿ ನೀಡುವಂತೆ ಮಗಳಿಗೆ ತಾಯಿ ಸಮೀರಾ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೆ ಮೊಬೈಲ್​ ನೋಡಿದ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಅದನ್ನು ವಶಕ್ಕೆ ಪಡೆದು ಹೆಡ್​ ಮಾಸ್ಟರ್​ ಕೈಗೆ ನೀಡಿದ್ದರು. ಇದನ್ನೂ ಓದಿ: VIDEO| ವಿಮಾನ ಲ್ಯಾಂಡ್​ ಆಗುವ ಪ್ರಯತ್ನದಲ್ಲಿದ್ದಾಗ ಒಟ್ಟಿಗೆ ಬಡಿಯಿತು 3 ಸಿಡಿಲು: ಮುಂದಾಗಿದ್ದು ಅಚ್ಚರಿ…!

    ಮರುದಿನ ಸಮೀರಾ ಮೊಬೈಲ್​ ಪಡೆಯಲು ಶಾಲೆಗೆ ಹೋದರು. ಆದರೆ ಹೆಡ್​ ಮಾಸ್ಟರ್​ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ಬಳಿಕ ನೀಡುವುದಾಗಿ ಭರವಸೆ ನೀಡಿ ಕಳುಹಿಸಿದ್ದರು. ಅಲ್ಲದೇ ಇದು ನಮ್ಮ ಶಾಲೆಯ ನಿಯಮ ಹೌದು ಎಂದಿದ್ದರು. ಅದನ್ನು ಒಪ್ಪಿಕೊಂಡು ಹಿಂತಿರುಗಿದ ಸಮೀರಾ 8 ತಿಂಗಳು ಸುಮ್ಮನಿದ್ದದ್ದರು. ಪರೀಕ್ಷೆ ಮುಗಿಯುತ್ತಿದ್ದಂತೆ ಮೊಬೈಲ್​ ಪಡೆಯಲು ಮರಳಿ ಶಾಲೆಗೆ ಹೋದರು. ಆದರೆ, ಮೊಬೈಲ್​ ನೀಡದೆ ಅವರನ್ನು ಅವಮಾನಿಸಿ, ಏನಾದರೂ ಮಾಡಿಕೋ ಎಂದು ಸವಾಲು ಹಾಕಿ ವಾಪಸ್​ ಕಳುಹಿಸಿದ್ದಾರೆ.

    ಹತ್ತು ಸಾವಿರ ರೂ. ಮೊಬೈಲ್​ ತಾನೇ ಹೋಗಲಿ ಬಿಡು ಎನ್ನುವುದಕ್ಕೆ ಸಮೀರಾ ಅವರು ಮತ್ತೆ ಖರೀದಿಸುವಷ್ಟು ಶಕ್ತರಾಗಿಲ್ಲ. ಟೈಲರ್​ ಆಗಿ ಕೆಲಸ ಮಾಡುವ ಸಮೀರಾ ಬರುವ ಅಲ್ಪಸ್ವಲ್ಪ ಹಣವನ್ನು ಉಳಿಸಿ ಮೂವರು ಮಕ್ಕಳನ್ನು ಬೆಳಿಸಿ, ಕೂಡಿಟ್ಟಿದ್ದ ಹಣದಲ್ಲಿ ಮೊಬೈಲ್​ ಕೊಂಡುಕೊಂಡಿದ್ದರು. ಇದೀಗ ಆನ್​ಲೈನ್​ ಕ್ಲಾಸ್​ ನಡೆಯುತ್ತಿರುವುದರಿಂದ ಆಕೆಯ ಮಗನಿಗೆ ಮೊಬೈಲ್​ ಅವಶ್ಯಕತೆ ಇದೆ. ಹೀಗಾಗಿ ಯಾವುದೇ ಆಯ್ಕೆಗಳಿಲ್ಲದೇ ಪೊಲೀಸರನ್ನು ಸಂಪರ್ಕಿಸಿದಾಗ ಅವರಿಂದಲೂ ಒಳ್ಳೆಯ ಸ್ಪಂದನೆ ದೊರೆಯಲಿಲ್ಲ. ಬಳಿಕ ಮಾಧ್ಯಮವೊಂದನ್ನು ಸಂಪರ್ಕಿಸಿದಾಗ ವರದಿಯಿಂದ ಎಚ್ಚೆತ್ತು ಮೊಬೈಲ್​ ಮರಳಿಸುವುದಾಗಿ ಹೆಡ್​ ಮಾಸ್ಟರ್​ ಭರವಸೆ ನೀಡಿದ್ದರು. ಆದರೆ ಈವರೆಗೂ ಈಡೇರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮೇ ತಿಂಗಳಲ್ಲಿ ಜಾಗತಿಕವಾಗಿ ಹೆಚ್ಚು ಡೌನ್​ಲೋಡ್​ ಆದ ಆ್ಯಪ್​ ಯಾವುದು? ಭಾರತವೇ ಮೊದಲು…!

    ಸಮಸ್ಯೆ ಇಲ್ಲಿಗೆ ಮುಗಿಯದೇ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧವೇ ಸಾಕಷ್ಟು ಕೆಟ್ಟ ಕಮೆಂಟ್​ಗಳು ಬರಲು ಆರಂಭವಾಯಿತಂತೆ. ಇದರಿಂದ ಗಾಬರಿಗೊಂಡ ಸಮೀರಾ ಇದರ ಹಿಂದೆ ಶಾಲಾ ಆಡಳಿತ ಮಂಡಳಿಯ ಕೈವಾಡ ಇರಬಹುದೆಂದು ಶಂಕಿಸಿ ಕಣ್ಣಪುರಂ ಪೊಲೀಸ್​ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ. ಆದರೆ, ಈವರೆಗೂ ಮೊಬೈಲ್​ ಫೋನ್​ ಮಾತ್ರ ಪಡೆದಿಲ್ಲ. ಕಳೆದ 8 ತಿಂಗಳ ಮೊಬೈಲ್​ ಡಾಟಾವನ್ನು ಶಾಲೆ ದುರ್ಬಳಕೆ ಮಾಡಿಕೊಂಡಿರಬಹುದೆಂಬ ಶಂಕೆಯು ವ್ಯಕ್ತವಾಗಿದ್ದು, ನಿರಂತರವಾಗಿ ಶಾಲೆಗೆ ಅಲೆದರು ಮೊಬೈಲ್​ ಮಾತ್ರ ಇನ್ನು ಮರಳಿಲ್ಲ ಎಂದು ನೋವು ತೊಡಿಕೊಂಡಿದ್ದಾರೆ. (ಏಜೆನ್ಸೀಸ್​)

    ಕೆಲಸ, ಆದಾಯವಿಲ್ಲದೇ ದೇಶದ ಅರ್ಧದಷ್ಟು ಜನ ತಿಂಗಳಿಗೂ ಹೆಚ್ಚು ಕಾಲ ಬದುಕಲಾರರು: ಸ್ಪೋಟಕ ವರದಿ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts