More

  Covid19 ಸೋಂಕು ಹರಡುತ್ತಿದ್ದಾಗ್ಯೂ ಸಾಮೂಹಿಕ ಪ್ರಾರ್ಥನೆ: ಕೆಥೋಲಿಕ್ ಫಾದರ್ ಪೊಲೀಸ್ ಕಸ್ಟಡಿಗೆ

  ತಿರುವನಂತಪುರ: ರಾಜ್ಯದ ಉದ್ದಗಲಕ್ಕೂ Covid19 ಸೋಂಕು ಹರಡುತ್ತಿದ್ದಾಗ್ಯೂ ಸಾಮೂಹಿಕ ಪ್ರಾರ್ಥನೆ ನಡೆಸಿದ ಕೆಥೋಲಿಕ್ ಫಾದರ್ ಒಬ್ಬರನ್ನು ಚಾಲಕ್ಕುಡಿ ಪೊಲೀಸರು ಸೋಮವಾರ ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

  ತ್ರಿಶ್ಶೂರ್​ ಜಿಲ್ಲೆಯ ಚಾಲಕ್ಕುಡಿ ಎಂಬಲ್ಲಿನ ನಿತ್ಯ ಸಹಾಯ ಮಾತಾ ಚರ್ಚ್​ನ ಫಾದರ್ ಪಿ.ಪೌಲಿ ನೂರು ಜನರನ್ನು ಸೇರಿಸಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಿದ್ದರು. ಕರೊನಾ ವೈರಸ್ ಸೋಂಕು ಹರಡದಂತೆ ರಾಜ್ಯದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದ ಕಾರಣ, ಮಾಹಿತಿ ಅರಿತು ಕೂಡಲೇ ಸ್ಥಳಕ್ಕೆ ಹೋದ ಪೊಲೀಸರು ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

  ಕೂಡಲೇ ಅವರಿಗೆ ಸ್ಯಾನಿಟೈಸರ್ ಕೊಟ್ಟು ಕೈ ಶುಚಿಗೊಳಿಸುವಂತೆ ಪೊಲೀಸರು ಸೂಚಿಸಿದ್ದು, ನಂತರವೇ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಅಲ್ಲದೆ, ಆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ 100 ಜನರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಸದ್ಯ ಕರೊನಾ ಸೋಂಕು ವ್ಯಾಪಿಸುತ್ತಿರುವ ಕಾರಣ ಕೆಲವು ಮಾರ್ಗಸೂಚಿಗಳನ್ನು ಪಾಲಿಸಲು ಎಲ್ಲ ನಾಗರಿಕರಿಗೂ ಸೂಚಿಸಲಾಗಿದೆ. ಅದರ ಉಲ್ಲಂಘನೆಯನ್ನು ಫಾದರ್ ಮಾಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರಿಗೆ ಈ ಪ್ರಕರಣದಲ್ಲಿ ಜಾಮೀನು ಸಿಗಲಿದೆ ಎಂದು ಚಾಲಕ್ಕುಡಿ ಪೊಲೀಸರು ತಿಳಿಸಿದ್ದಾರೆ.

  ಚರ್ಚ್​ನ ಫಾದರನ್ನು ತಾವು ಬಂಧಿಸಿದ್ದು ಎಂಬುದು ಪೊಲೀಸರಿಗೆ ತಡವಾಗಿ ಅರಿವಾಗಿದ್ದು, ಸಂಬಂಧಪಟ್ಟವರನ್ನೆಲ್ಲ ಸಮಾಧಾನಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)

  ಮನೆಯಲ್ಲೇ ಇರಿ #StayHome – ಹೊರಗೆ ಬರಬೇಡಿ; ಒಳಗಿದ್ದರೂ ಅಂತರ ಕಾಯ್ದುಕೊಳ್ಳಬೇಕು ಎಂದು ಮತ್ತೊಮ್ಮೆ ಎಚ್ಚರಿಸಿದ ಪ್ರಧಾನಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts