More

    ಈಗ ಕೇರಳದಲ್ಲೊಬ್ಬ ಮೋದಿ ಬೇಕು!

    ಕೇರಳದಲ್ಲಿ ಅತ್ಯಾಚಾರವಿದ್ದರೂ, ಅದರ ವಿರುದ್ಧದ ಹೋರಾಟವೂ ಇದೆ. ಆರೆಸ್ಸೆಸ್​ನ ಎಷ್ಟು ಜನ, ನಿರಪರಾಧಿ ಪ್ರಜೆಗಳು ಎಷ್ಟು ಮಂದಿ ಪ್ರಾಣಾರ್ಪಣೆ ಮಾಡಿದ್ದಾರೋ ಲೆಕ್ಕ ತಿಳಿಯದು. ಇದೊಂದು ಬಗೆಯ ಸ್ವಾತಂತ್ರ್ಯ ಹೋರಾಟ. ಬಂಗಾಳದಲ್ಲೂ ಇದೇ ಕಥೆ.

    ಈಗ ಕೇರಳದಲ್ಲೊಬ್ಬ ಮೋದಿ ಬೇಕು!ಇದು 1971ರಲ್ಲಿ ನಡೆದ ಒಂದು ಘಟನೆ. ಕೇರಳದ ತಲಚ್ಚೇರಿ-‘ತಲಶ್ಶೇರಿ’ಯಲ್ಲಿ. ಆಗ ಅಲ್ಲಿ ಒಂದು ಕೋಮುಗಲಭೆ ನಡೆದಿತ್ತು. ಮುಸ್ಲಿಂರು ಹಿಂದೂ ಸಂಘಟನೆಗಳಿಂದ ಪ್ರತಿರೋಧ ಎದುರಿಸುತ್ತಿದ್ದರು. ಪ್ರತಿರೋಧ ಎಂದರೆ? ಆ ಮುನ್ನ ಅಲ್ಲಿ ಮುಸ್ಲಿಂರು ಹಿಂಸಾಚಾರ ಎಬ್ಬಿಸಿದ್ದರಲ್ಲವೆ? ಈಗ ‘ಮಾಡಿದ್ದುಣ್ಣೋ ಮಹಾರಾಯ’ ಎಂಬಂತೆ ಅವರು ನೊಂದ ಸಮಾಜದ ಕೋಪವನ್ನು ಎದುರಿಸುವುದಿತ್ತು. ಅಲ್ಲಿ ಕಮ್ಯುನಿಷ್ಟರು ಮುಸ್ಲಿಂರ ಸಹಾಯಕ್ಕೆ ಒದಗಿ, ನಾಯಕರು ಆರಿಸಿದ ಕೆಲವರನ್ನು ಪ್ರಸಿದ್ಧ ಮಸೀದಿಗಳ ರಕ್ಷಣೆಗೆ ನಿಯೋಜಿಸಿದ್ದರು. ಏಕೆಂದರೆ ಹಿಂಸೆ ಶುರುಮಾಡಿದವರೆಲ್ಲ ಅಲ್ಲಿ ಅಡಗಿದ್ದರು. ಇದು ಕಾಶ್ಮೀರ, ಹೈದರಾಬಾದ್, ಮುಂಬೈ, ಮಧ್ಯಪ್ರದೇಶಗಳ ಎಂದೆಂದಿನ ಕಥೆ- ಹಿಂಸೆ ಶುರುಮಾಡಿ ರಕ್ಷಣೆಗೆ ಮಸೀದಿಗಳಲ್ಲಿ ಅವಿತುಕೊಳ್ಳುವುದು!

    ಪಾಕಿಸ್ತಾನ ಪ್ರಚೋದಿತ ಖಲೀಸ್ತಾನೀ ಸಿಖ್ಖರು, ಬಿಂದ್ರನ್​ವಾಲೆ ಅಂಥವರು ಸ್ವರ್ಣಮಂದಿರದಲ್ಲಿ ಅಡಗಿರಲಿಲ್ಲವೇ? ಇನ್ನು ಹಿಂದೆ ಭಾರತದ ವಿಭಜನೆಯ ಕಾಲದಲ್ಲಿಯೂ ನಡೆದದ್ದು ಹೀಗೆಯೇ ಅಲ್ಲವೇ? ಹಿಂಸೆ ಶುರುಮಾಡಿ, ಪ್ರತೀಕಾರಕ್ಕೆ ಹೆದರಿ, ‘ಪವಿತ್ರ’ ಎಂಬ ಸ್ಥಾನಗಳಲ್ಲಿ ಅಡಗಿ ಬಿಡುವುದು! ಇರಲಿ. ತಲಚ್ಚೇರಿಯಲ್ಲಿ ಇಂಥ ಪುಂಡರ ರಕ್ಷಣೆಗೆ, ‘ಮಸೀದಿಯ ರಕ್ಷಣೆಗೆ’ ನಿಲ್ಲಿಸಲ್ಪಟ್ಟವರು ಒಬ್ಬ ಸಿಪಿಐ ನಾಯಕಮಣಿ. ಅವರ ಹೆಸರು ವಿಜಯನ್ ಕೊರಾನ್ ಅಂತ. ಹಾಗೂ ಎಂ.ವಿ.ರಾಘವನ್ ಎಂಬ ಇನ್ನೊಬ್ಬ ಕಾಮ್ರೇಡ್. ಇವರು ಆರೆಸ್ಸೆಸ್ಸನ್ನು ಬಯ್ಯುತ್ತ, ಕೂಗಾಡುತ್ತ, ತಮ್ಮವರನ್ನು ಗುಂಪು ಕಟ್ಟಿಕೊಳ್ಳುತ್ತ, ಮಸೀದಿಯ ದ್ವಾರಗಳಲ್ಲಿ ನಿಂತು, ಹಿಂದೂವಿರೋಧಿ ಕೂಗುಗಳನ್ನು ಹಾಕುತ್ತಿದ್ದರು. ಅವರ ಕೈಯಲ್ಲಿ ಧ್ವನಿವರ್ಧಕಗಳಿದ್ದವು. ಜನರಿಗೆ ‘ಶಾಂತವಾಗಿರಿ’, ‘ಹೆದರಬೇಡಿ’ ಎಂಬ ಸಮಾಧಾನ ಕೂಗುಗಳು ಆ ಮೈಕ್​ಗಳಲ್ಲಿ ಹೊರಬರುತ್ತಿದ್ದವು. ಹೇಗಿದೆ? ಹಿಂಸೆ ಎಬ್ಬಿಸಿ, ಹಿಂಸಕರನ್ನು ರಕ್ಷಿಸುತ್ತ, ಇತರರಿಗೆ ‘ಶಾಂತವಾಗಿರಿ’ ಅಂತ ಕೂಗಿದರೆ, ಪೊಲೀಸರಿಂದ ತಪ್ಪಿಸಿಕೊಳ್ಳುವುದು, ಪತ್ರಿಕೆಯ ಟೀಕಾವರದಿಗಳಿಂದ ದೂರ ಉಳಿಯುವುದು, ‘ತಾವು ತಪ್ಪಿತಸ್ಥರಲ್ಲ’ ಎಂದು ಜಗತ್ತಿಗೆ ಮೊಳಗುವುದು ಕಾಮ್ರೇಡರ ಎಂದೆಂದಿನ ತಂತ್ರ.

    ದೊಂಬಿ ಆಯಿತು. ಕಲ್ಲು, ಸೋಡಾಬಾಟಲು, ಇಟ್ಟಿಗೆ ತೂರಾಟದಲ್ಲಿ ಯುಕೆ ಕುಂಜಿರಾಮನ್ ಎಂಬ ಹಿಂದೂ ಯುವಕ ಮೃತಪಟ್ಟ. ಹಿಂಸಾಚಾರ ನಿಲ್ಲದೆ ಬಹುಕಾಲ ನಡೆಯಿತು. ಈತ ಸತ್ತದ್ದು 1972 ಜನವರಿ 4 ರಂದು. ಗಲಭೆ ಶುರುವಾದದ್ದು 1971 ಡಿಸೆಂಬರ್​ನಲ್ಲಿ. ಪೊಲೀಸರು ಗುಪ್ತಚರ ಇಲಾಖೆಯಿಂದ ವರದಿ ಪಡೆದು ಗಲಭೆ ಆರಂಭಿಕದಲ್ಲಿ ಒಬ್ಬರಾದ ಈ ವಿಜಯನ್ ಕೊರಾನ್ ಎಂಬಾತನನ್ನು ಬಂಧಿಸಿದರು. ಅವರೇ ಈಗಿನ ವಿಜಯನ್ ಪಿಣರಾಯಿ ಎಂಬ ಕೇರಳದ ಮುಖ್ಯಮಂತ್ರಿ! ಹೆಸರು ನೋಡಿ-ಈತ ಮುಸ್ಲಿಂ! ಆಗ ತಲಚ್ಚೇರಿಯ ಎಸ್.ಪಿ. ಆಗಿದ್ದವರು ಈಗಿನ ಅಜಿತ್ ಕುಮಾರ್ ದೋವಲ್ ಎಂಬ ದಕ್ಷ ಅಧಿಕಾರಿ! ಅವರು ಕೇರಳ ಕೇಡರ್​ನಿಂದ ಐಪಿಎಸ್ ಪಾಸ್ ಆದ ಒಬ್ಬ ಖ್ಯಾತರು. (ಸಂಶಯವಿದ್ದರೆ ವಿಕಿಪೀಡಿಯಾದಲ್ಲಿ ದಾಖಲೆ ನೋಡಿಕೊಳ್ಳಿ) ಈ ಅಧಿಕಾರಿ ಎರಡು ದಿನ ಮುಂಚೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದರು.

    ವಿಜಯನ್ ಸಾಹೇಬರನ್ನು ಕಾನ್​ಸ್ಟೆಬಲ್​ಗಳು ಹಿಡಿದಾಗ ತಪ್ಪಿಸಿಕೊಂಡು ಓಡಿದರು. ಇದೆಲ್ಲ ಸಿನಿಮಾದಂತೆ ಕಾಣುವುದಿಲ್ಲವೆ? ಎಸ್​ಪಿ ಸಾಹೇಬರು ತಾವೇ ಓಡಿಹೋಗಿ ಈ ವ್ಯಕ್ತಿಯನ್ನು ಹಿಡಿದೇಬಿಟ್ಟರು.

    ಸುತ್ತಲ ಹಳ್ಳಿ ಜನ, ಕಾಮ್ರೇಡರ ದೊಂಬಿ, ಪೊಲೀಸರ ವಿರುದ್ಧ, ಕಾಮ್ರೇಡರ ಪರ ಘೋಷಣೆಗಳನ್ನು ಕೂಗಲಾರಂಭಿಸಿದರು. ದೋವಲ್ ಧೃತಿಗೆಡಲಿಲ್ಲ. ಕರ್ತವ್ಯ ಬಿಡಲಿಲ್ಲ. ವಿಜಯನ್​ರನ್ನು ಜೈಲಿನಲ್ಲಿ ಕೂಡಿ ಹಾಕಲಾಯ್ತು. ದೋವಲ್ ಠಾಣೆಯೊಳಗೆ ಹೋಗಿ, ಬಾಗಿಲನ್ನು ಒಳಗಿನಿಂದ ಮುಚ್ಚಿ ಅನಾಮತ್ತಾಗಿ ಕೊರಳು ಹಿಡಿದು ಒಂದಡಿ ಎತ್ತಿ ಕೆಳಗೆ ಒಗೆದರು. ಬಳಿಕ ಹೇಳಿದರು-‘ಇದೇ ಕೊನೆ. ನಿನ್ನ ಮೇಲಿನವರಿಗೆ ಹೇಳು. ಇಂಥದ್ದು ಮತ್ತೆ ನಡೆಯಬಾರದು. ಈಗ ರಿವಾಲ್ವರ್​ನಲ್ಲಿ ಗುಂಡು ಶಾಂತವಾಗಿದೆ. ಮುಂದೆ ಹಾಗಿರುವುದಿಲ್ಲ’. ವಿಜಯನ್ ಬಿಡುಗಡೆ ಆಯಿತು.

    ಅಲ್ಲಿ ದೋವಲ್ ಇರುವ ತನಕ ಕಾಮ್ರೇಡರು ಬಾಲ ಬಿಚ್ಚಿರಲಿಲ್ಲ. ಆದರೇನು ಆರೇ ತಿಂಗಳಲ್ಲಿ ದೋವಲರ ಎತ್ತಂಗಡಿ ಆಯಿತು! ಮಾಡಿದವರು ಆಗಿನ ಕೇರಳ ಮುಖ್ಯಮಂತ್ರಿ ಕಾಮ್ರೇಡ್ ಅಚ್ಯುತನ್ ಮೆನನ್. ಆ ನಂತರ ಹಳೆಯ ಚಾಳಿ! ವಿಜಯನ್ ಕೊರಾನ್ ಹೆಸರು ಆರೆಸ್ಸೆಸ್​ನ ವಡಿಕ್ಕಲ್ ರಾಮಕೃಷ್ಣನ್ ಕೊಲೆ ಪ್ರಕರಣದಲ್ಲಿ ಹಿಂದೆಯೂ (1969 ಏಪ್ರಿಲ್ 28) ಕೇಳಿಬಂದಿತ್ತು! ಪೊಲೀಸರು ದಾಖಲೆಗಳನ್ನು ಅಲ್ಲಿ ನೋಡುವುದಕ್ಕೂ, ಅಲ್ಲಿ ಈ ವಿಜಯನ್ ಈಗ ಬರೀ ಪಿಣರಾಯಿ ಆಗಿದ್ದಾರೆ. ಈಗ ಎನ್​ಐಎ ಮುಖ್ಯಸ್ಥರ ವಿಚಾರಣೆಯಲ್ಲಿ ದೋವಲ್ ಸಾಹೇಬರ ಕೈಗೆ ಈ ವಿಜಯನ್ ಕೊರಾನ್ ಪಿಣರಾಯಿ ಸಿಕ್ಕಿಬಿದ್ದಿದ್ದಾರೆ! ಇವರ ಜೊತೆಗೆ ಐಎಎಸ್ ಅಧಿಕಾರಿ ಶಿವಶಂಕರನ್ ಎಂಬುವವರು ಕೂಡ. ಇದು ಪ್ರಕೃತ.

    ಈಗ ಇದೆಲ್ಲ ನೆನಪಾಗುವುದು ಕೇರಳದ ಚೀನಾ ನಂಟಿನ ದೆಸೆಯಿಂದ, ಬಂಗಾರ ಕಳ್ಳಸಾಗಣೆ ಹಗರಣ ಸಂದರ್ಭದಲ್ಲಿ. ಕೇರಳ ಈಗ ಅಧಿಕೃತವಾಗಿ ಚೀನಾದ ಒಂದು ಭಾಗವೋ, ಒಂದು ವಸಾಹತುವೋ, ಕಾರಸ್ಥಾನವೋ, ಕಾರ್ಯಾಚರಣೆಯ ನೆಲೆಯೋ ಆಗಿದೆಯೇ? ನನಗೆ ಸಂಶಯ, ಖಾತ್ರಿಯತ್ತ ಸಾಗಿದೆ. ಕಾಮ್ರೇಡರು ರಾಷ್ಟ್ರವಿರೋಧಿ ಶಕ್ತಿಗಳಲ್ಲಿ ಈಗ ಪ್ರಬಲ ಮೂರನೆಯ ಆಯಾಮ-ಇಸ್ಲಾಮಿ, ಈಸಾಯಿ- ಬಿಟ್ಟರೆ. ಅಥವಾ ಕಾಂಗ್ರೆಸನ್ನು ಸೇರಿಸಿದರೆ. ಯುಡಿಎಫ್, ಎಲ್​ಡಿಎಫ್​ಗಳಲ್ಲಿ ಬರೀ ಅಕ್ಷರ ವ್ಯತ್ಯಾಸ! ದ್ರೌಪದಿ ಮಾನಕ್ಕೆ ಕೈಹಾಕಿದ ಕರ್ಣ, ಯುದ್ಧದಲ್ಲಿ ಶ್ರೀಕೃಷ್ಣಾರ್ಜುನರ ಕೈಗೇ ಸಿಕ್ಕಿದಂತೆ, ಈಗ ವಿಜಯನ್ ಕೊರಾನರು ಮತ್ತೆ ದೋವಲ್ ಕೈಗೇ ಸಿಕ್ಕಿರುವುದು ಇತಿಹಾಸದ ಕರ್ಮಸಿದ್ಧಾಂತದ ಸಾಕ್ಷಿಯಾಗಿದೆ.

    ಮೋದಿಯವರು ಚೀನಾವನ್ನು ಮಟ್ಟಹಾಕಬೇಕಾದರೆ, ಈ ಕೇರಳದ ಕಾಮ್ರೇಡರನ್ನು, ಬಂಗಾಳದಲ್ಲಿ ಅವರ ಅಪರಾವತಾರವಾದ ಮಮತಾ ಬ್ಯಾನರ್ಜಿ ಅವರನ್ನು ವಿಚಾರಿಸಬೇಕಾಗಿದೆ. ಕಳ್ಳಹಣ, ಬಂಗಾರ, ವಿದೇಶಿ ಒತ್ತಾಸೆ, ಹಿಂಸಾಚಾರ, ಹಿಂದೂದಮನ ಶಕ್ತಿ, ಪ್ರಚಾರ ಮಾಧ್ಯಮಗಳ ಹಿಡಿತ ಇರುವ ತನಕ ಈ ರಾಜ್ಯಗಳು ಜರಾಸಂಧನ ಶರೀರದ ಎರಡು ಹೋಳುಗಳು. ನಿಮಗೆ ಚೀನೀಯರ ಎದುರು ಹೋರಾಟಕ್ಕೆ ಇಸ್ರೇಲ್, ಜಪಾನ್ ಸಹಾಯ ಸಿಕ್ಕೀತು! ಕಾಂಗ್ರೆಸು, ಕಾಮ್ರೇಡರ ಅಸಹಕಾರ, ಒಳದ್ರೋಹ ನಿಲ್ಲುವುದಿಲ್ಲ. ಮೊದಲು ಇವರನ್ನು ವಿಚಾರಿಸಿ, ಕೇರಳ, ಪಶ್ಚಿಮ ಬಂಗಾಳವನ್ನು ‘ಕಾಂಗ್ರೆಸ್​ವುುಕ್ತ, ಕಾಮ್ರೇಡ್​ವುುಕ್ತ’ ಮಾಡುವುದು ಆದ್ಯತೆ.

    ನಾನು ವೈದಿಕ, ಆದರೂ ಗೊಡ್ಡನಲ್ಲ! ಬ್ರಾಹ್ಮ ಕ್ಷಾತ್ರಗಳು ಒಗ್ಗೂಡಿದ ಅಗಸ್ಱ, ವಸಿಷ್ಠ, ಜಮದಗ್ನಿ, ಅತ್ರಿ, ಇವರು ನನಗೆ ರೋಲ್ ಮಾಡೆಲ್. ಇತ್ತೀಚೆಗೆ ಒಂದು ತಮಿಳು ಚಿತ್ರವನ್ನು ಯೂಟ್ಯೂಬ್​ನಲ್ಲಿ ನೋಡುತ್ತಿದ್ದೆ. ‘ಶಿವದಾಸ್’ ಅಂತ ಹೆಸರು. ಅದು ಕಮ್ಯುನಿಸ್ಟರ ಜಾಲ, ಜಾತಕ, ರೀತಿ, ರಿವಾಜುಗಳನ್ನು ಬಹಿರಂಗ ಮಾಡುತ್ತದೆ. ಮೂಲದಲ್ಲಿ ಮಲಯಾಳಿ ಚಿತ್ರ. ಹೀರೋ ಪಾತ್ರ ಮಮ್ಮುಟಿ ಎಂಬ ಖ್ಯಾತ ನಟನದ್ದು. ಕಾಮ್ರೇಡರು ಪೊಲೀಸನ್ನು ಹೇಗೆ ಬಳಸುತ್ತಾರೆ, ಜನರನ್ನು ಹೇಗೆ ಶೋಷಿಸುತ್ತಾರೆ, ವಂಚಿಸುತ್ತಾರೆ, ಹೇಗೆ ಹಣ ಶೇಖರಿಸುತ್ತಾರೆ, ಎಂಥ ಮುಖವಾಡಗಳನ್ನು ಧರಿಸುತ್ತಾರೆ, ಹಿಂದೂಗಳು ಹೇಗೆ ದನಿ ಸತ್ತವರಾಗುತ್ತಾರೆ, ಅಪರಾಧಿಗಳು ಹೇಗೆ ಪಾರಾಗುತ್ತಾರೆ ಎಂಬುದಕ್ಕೆಲ್ಲ ಇದು ಕನ್ನಡಿ ಹಿಡಿಯುತ್ತದೆ.

    ಇನ್ನೊಂದು ಚಿತ್ರ ‘ಕ್ರೖೆಮ್ ಫೈಲ್’ ಎಂಬುದು. ಕ್ರೖೆಸ್ತ ಚರ್ಚುಗಳ ವಿಲಾಸಿ, ಕಾಮಲೀಲೆ, ವಂಚನೆ, ನನ್ ಎಂಬ ಸಂನ್ಯಾಸಿನಿಯರ ಶೋಷಣೆ ಇಂಥದೆಲ್ಲ ಈ ಚಿತ್ರದ ಮೂಲಕ ಬಯಲಾಗಿದೆ. ಈ ಚಿತ್ರದ ಹೀರೋ ಸುರೇಶ್ ಗೋಪಿ! ಇಂಥ ಚಿತ್ರಗಳು ಮಲಯಾಳಿ ಭಾಷೆಯಲ್ಲಿ ಬಹಳ ಇವೆ. ಕನ್ನಡದಲ್ಲಿ ಒಂದಾದರೂ ಏಕೆ ಇಲ್ಲ ಎಂಬುದಕ್ಕೆ ನನ್ನಲ್ಲಿ ಉತ್ತರವಿಲ್ಲ. ಕೇರಳದಲ್ಲಿ ಅತ್ಯಾಚಾರವಿದ್ದರೂ, ಅದರ ವಿರುದ್ಧದ ಹೋರಾಟವೂ ಇದೆ. ಆರೆಸ್ಸೆಸ್​ನ ಎಷ್ಟು ಜನ, ನಿರಪರಾಧಿ ಪ್ರಜೆಗಳು ಎಷ್ಟು ಜನ ಪ್ರಾಣಾರ್ಪಣೆ ಮಾಡಿದ್ದಾರೋ ಲೆಕ್ಕ ತಿಳಿಯದು. ಇದೊಂದು ಬಗೆಯ ಸ್ವಾತಂತ್ರ್ಯ ಹೋರಾಟ. ಬಂಗಾಳದಲ್ಲೂ ಇದೇ ಕಥೆ. ಕರ್ನಾಟಕದ ಹಿಂದಿನ ಒಂದು ಸರ್ಕಾರದಲ್ಲೂ ಆಮದಾದ ಕೇರಳಿಯ ಕಾಮ್ರೇಡರ, ಮತಾಂಧರ ಪಾತ್ರ ಇತ್ತು- ಇಂಥ ಕೊಲೆಗಳಲ್ಲಿ ಎಂಬ ಮಾತು ಇತ್ತು. ಇದನ್ನೂ ಓದಿ: ರಾಜಧರ್ಮ-ರಾಜನೀತಿ: ಕಾಯಕವೇ ಕೈಲಾಸ ಎಂಬ ಕರ್ಮಯೋಗ ಜಾರಿಯಾಗಲಿ

    ಕೇರಳದಲ್ಲಿ ಮೊದಲ ಕಾಮ್ರೇಡ್ ಸರ್ಕಾರ ಬಂದಾಗ, ಮುಖ್ಯಮಂತ್ರಿ ಇಎಂಎಸ್ ನಂಬೂದ್ರಿಪಾದರು ಅಸೆಂಬ್ಲಿಗೆ ಸೈಕಲ್ ಹತ್ತಿ ಬಂದರು- ಸರಳತೆ, ನಿರಾಡಾಂಬರತೆಯ ಢೊಂಗೀ ಪ್ರದರ್ಶನಕ್ಕಾಗಿ! ಆಮೇಲೆ? ಕೊಳ್ಳೆ ಹೊಡೆಯುವುದು, ಜನರನ್ನು ಪಕ್ಷಕ್ಕೆ ಸೆಳೆಯಲು ಇದು ಮಹಾತಂತ್ರ. ಮುಖ್ಯಮಂತ್ರಿಯಾಗಿದ್ದ ವಿ.ಎಸ್.ಅಚ್ಯುತಾನಂದನ್ (ಕಾಮ್ರೇಡರಲ್ಲಿ ನಾಸ್ತಿಕ್ಯವೇ ಧರ್ಮ) ಅವರು ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಲಕ್ಷ ದೀಪ ಹಚ್ಚಲು, ಹರಕೆ ತೀರಿಸಲು ಬಂದದ್ದು ವಿವಾದವಾಯಿತು. ಪತ್ರಕರ್ತೆ ಒಬ್ಬಳು ಕೇಳಿದಳು-‘ನೀವು ನಾಸ್ತಿಕರು! ಈ ದೀಪ ಹಚ್ಚಲು ಹೇಗೆ ಬಂದಿರಿ?’. ಅವರು ಹೇಳಿದರು, ‘ನಾನು ಹುಟ್ಟುವ ಮುಂಚೆ ನನ್ನ ತಾಯಿ ಹಣ ಕಟ್ಟಿ ಹಾಗೇ ಹರಕೆ ಹೊತ್ತಿದ್ದರು. ನನಗಾಗಿ ಅಲ್ಲ ಅವಳಿಗಾಗಿ ಬಂದೆ’ ಅಂತ! ಇದು ಗೊಸುಂಬೆ ವೃತ್ತಿ, ಢೋಂಗೀತನ!

    ತಮಿಳುನಾಡಿನ ಡಿಎಂಕೆ ಧುರೀಣ ಕರುಣಾನಿಧಿ, ಮಧುರೆಯ ರಾಜೇಂದ್ರ ಚೋಳ ಕಟ್ಟಿಸಿದ ಸಾವಿರ ವರ್ಷ ಹಳೆಯ ದೇವಾಲಯದ ಉದ್ಘಾಟನೆಗೆ ಹಿಂಬಾಗಿಲಿನಿಂದ ಬಂದದ್ದು ಟಿವಿಯಲ್ಲಿ ನೋಡಿದೆ. ‘ನೀವು ನಾಸ್ತಿಕರು? ಈ ಉತ್ಸವದಲ್ಲಿ ಹೇಗೆ ಅನ್ವಯ?’ ಎಂಬ ಪ್ರಶ್ನೆಗೆ ಕರುಣಾನಿಧಿ ಉತ್ತರ-‘ಇದು ಸಾಮಾಜಿಕ ಕಾರ್ಯಕ್ರಮ! ನಾನೇನು ಭಕ್ತನಾಗಿ ಬರಲಿಲ್ಲ’ ಅಂತ.

    ಕೇರಳದ ಕಮ್ಯುನಿಸ್ಟರು ಚೀನಾವನ್ನು ಬಿಡಲಾರರು; ಹಿಂದೂತ್ವವನ್ನು ಕಟ್ಟಿಕೊಳ್ಳಲಾರರು, ಒಪ್ಪಲಾರರು! ಅವರ ದಾರಿಯಲ್ಲೇ ಅವರಿಗೆ ಬಾಗಿಲು ತೋರುವ ಮೋದಿ ಈಗ ಕೇರಳಕ್ಕೆ ತುರ್ತಾಗಿ ಬೇಕಾಗಿದ್ದಾರೆ. ದೇವಾಲಯಗಳ ಬೀಡಿಗೆ ಎಂಥ ದುಸ್ಥಿತಿ! ಯಾರ ಮನೆಯಲ್ಲಿ ಶ್ರಾದ್ಧವಾದರೂ, ಹಿರಣ್ಯಕಶಿಪು ತನಗೇ ಪಿಂಡ ಹಾಕಬೇಕೆಂದು ಆಜ್ಞೆ ಮಾಡಿದ್ದನೆಂದು ಶ್ರೀಭಾಗವತ ಹೇಳುತ್ತದೆ- ಹಿಪಾಕ್ರಸಿ! ಆ ದಾರಿಯಲ್ಲಿ ಕಾಮ್ರೇಡರು! ಇವರಿಗೆ ಪಿಂಡ ಹಾಕುವವರು ಯಾರು?

    ರಾಜಧರ್ಮ- ರಾಜನೀತಿ: ನಮಗೆ ನಿಜವಾಗಿಯೂ ಸ್ವಾಭಿಮಾನ ಇದೆಯೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts