More

    ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!

    ಕೊಚ್ಚಿ: ಶಾಲಾ ಬಾಲಕನಿಂದ ಲೈಂಗಿಕ ಕಿರುಕುಳ ಅನುಭವಿಸಿದ ಘಟನೆ ಕುರಿತು 23 ವರ್ಷದ ಮಹಿಳೆಯೊಬ್ಬಳು ಬಿಡುಗಡೆ ಮಾಡಿದ ವಿಡಿಯೋವೊಂದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. 13 ರಿಂದ 14 ವರ್ಷದ ಬಾಲಕ ಡ್ರಾಪ್​ ಬೇಕೆಂದು ಮಹಿಳೆಯ ಸ್ಕೂಟರ್​ ಏರಿ ಅನುಚಿತವಾಗಿ ವರ್ತಿಸಿದ ಆರೋಪ ಮಾಡಲಾಗಿದೆ.

    ಸಾಮಾನ್ಯವಾಗಿ ಅಪರಿಚಿತರಿಗೆ ಡ್ರಾಪ್​ ನೀಡುವುದಿಲ್ಲ. ಅದರಲ್ಲೂ ಭಾರತದಂತಹ ದೇಶದಲ್ಲಿ ನೀವು ಮಹಿಳೆಯಾಗಿದ್ದರೆ ಯಾರಿಗೂ ಡ್ರಾಪ್​ ಕೊಡಲು ಬಯಸುವುದಿಲ್ಲ. ಆದರೆ, ಇಬ್ಬರು ಶಾಲಾ ಬಾಲಕರು ತುಂಬಾ ಮಳೆಯಾಗಿದ್ದರಿಂದ ಡ್ರಾಪ್​ ಕೇಳಿದರು. ವೈತಿಲ ಮೊಬಿಲಿಟಿ ಹಬ್​ ಬಳಿಯ ಶಾಲೆಯಿಂದ ಬಂದ ಬಾಲಕರಿಬ್ಬರು ಸ್ಕೂಟರ್​ನಲ್ಲಿ ಬರ್ತಿದ್ದ ನನ್ನನ್ನು ತಡೆದು ಡ್ರಾಪ್​ ಕೇಳಿದರು. ಮಳೆಯಾಗಿದ್ದರಿಂದ ಮಾನವೀಯತೆ ದೃಷ್ಟಿಯಿಂದ ಅದರಲ್ಲೂ ಮಕ್ಕಳು ತಾನೇ ಅಂದುಕೊಂಡು ಇಬ್ಬರನ್ನು ಸ್ಕೂಟರ್​ನಲ್ಲಿ ಹತ್ತಿಸಿಕೊಂಡೆ ಎಂದು ಹೆಸರೇಳಲು ಇಚ್ಛಿಸದ ಮಹಿಳೆ ಹೇಳಿಕೊಂಡಿದ್ದಾಳೆ.

    ಇದನ್ನೂ ಓದಿರಿ: ಹಿರಿಯರ ಒಪ್ಪಿಗೆ ಪಡೆದು ಪ್ರೇಮವಿವಾಹವಾದ ನವಜೋಡಿಗೆ ಮೂರೇ ತಿಂಗಳಲ್ಲಿ ಕಾದಿತ್ತು ಬಿಗ್​ ಶಾಕ್​!

    ಓರ್ವನನ್ನು ಡ್ರಾಪ್​ ಮಾಡಿದೆ. ಇನ್ನೊಬ್ಬ ಹುಡುಗ ಶಾಲೆಯ ಬಗ್ಗೆ ತನ್ನೊಂದಿಗೆ ಮಾತನಾಡುತ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಮಾತಿನ ಧಾಟಿಯನ್ನು ಬದಲಾಯಿಸಿ, “ಒಂದು ವೇಳೆ ನಾನು ನಿಮ್ಮನ್ನು ಅನುಚಿತವಾಗಿ ಮುಟ್ಟಿದರೆ” ಎಂದು ಕೇಳಿದ, ಇದರಿಂದ ನನಗೆ ಆಘಾತವಾಗ ಸ್ಕೂಟರ್​ ನಿಯಂತ್ರಣ ಕಳೆದುಕೊಳ್ಳುವ ಹಂತಕ್ಕೆ ಹೋಗಿದ್ದೆ. ಏನೆಂದು ಹೇಳಿದೆ ಎಂದು ಬಾಲಕನನ್ನು ಪ್ರಶ್ನಿಸುವ ಮುನ್ನ ಹೇಗೋ ನಿರ್ವಹಿಸಿಕೊಂಡು ಸ್ಕೂಟರ್​ ಪಾರ್ಕ್​ ಮಾಡಿದೆ.

    ಏನು ಹೇಳಿದೆ ಎಂದು ಮತ್ತೊಮ್ಮೆ ಹೇಳಲು ಬಾಲಕ ತಡವರಿಸಿದ. ನೀನು ಏನು ಹೇಳಿದೆ ಎಂದು ನನಗೆ ಕೇಳಿಸಿತು. ಆದರೆ, ಅದನ್ನು ನನಗೆ ನಂಬಲು ಆಗುತ್ತಿಲ್ಲ ಎಂದು ಹೇಳಿದೆ. ತಕ್ಷಣ ಅಲ್ಲಿಂದ ಹೊರಹೋಗುವಂತೆ ಹೇಳಿದೆ. ನಂತರ ನನ್ನ ಮುಂದಿನ ಪ್ರಯಾಣದುದ್ದಕ್ಕೂ ಬಾಲಕನ ಹೇಳಿಕೆ ತುಂಬಾ ಕಾಡಿತು ಎಂದಿರುವ ಮಹಿಳೆ, 13 ರಿಂದ 14 ವರ್ಷದ ಬಾಲಕನಿಗೆ ಆ ಪದಗಳು ಹೇಗೆ ಬರಲು ಸಾಧ್ಯ? ಅಂತಹ ಆಲೋಚನೆಗಳು ಹೇಗೆ ರೂಪುಗೊಳ್ಳುತ್ತದೆ? ಇಂತಹ ಆಲೋಚನೆಗಳು ರೂಪುಗೊಂಡಿದ್ದೇ ಆದಲ್ಲಿ, ಅದನ್ನು ಇನ್ನೊಬ್ಬರ ಬಳಿ ಕೇಳಬಹುದೇ? ಎಂಬುದೇ ನನ್ನ ಪ್ರಶ್ನೆಯಾಗಿದೆ ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ.

    ಇದನ್ನೂ ಓದಿರಿ: ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

    ಮಾತು ಮುಂದುವರಿಸಿದ ಮಹಿಳೆ, ಬಾಲಕನ ಶಾಲೆ, ಕುಟುಂಬ ಮತ್ತು ಆತನ ಸುತ್ತಮುತ್ತ ಇರುವ ಎಲ್ಲರನ್ನು ಹಾಗೂ ಬೆಳೆದ ವಾತಾವರಣವನ್ನು ದೂರಿದ್ದಾರೆ. ಮಹಿಳೆಯೊಂದಿಗೆ ಯಾವ ರೀತಿ ವರ್ತಿಸಬೇಕೆಂದು ಬಾಲಕನಿಗೆ ತಿಳಿಸಿಕೊಡಿ ಎಂದು ಸಲಹೆ ನೀಡಿದ್ದಾರೆ. ಏನು ಬೇಕು? ಏನು ಬೇಡ? ಯಾವುದು ಸರಿ? ಮತ್ತು ಯಾವು ಸರಿಯಲ್ಲ? ಎಂದು ಯೋಚಿಸುವಂತೆ ಮಕ್ಕಳನ್ನು ಬೆಳೆಸಿ, ಶಾಲೆಯಲ್ಲಿ ಸೂಕ್ತವಾದ ಲೈಂಗಿಕ ಶಿಕ್ಷಣ ಇಲ್ಲ. ಶಾಲೆಗಳಲ್ಲಿ ಇಂತಹ ಘಟನೆಗಳು ನಡೆದಾಗ ಸಂತ್ರಸ್ತ ಹೆಣ್ಣು ಮಕ್ಕಳನ್ನೆ ದ್ವೇಷಿಸುತ್ತಾರೆ. ಇದರಿಂದಾಗಿ ಹುಡುಗರು ತಾವು ಹೆಚ್ಚೆಂಬ ಭಾವನೆ ಬರುತ್ತದೆ. ಏನು ಮಾಡಿದರು ಏನು ಆಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಇಂತಹ ವರ್ತನೆಗಳಿಂದ ಸಮಾಜಕ್ಕೆ ತೊಂದರೆಯಾಗಲಿದ್ದು, ಸಂತ್ರಸ್ತರನ್ನೇ ದೂರುವುದರಿಂದ ಅತ್ಯಾಚಾರ ಸಂಸ್ಕೃತಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ನಾವು ನೋಡುವ ಸಿನಿಮಾಗಳು ಸಹ ಲಿಂಗಭೇದಭಾವವನ್ನು ವೈಭವೀಕರಿಸುತ್ತದೆ ಎಂದು ದೂರುಗಳ ಸುರಿಮಳೆಗೈದಿದ್ದಾರೆ.

    ವಿಡಿಯೋ ಹೊರಬರುತ್ತಿದ್ದಂತೆ ಮಹಿಳೆಯನ್ನು ಬೆಂಬಲಿಸಿ ಅನೇಕ ಕಾಮೆಂಟ್​ಗಳು ಹರಿದುಬರುತ್ತಿವೆ. ಇನ್ನು ಕೆಲವರು ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಬೇಕೆಂಬ ಒಮ್ಮತದ ಅಭಿಪ್ರಾಯ ಕೇಳಿಬರುತ್ತಿದೆ. ಸರ್ಕಾರ ತಕ್ಷಣ ಲೈಂಗಿಕ ಶಿಕ್ಷಣವನ್ನು ಶಾಲೆಗಳಲ್ಲಿ ತೆರೆಯಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ. ಇನ್ನು ಕೆಲವರು ಸಂತ್ರಸ್ತೆಯನ್ನೇ ದೂರಿದ್ದು, ಮಹಿಳೆ ತನಗಾಗಿ ತೊಂದರೆಗಳನ್ನು ಆಹ್ವಾನಿಸಿ, ಇಡೀ ವಿಷಯವನ್ನು ಪ್ರಚಾರಕ್ಕಾಗಿ ಬಹಿರಂಗ ಮಾಡಿದ್ದಾಳೆಂದು ದೂರಿದ್ದಾರೆ. ಆದರೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯ ಧ್ವನಿಗೆ ಬೆಂಬಲವಾಗಿ ನಿಂತಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿರಿ: ಮೊದಲ ರಾತ್ರಿಯೇ ನೀವು ನನಗೆ ಬೇಡ ಎಂದುಬಿಟ್ಟಳು- ನರಕವಾಗಿರುವ ಬದುಕನ್ನು ಹೇಗೆ ಸಹಿಸಲಿ?

    ಬೆಳ್ಳಂಬೆಳಗ್ಗೆ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್​ ತೆರೆದು ನೋಡಿದ ಪೊಲೀಸರಿಗೆ ಕಾದಿತ್ತು ಬಿಗ್​ ಶಾಕ್​!​

    ಕೆಲಸದಾಳಿನ ಜತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! ಕಸದ ರಾಶಿಯಲ್ಲೇ ಶವವನ್ನು ಹೂತಿಟ್ಟ ಜೋಡಿ

    ಸೂಸೈಡ್​ ನಾಟಕವಾಡಿ ಮದುವೆಯಾದ; ಹೆಂಡತಿಯ ಒಡವೆಯನ್ನೆಲ್ಲ ಕದ್ದು ಓಡಿಹೋದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts