More

    ರಾಜಧರ್ಮ-ರಾಜನೀತಿ: ಕಾಯಕವೇ ಕೈಲಾಸ ಎಂಬ ಕರ್ಮಯೋಗ ಜಾರಿಯಾಗಲಿ

    ‘ಸೋಷಿಯಲಿಸಂ’ ಎಂಬ ಪ್ರಣಾಲಿಯೇ ಯಾವುದೇ ದೇಶದ ಆರ್ಥಿಕನಾಶದ ಮೂಲ, ರಾಷ್ಟ್ರಕಂಟಕ, ಸಮಗ್ರತೆಯ ನಾಶಕ, ಜನಕ್ಷೋಭಾಕಾರಕ ಮೂಲ ಎಂಬುದನ್ನು ಸೋವಿಯೆತ್ ಒಕ್ಕೂಟದ ಅಪಪ್ರಯೋಗದಿಂದ ಅರಿಯುವುದಿದೆ. ಅಂದು ನೆಹ್ರೂಗೆ ಮಾಡೆಲ್ ಆದ ಪ್ರಯುಕ್ತ ಇಲ್ಲೂ ಅನರ್ಥ ತಂದದ್ದು ಇಲ್ಲಿ ಲಿಂಕ್, ಕೊಂಡಿ, ಶೃಂಖಲೆ.

    ರಾಜಧರ್ಮ-ರಾಜನೀತಿ: ಕಾಯಕವೇ ಕೈಲಾಸ ಎಂಬ ಕರ್ಮಯೋಗ ಜಾರಿಯಾಗಲಿನಾನು ಅಧಿಕೃತ ಸರ್ಕಾರಿ ವಕ್ತಾರನೋ, ಆರ್ಥಿಕ ತಜ್ಞನೋ, ವಿಮರ್ಶಕನೋ ಅಲ್ಲದಿರಬಹುದು. ಆದರೆ ಅಭಿಪ್ರಾಯಗಳನ್ನು ಓದುತ್ತೇನೆ, ತುಲನೆ ಮಾಡುತ್ತೇನೆ, ಬೇರೆ ಬೇರೆ ದೃಷ್ಟಿಕೋನಗಳಿಂದ ತಾಳೆ ಹಿಡಿದು ನೋಡುತ್ತೇನೆ. ರಾಜಕೀಯ ಚಿಂತನೆ ಸರಿಯಿರದೆ, ಅರ್ಥಚಿಂತನೆ ದಾರಿ ತಪ್ಪುತ್ತದೆ. ಹಾಗೆ 70 ವರ್ಷಗಳಿಂದ ದಾರಿ ತಪ್ಪಿಸುವ ಕಾರ್ಯಗಳೇ ಇಲ್ಲಿ ನಡೆದಿವೆ. ಒಂದು ಟಿ.ವಿ. ಚರ್ಚಾಕೂಟದಲ್ಲಿ ಯಾರು ಯಾರೋ ಪಾರ್ಟಿಗಳ ಪರವಾಗಿ ಅಬ್ಬರಿಸಿದರು. ಅಬ್ಬರಿಸಬೇಕಾದ್ದೇ-‘Paid advertise’ ಎಂದ ಮೇಲೆ ಹಾಡಿಗೆ ತಕ್ಕ ತಾಳದಂತೆ ಕುಣಿಯುವ ನರ್ತಕ ನಟ ವಿಟ ಗಾಯಕರು ಯಾವ ಪಾರ್ಟಿಯಲ್ಲಿಲ್ಲ? ಹಾಗೆ. ಒಬ್ಬರು ಮಾತ್ರ ನಿಜ ಅರ್ಥಶಾಸ್ತ್ರಜ್ಞರು, ಕಾರ್ಪೊರೇಟ್ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದ ಖ್ಯಾತಿಯ ಮೋಹನದಾಸ್ ಪೈ ಎಂಬ ಮಹನೀಯರು ಹೇಳಿದರು-‘ಈ ಅಂಕಿ-ಸಂಖ್ಯೆ ಎಲ್ಲ ಕೃತಕ ತಯಾರಿಯದು. ನಂಬಲು ಅನರ್ಹ. ಏನೂ ಅಂಥದು ಆಗಿಲ್ಲ. ಬರೀ ಬೊಬ್ಬೆ’ ಅಂತ.

    ಇಂದಿರಾ ಗಾಂಧಿ ಕಾಲದಿಂದ ರಾಜೀವರವರೆಗೂ ದೇಶದ ಆರ್ಥಿಕ ನಿರ್ವಹಣೆಯ ಬೆಂಬಲವಾಗಿ ನಿಂತಿದ್ದವರು ಹಾಜಿ ಮಸ್ತಾನ್, ಅವರ ಸುಪುತ್ರ ಲಾಲಾ (‘ಡಾನ್’) ಎಂಬಂತಹ ಕಳ್ಳ ಸರಕುಸಾಗಣೆಯ ಧುರೀಣ-Smuggler ಖ್ಯಾತಿಯ ಅರ್ಥನಾಶಕರು! ಇಂಥವರ ಕಾಂಗ್ರೆಸ್ಸು ಈಗ ರಾಷ್ಟ್ರವೇ ಆರ್ಥಿಕನಾಶದಲ್ಲಿದೆ ಎಂದು ಬೊಬ್ಬಿಡುತ್ತಿದ್ದಾರೆ ಎಂಬುದು ಈಗ ಬಹಿರಂಗ. ಕಾಂಗ್ರೆಸ್ಸು ಮೊದಲು ಈ ವರದಿಯನ್ನು ನಿರಾಕರಿಸಿತು! ನಂತರ ಕಾಂಗ್ರೆಸ್ ನಾಯಕರೇ ಚಿತ್ರಸಾಕ್ಷ್ಯ ನೋಡಿ, ಬೇರೆ ಮೂಲಗಳಿಂದಲೂ ಒಪ್ಪಿ ಖಾತ್ರಿ ಮಾಡಿದರು. ನರಸಿಂಹರಾಯರು ದೇಶದ ಬಂಗಾರನಿಧಿಯನ್ನು ವಿಶ್ವಬ್ಯಾಂಕಿಗೆ ಅಡವಿಟ್ಟು ಸಾಲ ಪಡೆದು, ದೇಶದ ಕುಸಿದ ಪರಿಸ್ಥಿತಿ ನಿಭಾಯಿಸಿದರಲ್ಲ? ಆ ಹಿಂದಣ ಪರಿಸ್ಥಿತಿಗೆ, ಕುಸಿತಕ್ಕೆ, ನಾಶಕ್ಕೆ ಕಾರಣವಾದವರು ಕಾಂಗ್ರೆಸ್ ಪರಂಪರೆಯ ಪ್ರಧಾನಿಗಳೇ ಅಲ್ಲವೇ? ಹೇಳಿ.

    ಇಂದಿರಾ ಎಕನಾಮಿಕ್ ಎಕ್ಸ್​ಪರ್ಟ್ ಇದ್ದರೆ? ರಾಜೀವರೋ? ನೆಹ್ರೂಗೆ ಏನು ಅರ್ಥ ತಿಳಿವಳಿಕೆ ಇತ್ತು? ಟಿ.ಟಿ.ಕೃಷ್ಣಮಾಚಾರಿಯ ಕಾಲದಲ್ಲೇ ಅಲ್ಲವೆ Mundhra Scandal ನಡೆದದ್ದು? ಆಮೇಲೆ ಹರ್ಷದ್ ಮೆಹ್ತಾ ಎಂಬ ವಂಚಕನ ಆಟ ನಡೆದದ್ದೂ ಕಾಂಗ್ರೆಸ್ ಕಾಲದಲ್ಲೇ ಅಲ್ಲವೇ? ಲಲಿತ್ ಮೋದಿ, ಇನ್ನಿತರರದೊ? ವಂಚಕರು ಕಾಂಗ್ರೆಸ್ ಆಶ್ರಿತರು, ಆಶ್ರಯದಾತರು ಎಂದ ಬಳಿಕ, ದೇಶದ ಆರ್ಥಿಕ ಶೋಷಣೆಯ ಮೂಲ, ಬೆಳವಣಿಗೆ, ವಿಷಫಲ ಎಲ್ಲ ಈ ಕಾಂಗ್ರೆಸ್ಸಿಗೇ ಸೇರಬೇಕು. ಹಠಾತ್ತನೆ ಮೋದಿ ಅಧಿಕಾರಕ್ಕೆ ಬಂದ ಒಂದು ದಶಕದಲ್ಲೇ ಎಲ್ಲ ಸರಿ ಮಾಡಲು ಸಾಧ್ಯವಿಲ್ಲ. ಆದರೆ ವಂಚಕರು ಕೊರಳಕುಣಿಕೆ ತಪ್ಪಿಸಿಕೊಳ್ಳಬೇಕಾಗಿದೆಯಲ್ಲ?

    ಮೋಹನದಾಸ್ ಪೈ ಅವರ ವಿಶ್ಲೇಷಣೆಯ ಮತ್ತೊಂದು ಅಂಶ-ಅನೇಕರು ಗಮನಿಸಲಾರದ್ದು-ಬಿಡಿಸಿ ನಯವಾಗಿ ನಿವೇದಿಸುತ್ತೇನೆ. ಇಂದು ಅವ್ಯವಸ್ಥೆಗೆ ಕಾಂಗ್ರೆಸ್ಸಿನ ‘ಸೋಷಿಯಲಿಸಂ’, ಎಲ್ಲ ಎಡಪಂಥೀಯ ಚಿಂತನೆ, ಜಾರಿ, ಅವ್ಯವಹಾರಿಕ ಕಾರ್ಯಕ್ರಮಗಳೂ, ಅಗ್ಗದ-Cheap, Populist- ಎಂಬ ಅನೀತಿಗಳೂ ಕಾರಣ. ಆದುದರಿಂದ ಈಗ ಆಮೂಲಾಗ್ರ ಬದಲಾವಣೆ ಬೇಕು. ಅದಕ್ಕೆ ಅಡ್ಡ ಈಗ ನಡೆಯುವ ಬಗೆ ಬಗೆಯ ಚಳವಳಿಗಳು ಇತ್ಯಾದಿ.

    ‘ಸೋಷಿಯಲಿಸಂ’ ಎಂಬ ಪ್ರಣಾಳಿಯೇ ಯಾವುದೇ ದೇಶದ ಆರ್ಥಿಕನಾಶದ ಮೂಲಕ, ರಾಷ್ಟ್ರಕಂಟಕ, ಸಮಗ್ರತೆಯ ನಾಶಕ, ಜನಕ್ಷೋಭಾಕಾರಕ ಮೂಲ ಎಂಬುದನ್ನು ಸೋವಿಯತ್ ಒಕ್ಕೂಟದ ಅಪಪ್ರಯೋಗದಿಂದ ಅರಿಯುವುದಿದೆ. ಅಂದು ನೆಹ್ರೂಗೆ ಮಾಡೆಲ್ ಆದ ಪ್ರಯುಕ್ತ ಇಲ್ಲೂ ಅನರ್ಥ ತಂದದ್ದು ಇಲ್ಲಿ ಲಿಂಕ್, ಕೊಂಡಿ, ಶೃಂಖಲೆ. ‘ಸೋವಿಯತ್’ ಕಲ್ಪನೆ ಪುಡಿಪುಡಿಯಾದುದನ್ನು ಇಲ್ಲವೆನ್ನುತ್ತೀರಾ? ಅದು ಇತಿಹಾಸ; 80-90 ವರ್ಷದ ‘ವೃತ್ರಾಸುರನ’ ವಧೆಯಾದ ಮೇಲೆಯೇ ಈಗ ಪುತಿನ್ ಅವರಿಂದ ರಷ್ಯಾ ಪುಟಿದೇಳುತ್ತಿದೆ. ಕಾಣುತ್ತಿದೆಯಲ್ಲ? ಅಲ್ಲಿ ಆ ಮೂಲದ ಮುನ್ನ ನಡೆದುದೆಲ್ಲ ವಂಚನೆ, ಬರೀ Advertisementಗಳ ಮೂಲಕ, ರಷ್ಯಾದಲ್ಲಿ ‘ಹಾಲೂ ಜೇನೂ’ ರಸ್ತೆಯಲ್ಲಿ ಹರಿದಾಡುತ್ತಿದೆ. Gold and Honey flowing in street-ಎಂಬ ಭ್ರಮೆಯನ್ನು Soviet Land ಪತ್ರಿಕೆ, ‘ಪ್ರಾವ್ಡಾ’ ಮುಂತಾದವು ಸೃಷ್ಟಿಸಿ, ಲೆನಿನ್, ಸ್ಟಾಲಿನ್, ಬ್ರೆಸ್ಹೀವ್, ಕೋಸಿಗಿನ್ ಮುಂತಾದವರು ರಷ್ಯಾವನ್ನು ಹಾಳು ಮಾಡಿದರು. ದಂಡಯಾತ್ರೆ ಮಾಡಿ ಯುರೋಪಿನ ಅನೇಕ ರಾಷ್ಟ್ರಗಳನ್ನು ಕಬಳಿಸಿದರು.

    ಸತ್ಯ ಬಯಲಾದಾಗ, ‘ಸೋವಿಯತ್’ ಕಲ್ಪನೆಯ ಆರ್ಥಿಕ ದಿವಾಳಿತನವೂ ಬಯಲಾಯ್ತು. ‘ಸೋಷಿಯಲಿಸಂ’ಗೆ ತೀಲತರ್ಪಣ ಬಿಟ್ಟ ಮೇಲೆಯೇ ರಷ್ಯಾ ಮೇಲೆದ್ದಿತು. ಕಬಳಿತ ರಾಷ್ಟ್ರಗಳೂ ಬದುಕಲು ಸಾಧ್ಯವಾಯ್ತು.

    ಭಾರತದಲ್ಲಿಯೋ? ರಷ್ಯಾದಲ್ಲಿ ಮಳೆಯಾದರೆ ಇಲ್ಲಿ ಕೊಡೆ ಹಿಡಿಯುವ ನಮ್ಮ ‘ಕಾಮ್ರೇಡರು’-ಅಂದಿನ ವಿ.ಕೆ.ಕೃಷ್ಣ ಮೆನನ್, ಹಕ್ಸಾರ್, ಕುಮಾರಮಂಗಲಂ ಅಂಥವರಿಂದ ಹಿಡಿದು,-ಪ್ರಕಟ ಕಮ್ಯುನಿಸ್ಟರು ಹಿಂದೆ ಇರುತ್ತ ಆಗ ಆಮೇಲೂ ತಮಟೆ ಬಾರಿಸುವ ಕುಳಗಳು ಅನಂತಮೂರ್ತಿ, ಕಾರ್ನಾಡ್​ರಿಂದ ಹಿಡಿದು ರಾಮಚಂದ್ರ ಗುಹಾ ಆದ್ಯಂತ ಎಲ್ಲರೂ ಇಲ್ಲಿ ಬೊಬ್ಬಿಡುತ್ತಲೇ ಬಂದರು. ಇವರೇ ಅರ್ಬನ್ ನಕ್ಸಲ್ಸ್ ಆಗಿರುವವರು.

    ದುರ್ನೀತಿಗೆ ಪ್ರಚಾರ ನೀಡುವವರು ಇವರಾರಿಗೆ ಅರ್ಥಶಾಸ್ತ್ರದ ಪರಿಚಯ ಇದೆ? ಹೇಳಿ. ಕರ್ನಾಟಕದ ದುರ್ನೀತಿ ಧುರೀಣರು ಅರಸು, ಅವರ ಸರ್ಕಾರವನ್ನೂ ಹಿಡಿದು ಅವರಿಂದ populist ಕಾರ್ಯಕ್ರಮ ನಡೆಸಿ, ಅರ್ಥಶೋಷಣೆ ಮಾಡಿಸಿದರು. ಅವರ ಹಿಂದೆ ಇಂದಿರಾ ಇದ್ದು-‘ಟ್ವೆಂಟಿ ಪಾಯಿಂಟು ಪ್ರೋಗ್ರಾಂ’ ಎಂಬ ನಾಟಕ ನಡೆಯಿತಲ್ಲ? ಅಲ್ಲಿ ಶೋಷಣೆ ಇರಲಿಲ್ಲವೆ? ಬೇರೆನಿತ್ತು? ಸರ್ಕಾರಕ್ಕೆ ವೋಟು ಹಿಡಿಯಲು ಬೊಕ್ಕಸ ಲೂಟಿಗೆ ಇಂಥ ಕಾರ್ಯಕ್ರಮಗಳು ನಡೆದು, ಜಾತಿ ರಾಜಕಾರಣವೂ ಸೇರಿ polarization community ಆಗುತ್ತ, ಸಾಗುತ್ತ, ಜನವಂಚನೆ ವ್ಯವಸ್ಥಿತವಾಗಿ ನಡೆಯಿತು. ‘ಸಾಲಮೇಳ’ದ ರೂವಾರಿ ಅಂದಿನ ಕೇಂದ್ರ ಮಂತ್ರಿ, ಕರ್ನಾಟಕದವರು ಪರಿತಪಿಸಿ, ‘ತಪ್ಪಾಯ್ತು’ ಅಂತ ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದಾರೆ. ಆಗ ಇಂಡಿಯನ್ ಬ್ಯಾಂಕ್ ಮುಳುಗಿತ್ತು. ತಮಿಳುನಾಡಿನ ಮೂಪನಾರ್, ಚಿದಂಬರಂ ಅಂಥವರು ಇದರ ಲಾಭಕೋರರು. ಆ ರೋಗ ಕೆನರಾ ಬ್ಯಾಂಕಿಗೂ ಇಲ್ಲಿ ಅಡರಿದ್ದು ಈಗ ಚೇತರಿಕೆಯಾಗುತ್ತ ಬಂದಿದೆ. ಜನ ಮರೆಯುತ್ತಾರೆ. ಆರ್ಥಿಕ ನಾಶದ ಹಲವು ಮಜಲುಗಳು ಇವು. ರಾಷ್ಟ್ರಾದ್ಯಂತ ಸಿಕ್ಕ ಸಿಕ್ಕವರಿಗೆ ಸಾಲ, ಆಮೇಲೆ ಮನ್ನಾ ಮಾಡಿದ್ದು ಯಾರಿಗೂ ಶಿಕ್ಷಿತರಾಗಲಿಲ್ಲ. ಅಪರಾಧಿಗಳು ನೇತಾರರು ದುರ್ಮರಣದಲ್ಲಿ ಸತ್ತರು.

    ‘ಭಾರತಭಾಗ್ಯ ವಿಧಾತಾ’ ಎಂದರೆ ಕಾಂಗ್ರೆಸ್ಸು ಅಲ್ಲ, ಸೋಷಿಯಲಿಸ್ಟರು ಅಲ್ಲ, ‘ಅಪ್ಪ-ಮಗ’, ‘ಅಮ್ಮ-ಮಗ’, ಪಾರಂಪರಿಕ ಸುಲ್ತಾನ್​ಶಾಹೀ ದರ್ಬಾರಿನವರಲ್ಲ. ಬಂಗಾಳಿ ಗೊಂಬೆಗೆ, ಉತ್ತರ ಪ್ರದೇಶದ ಮಾಯಾಂಗನೆಗೆ, ಕೇರಳದ ಕರಾಳರಿಗೆ, ಕರಾವಳಿ ಕೊಲೆಗಳ ರೂವಾರಿಗಳಿಗೆ ಏನು ಅರ್ಥಶಾಸ್ತ್ರ ಗೊತ್ತು? ಲೂಟಿ ಮಾತ್ರ! ಕರ್ನಾಟಕದಲ್ಲಿ ಪ್ರಹಸನ ರಕ್ತಸಿಕ್ತವಾದದ್ದು ಅಬ್ದುಲ್ಲಾ ಅಯ್ಯನವರ ಕರಾಳ, ಕ್ರೂರ, ಕಠೋರ ಆಡಳಿತ ಕಾಲದಲ್ಲಿ. ನಾನಾ ‘ಭಾಗ್ಯ’ಗಳು ಎಲ್ಲ ವೋಟಿಗೆ, ಜಾತಿಗೆ ಹಾಗೂ ಒಳಜಾತಿ ಹಿಡಿತಕ್ಕೆ ಬಿಗಿದುಕೊಂಡು ಅರ್ಥನಾಶ ಮಾಡಿದವು. ‘ಇಂದಿರಾ ಕ್ಯಾಂಟೀನು’ ಸೀಮೆಎಣ್ಣೆ ಇಲ್ಲದ ‘ಲಾಟೀನು’ ಆಗಿ, ಈಗ ಬಂದ್ ಆಗುವ ಸ್ಥಿತಿಯಲ್ಲಿದೆ, ವರದಿ.

    ನಾಯಿಕೊಡೆ ಎಂಬುದು ತೆಂಗಿನ ಮರ ಆಗುವುದೇ? ತಮಿಳುನಾಡಿನ ಜಯಲಲಿತಾ ಜಾರಿಗೆ ತಂದ ಅನೇಕ ಅಂಥ ಅಗ್ಗದ, ಪ್ರಚಾರದ, ಹಣನಾಶಕ ಕಾರ್ಯಕ್ರಮಗಳು ಈಗ ತಮಿಳು ಅರ್ಥ ಪರಿಸ್ಥಿತಿಯನ್ನು ನಾಶ ಮಾಡಿ, ‘ದ್ರವಿಡ್’ ಚಳವಳಿ ಸಾಯುತ್ತ, ಕೊನೆಯ ಉಸಿರೆಳೆಯುವ ಸ್ಥಿತಿಯಲ್ಲಿದೆ. ರೈತರು ಬದುಕಬೇಕೆಂದರೆ, ಹೂಡಿಕೆಗೆ ಅನುಗುಣವಾಗಿ, ಲಾಭ ದೊರೆತು, ಪ್ರತಿಫಲ ಸಮರ್ಪಕವಾಗಿರುವ ರೈತನೀತಿ ಈವರೆಗೆ ಉದಿಸಲಿಲ್ಲ! ಅಲ್ಲಿದೆ ಅರ್ಥನಾಶ.

    ರಾಮಾಯಣದಲ್ಲಿ ಭರತನಿಗೆ ಉಪದೇಶಿಸುವ ಶ್ರೀರಾಮ ಹೇಳುತ್ತಾನೆ-‘ವಾರ್ತಾಯಾಂ ಸಂಶ್ರಿತೋ ಲೋಕಃ’ ಎಂದು. ಅಲ್ಲಿ ‘ವಾರ್ತಾ’ ಎಂದರೆ ಗೀತೆಯ ‘ಕೃಷಿ, ಗೋರಕ್ಷಾ, ವಾಣಿಜ್ಯಂ’ ಎಂಬ ಮೂರೂ ಸೇರುತ್ತವೆ. ಸಮರ್ಪಕ ರೈತನೀತಿ, ಗೋಸಂರಕ್ಷಣೆ, ವಾಣಿಜ್ಯ, ತೆರಿಗೆ, ಕಾಪೋರೇಟ್ ಟ್ಯಾಕ್ಸ್ ಇಂಥವು ಈಗ ಜಾರಿಗೆ ಬರಲು ಆರಂಭಿಸಿವೆ, ಮೋದಿ ಕಾಲದಲ್ಲಿ! ಅದಕ್ಕೆ ಕಾಲ ಬೇಕು. ಅಡಚಣೆ ಯಾರು? ಕಾಂಗ್ರೆಸ್ಸು, ಮುಸ್ಲಿಂರ ದಾರಿ ತಪ್ಪಿದ ಚಳವಳಿಗಳು, ಹೊರಗಿಂದ ಬಂದು ಇಲ್ಲಿ ದುಡಿಯದೇ ಉಣ್ಣುವ ನಾಗರಿಕ ಸೋಗಿನ ಶತ್ರುಗಳು, ಮಿತಿಯಿಲ್ಲದೆ ಸಂತಾನ ಬೆಳೆಸಿ, ರಾಷ್ಟ್ರವನ್ನು ಮತ್ತೆ ಮೊಗಲರ ಕಾಲಕ್ಕೆ ತರಲು ಯತ್ನಿಸುತ್ತಿರುವ ಓವೈಸಿ ಇತರ ಇನ್ನೂ ಮುಸ್ಲಿಂ ವೋಟುಗಳ ದಲ್ಲಾಳಿಗಳು, ಕಾಮ್ರೇಡರೂ, ಕಾಂಗ್ರೆಸ್ಸು ಮರಿಗಳು-ಇವರೆಲ್ಲ ಜೈಲು ಸೇರುವ ತನಕ ಈ ಕಲುಷಿತ ವಾತಾವರಣ ತಿಳಿಯಾಗುವುದಿಲ್ಲ. ‘ಅರ್ಥ’ವನ್ನು ಮೊದಲು ಬೆಳೆಸುವ ದಾರಿಗಳು ಜಾರಿಯಾಗಬೇಕು. ‘ಭಾಗ್ಯ’ಗಳೆಂಬ ಭ್ರಾಂತಿಯ ದೌರ್ಭಾಗ್ಯ, ಸೋಮಾರಿತನ ತರುವ ಅಲಕ್ಷ್ಮೀ, ಮೂದೇವಿ ತೊಲಗಬೇಕು.

    ‘ಕ್ಷುತ ಪಿಪಾರ್ಯಾಂ ಮಲಾಂ ಜ್ಯೇಷ್ಠಾ ಅಲಕ್ಷ್ಮೀಃ ನಾಶಯೂ ಮ್ಯಹಂ’ ಎಂದಿತ್ತು ಶ್ರೀ ಸೂಕ್ತ. ಹಸಿವು, ದಾಹ, ರಗಳೆ-ಸೋಮಾರಿತನದ ಉಲ್ಬಣಕ್ಕೆ ಪ್ರೇರಕ ಪೋಷಕ. ಇಂದಿರಾ ಹಿಡಿದು ಅಬ್ದುಲ್ಲಾ ಅಯ್ಯನವರ ತನಕದ ‘ಮೂದೇವಿ-ಎಕನಾಮಿಕ್ಸ್’ ಸಾಯಬೇಕು. ‘ದುಡಿದು ತಿನ್ನು’ ಎಂಬ ‘ಕಾಯಕವೇ ಕೈಲಾಸ’ ಎಂಬ ಕರ್ಮಯೋಗ ಜಾರಿಯಾಗಬೇಕು. ಅದು ಜೈ ಭಾರತ ತತ್ತ್ವ.

    (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts