More

  ಕಠಿಣವಾದರೂ ಪರಿಶೀಲನೀಯ, ಪಾಲನೀಯ ಪರಿಹಾರ: ಡಾ.ಕೆ.ಎಸ್.ನಾರಾಯಣಾಚಾರ್ಯ ಅವರ ರಾಜಧರ್ಮರಾಜನೀತಿ ಅಂಕಣ

  ನೇಪಾಳ ದಾರಿಗೆ ಬರಬೇಕು. ಅಲ್ಲಿ ಮಾವೋ, ನಕ್ಸಲ್, ತಾಲಿಬಾನ್ ಶಕ್ತಿಗಳೂ ಅವರಿಂದ ಪ್ರೇರಿತವಾದ ವೋಟುಬ್ಯಾಂಕುಗಳೂ ನಿರ್ನಾಮವಾಗಬೇಕಾದ್ದು ಸಕಾಲಿಕ. ಡ್ರಗ್ಸ್ ಮಾಫಿಯಾ ನಿರ್ನಾಮದ ಕಾಲವಲ್ಲವೇನಿರಯ್ಯ? ಸಿನಿಮಾ, ಕ್ರಿಕೆಟ್ ಕ್ಷೇತ್ರಗಳೂ ದೋಷಮುಕ್ತವಾಗಬೇಕಿವೆ. ಒಂದೇ ಮಾತಿನಲ್ಲಿ, ನೆಗೆಟಿವ್ ಶಕ್ತಿಗಳ ನಾಶದಲ್ಲೇ ಹೊಸ ಭಾರತ ಉದಯವಾಗಬೇಕಾಗಿದೆ.

  ಕಠಿಣವಾದರೂ ಪರಿಶೀಲನೀಯ, ಪಾಲನೀಯ ಪರಿಹಾರ: ಡಾ.ಕೆ.ಎಸ್.ನಾರಾಯಣಾಚಾರ್ಯ ಅವರ ರಾಜಧರ್ಮರಾಜನೀತಿ ಅಂಕಣಸಂವಿಧಾನಬದ್ಧವಾಗಿಯೇ ಸಂವಿಧಾನನಾಶಕ್ಕೆ ಯತ್ನಿಸಿದವರು ಇಲ್ಲೂ ಉಂಟು. ಜರ್ಮನಿಯಲ್ಲಿ ಚುನಾವಣೆಯ ಮೂಲಕವೇ ಆರಿಸಿ ಬಂದ ಹಿಟ್ಲರನ ಉದಾಹರಣೆಯೂ ಇದೆ. ಇಲ್ಲಿ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಹೇರಿಕೆ ಇದೆ. ಸಂವಿಧಾನಕ್ಕೆ ಮನಬಂದಂತೆ ತಿದ್ದುಪಡಿ ಮಾಡಿದ ಕಾಂಗ್ರೆಸ್ಸಿನ ಅಗಾಧ ಚರಿತ್ರೆಯೇ ಇದೆ. ಸಂವಿಧಾನ ಪವಿತ್ರವೆನ್ನುವವರು ಅದರ ಹೃದಯರಕ್ಷಣೆಗೆ ಯತ್ನಿಸಿದರೆ ಕೂಗೆಬ್ಬಿಸುವವರಿಗೆ, ಅವರು ಏನು ಬಯಸುತ್ತಾರೋ? ಹೇಳಿಕೇಳಿ ಇದು ಸನಾತನ ಹಿಂದೂಗಳ ರಾಷ್ಟ್ರ. ಇತರ ಆಗಂತುಕ ಮತಾನುಯಾಯಿಗಳಿಗೆ ಸಮಾನ ಹಕ್ಕುಗಳು ಕೊಡಲ್ಪಟ್ಟಿವೆ. ಈ ಬಗ್ಗೆ ಪ್ರಶ್ನೆಯಿಲ್ಲ. ಪ್ರಶ್ನೆ ಇರುವುದು ಈ ಇತರರು ಹಿಂದೂ ಬಹುಸಂಖ್ಯಾತರ ಅಸ್ತಿತ್ವ ನಾಶಕ್ಕೂ, ಪ್ರಜಾಸಂಖ್ಯಾ ಸ್ಪೋಟದ ಮೂಲಕ ಇದನ್ನು ಇಸ್ಲಾಮಿ ರಾಷ್ಟ್ರ, ಕ್ರೖೆಸ್ತ ರಾಷ್ಟ್ರ ಮಾಡಬಯಸುವ ಹಕ್ಕು ಇದೆಯೆಂಬುದು.

  ಕೇರಳದಲ್ಲಿ ಒಬ್ಬ ಮತಾಂಧ ಹೇಳಿದ-‘2025ರ ವೇಳೆಗೆ ಇಸ್ಲಾಮಿ ರಾಜ್ಯ ಮಾಡಿಬಿಡುತ್ತೇನೆ’ ಅಂತ. ಇಂಥ ಮಾತುಗಳು ಮತ್ತೂ ಓವೈಸಿ, ಝಾಕೀರ್ ನಾಯ್ಕ ಬಾಯಲ್ಲೂ, ಪಾಕ್​ನ ಸೈಯ್ಯದ್ ಹಫೀಜ್ ಬಾಯಲ್ಲೂ ಬಂದಿವೆ, ಬರುತ್ತಿವೆ. ಹಿಂದೆ ಕರ್ನಲ್ ಗಡಾಫಿ ಹೇಳಿದ್ದು-‘ಯುದ್ಧ ಮಾಡದೆಯೇ ಜನಸಂಖ್ಯಾವೃದ್ಧಿಯ ಮೂಲಕ ಜಗತ್ತನ್ನು ಇಸ್ಲಾಮಿಮಯ ಮಾಡುತ್ತೇನೆ’ ಅಂತ. ಅವನ ಕಥೆಯನ್ನು ಅಮೆರಿಕದ ಸಿಐಎ ಬೇರೆ ರೀತಿಯಾಗಿ ಮುಗಿಸಿತ್ತು. ಒಸಾಮಾ ಬಿನ್ ಲಾಡೆನ್​ನ ಅನುಯಾಯಿಗಳು, ಉಗ್ರರು ಇಲ್ಲೂ ಹರಡಿದ್ದಾರೆ. ಸಂವಿಧಾನ ಇವರಿಗೆ ಉಪದ್ರವವಾಗಿತ್ತು, ಇಸ್ಲಾಂ ಹೇರಿಕೆಗೆ. ದೇಶವನ್ನು ಮತ್ತೆ ಔರಂಗಜೇಬನ ಕಾಲಕ್ಕೆ ಕೊಂಡೊಯ್ಯುವ, 800 ವರ್ಷ ಇಲ್ಲಿ ಇಸ್ಲಾಂ ಆಳಿದ ನೆನಪಿಗೆ, ಅದರ ಮರುಕಳಿಕೆಗೆ ಇಲ್ಲಿ ಇಸ್ಲಾಮಿ ವೋಟುದಾಹದ ಕಾಂಗ್ರೆಸ್ಸು, ಕಾಮ್ರೇಡರು, ನಾನಾ ಎಡಪಂಥೀಯ, ಸೆಕ್ಯುಲರಿಸ್ಟ್ ಪಕ್ಷ ಧುರೀಣರು ಯತ್ನಿಸುತ್ತಿರುವುದು ಗುಟ್ಟಲ್ಲ. ಇಲ್ಲಿ ‘ಸಂವಿಧಾನಕ್ಕೆ ಗೌರವ’ ಒಂದು ಟ್ರಿಕ್! ಇದು ಬಹಿರಂಗವಾಗಬೇಕಾಗಿದೆಯಾಗಿ ಈ ಲೇಖನ.

  ಭಾರತವನ್ನೂ, ಅದರ ಮೂಲ ನೈಜ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆಧ್ಯಾತ್ಮಿಕ ಸ್ವರೂಪವನ್ನೂ, ಕಲೆ, ಸಾಹಿತ್ಯ, ಶಿಲ್ಪ, ಸಂಗೀತ, ಶಾಸ್ತ್ರ, ಗ್ರಂಥಭಂಡಾರ, ಪರಂಪರೆಯನ್ನೂ ಕಾಪಾಡಲು, ಸಂವಿಧಾನ ರಕ್ಷಣೆಗಾಗಿಯೂ ಈ ವಿಕಾರ ಯತ್ನದ ಧುರೀಣರ ಬಯಕೆಯನ್ನು ಹುಸಿಮಾಡಲು ಪ್ರಾಮಾಣಿಕ ಪ್ರಯತ್ನ ಈಗ ಬೇಕಾಗಿದೆ. ಈ ಯತ್ನವನ್ನೇ ಭಯಭ್ರಾಂತರು ತಿರುಚಿ-‘ಸಂವಿಧಾನನಾಶ ಯತ್ನ’ ಎಂದು ಬಿಂಬಿಸಲು ಹೊರಟಿರುವುದು, ‘ಕಳ್ಳನ ತಿರು ಬೊಬ್ಬೆ’ಯಂತಾಗಿದೆ. ವಿವೇಕಿಗಳು, ರಾಷ್ಟ್ರಪ್ರೇಮಿಗಳು ಇಲ್ಲಿ ಗೋಜಲು ಪರಿಹರಿಸಿಕೊಂಡು, ಸತ್ಯ ಅರಿಯುವುದಿದೆ. ‘ಪ್ರಜಾಸಂಖ್ಯೆ ವೃದ್ಧಿ ಮಾಡಿಕೊಂಡು ಆ ಮೂಲಕ ರಾಷ್ಟ್ರವನ್ನೇ ‘ಗೆದ್ದು’, ಮೂಲಸ್ವರೂಪ ವಿಕಾರ ಮಾಡಲು, ಸಂವಿಧಾನದಲ್ಲಿ ಅವಕಾಶ ಇದೆಯೇ?’ ಎಂಬುದು ಪ್ರಶ್ನೆ. ಇಲ್ಲವಾದರೆ ಈ ಬಗ್ಗೆ ತಿಳಿವಳಿಕೆ, ಪ್ರಚಾರ ಅಗತ್ಯವಿದೆ. ಸುಳ್ಳು ಪ್ರಚಾರಕರಿಗೆ ಬಾಯಿಗೆ ಬೀಗ ಜಡಿಯುವಂತೆ, ಸಂವಿಧಾನ ತಜ್ಞರು ಬರೆಯಬೇಕು, ಮಾತಾಡಬೇಕು, ಜಾಗೃತಿ ಮೂಡಿಸಬೇಕು. ಅವಕಾಶ ಇದ್ದರೆ ಅದನ್ನು ಹೋಗಲಾಡಿಸುವ ತಿದ್ದುಪಡಿಗಳು, ತಿಳಿವಳಿಕೆ, ಪ್ರಚಾರವೂ ಬೇಕು. ಮೊದಲ ಹೆಜ್ಜೆಯಾಗಿ ಒಂದು ಮಾತು ಈಗಾಗಲೇ ಪ್ರಚಾರದಲ್ಲಿದೆ. ‘ತ್ರಿವಳಿ ತಲಾಕ್’ ಅನ್ನು ನಿಷೇಧಿಸಿರುವ ಧೀರ ಸರ್ಕಾರಕ್ಕೆ ಇದು ಸಾಧ್ಯ. ಯಾವುದು? ಏಕರೂಪ ನಾಗರಿಕ ಸಂಹಿತೆಯ ಜಾರಿ. ಅದರ ಅನೇಕ ಹಿತಕರ ಪರಿಣಾಮಗಳಲ್ಲಿ ಕುಟುಂಬ ನಿಯಂತ್ರಣ ಕಾಯ್ದೆ, ಹಿಂದೂಗಳಿಗೆ ಮಾತ್ರ ಈಗ ಜಾರಿಯಾಗಿರುವುದು, ಇತರರಿಗೂ ಅನ್ವಯವಾಗುವಂತಾದರೆ, ಒಬ್ಬನು 20 ಹೆಂಡಿರು, 80 ಮಕ್ಕಳು, ಇನ್ನೂ ಹೆಚ್ಚು ಉತ್ಪಾದಿಸುವ ಹವ್ಯಾಸಕ್ಕೆ ಕಡಿವಾಣ ಬೀಳುತ್ತದೆ. ಇದು ಆಗಬಾರದೆಂದೇ ಇಸ್ಲಾಮಿಯರು, ಕಾಂಗ್ರೆಸ್ಸು, ಕಾಮ್ರೇಡರು, ಎಡವಟ್ಟರು, ಎಡಬಿಡಂಗಿಗಳು ಬೊಬ್ಬಾಟ ಮಾಡಿ ‘ಸಂವಿಧಾನ ಅಪಾಯದಲ್ಲಿದೆ’ ಎಂದು ಊಳಿಡುತ್ತಿದ್ದಾರೆ. ಹಾಗಲ್ಲ. ಅಪಾಯದಲ್ಲಿರುವುದು ಭಾರತೀಯರ ಸ್ವಾತಂತ್ರ್ಯ! ನಮ್ಮ ಸಾರ್ವಭೌಮತೆ, ಸಮಗ್ರತೆ ಮತ್ತು ಸಮರಸತೆ, ಸಾಮಾಜಿಕ ಸಮತೋಲನ, ದ್ವೇಷರಹಿತ, ಕೋಮುಗಲಭೆ ರಹಿತ, ಶಾಂತ ಭಾರತೀಯ ಸಮಾಜ ಕಲ್ಪನೆಗಳು ಇವಕ್ಕೆ ಅಪಾಯ.

  ಈಗ ಇಲ್ಲಿ ತೊಂದರೆ ಇರುವುದು ಎಲ್ಲಿ? ಸಮತೋಲನವಿಲ್ಲದ ವಿಚಿತ್ರ, ವಿಕೃತ, ಮತೀಯ ಹಕ್ಕುಗಳ ರಕ್ಷಣೆಯ ಯತ್ನದ ಪರಿಸ್ಥಿತಿ. ಹಿಂದೂಗಳಿಗೆ ಪರ್ಸನಲ್ ಲಾ ಇಲ್ಲವಾದರೆ ಮುಸ್ಲಿಂರಿಗೆ ಷರಿಯಾ ಏಕೆ ಬೇಕು? ಕ್ರೖೆಸ್ತರಿಗೇಕೆ ಬೇಕು? ಬೇಕೆನ್ನುವವರು ಅದು ಜಾರಿಯಲ್ಲಿರುವ ಮತೀಯ ಸರ್ಕಾರಾಡಳಿತ ದೇಶಗಳಿಗೆ ಹೋಗಲು ಯಾರ ಅಡ್ಡಿ, ಆಕ್ಷೇಪಗಳೂ ಇಲ್ಲ! ಪ್ರತ್ಯೇಕತಾವಾದದ ಮೂಲ ಇರುವುದೇ ಈ ಸ್ಪೆಷಲ್ ಹಕ್ಕುಗಳಲ್ಲಿ. ಆದುದರಿಂದ ಏಕರೂಪ ಕಾಯ್ದೆ ಅನಿವಾರ್ಯ. ಈಗಿರುವಂತೆ ಸಂವಿಧಾನದಲ್ಲಿ ಅದಕ್ಕೆ ಅವಕಾಶ, ಹಕ್ಕು ರಕ್ಷಣೆಯ ನೆಪದಲ್ಲಿದೆ. ಅದರ ಅಪಾರ್ಥ, ವ್ಯಾಪ್ತಿಗಳು, Preamble ಎಂಬ ಸಂವಿಧಾನದ ಮುನ್ನುಡಿಗೆ ವಿರೋಧವಾಗಿದೆ. ಇದು ಮೊದಲು ಪರಿಹಾರವಾಗಬೇಕು. ಮುಂದಿನ ಹೆಜ್ಜೆಗಳು ಸುಲಭವಲ್ಲ. ಬೀದಿಗಿಳಿಯುವವರನ್ನು ತಡೆಯಲು ಶ್ರಮ ಬೇಕು.

  ಕಾಶ್ಮೀರವನ್ನೇ ದಾರಿಗೆ ತಂದ ಧುರೀಣರಿಗೆ ಯಾವುದೂ ಅಸಾಧ್ಯವಲ್ಲ. ‘ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್’ ಕಾಯ್ದೆಗೆ ಬಂಗಾಳ, ಕೇರಳಾದಿಗಳಲ್ಲಿ ಎಷ್ಟು ಕೋಲಾಹಲವಾಯ್ತು? ಬಲ್ಲಿರಲ್ಲ? ಹೊರಗಿಂದ ಬಂದ ರೋಹಿಂಗ್ಯಾ, ಇನ್ನಿತರ ನುಸುಳುಕೋರರನ್ನು ನಿಗ್ರಹಿಸಲು ಇನ್ನೂ ಹೆಚ್ಚು ಬಲಿಷ್ಠವಾದ ಕಾಯ್ದೆಗಳೂ, ಸರ್ಕಾರಗಳೂ, ರಾಷ್ಟ್ರೀಯ ಪಕ್ಷಗಳೂ, ನೇತಾರರೂ ಬೇಕಾಗುತ್ತಾರೆ. ಈಗಿನ ಮಹಾಭಾರತದ ‘ಉದ್ಯೋಗಪರ್ವ’ ಈ ನಮ್ಮ ಈಗಿನ ಕಾಲ. ಎರಡನೆಯದು ಪ್ರಜಾಸ್ಪೋಟ ಯತ್ನದ ದುಷ್ಪರಿಣಾಮ ನಿಯಂತ್ರಣ. ಉದಾಹರಣೆಗೆ-ಒಂದು ಕುಟುಂಬದಲ್ಲಿ ತಂದೆ-ತಾಯಿಗೆ 20, 30 ಮಕ್ಕಳಿದ್ದರೆ, ಇಬ್ಬರಿಗೆ ಮಾತ್ರ ವೋಟಿಗೆ, ರೇಷನ್, ಆಧಾರಗಳಿಗೆ ಅವಕಾಶ ಇರುವಂತೆ-ಹೀಗೆ ಇನ್ನೂ ಹೆಚ್ಚು ಪರಿಷ್ಕೃತವಾದ ತೀವ್ರ ಕಾಯ್ದೆ ಬೇಕಾಗುತ್ತದೆ. ‘ವೋಟು ಹಕ್ಕು, ವೋಟು ಪವಿತ್ರ’ ಎಂದು ಬೊಬ್ಬಿಡುವವರು-‘ಯಾರು ವೋಟುದಾರರು? ಎಂಥ ವೋಟು?’ ಎಂಬುದನ್ನು ಅರಿಯುವಂತೆ, ಬಲವಾದ ಪ್ರಚಾರ, ಸರ್ಕಾರಿ ಬೆಂಬಲ ಬೇಕಾಗುತ್ತದೆ. ಇದು ‘ಹಕ್ಕು ದಮನದ ಪ್ರಶ್ನೆಯಲ್ಲ, ರಾಷ್ಟ್ರ ಸಮಗ್ರತೆ, ಸ್ವಾತಂತ್ರ್ಯ ರಕ್ಷಣೆಯ ಪ್ರಶ್ನೆ’ ಎಂದು ಬಲವಾಗಿ ಬಿಂಬಿಸುವ ಪತ್ರಿಕಾ, ಟಿ.ವಿ.ಪ್ರಚಾರಗಳು ಬೇಕು!

  ಸೋನಿಯಾ ಸುಮ್ಮನಿರುವುದಿಲ್ಲ! ಅಮೆರಿಕದ ಪತ್ರಿಕೆಗಳನ್ನೂ, ವಾರ್ತಾ ವಾಹಿನಿಗಳನ್ನೂ ಹಿಡಿಯುತ್ತಾರೆ. ಹೀಗೆ ಮಾಡಿಯೂ ಇರುವ ನಿದರ್ಶನಗಳು ಇವೆ. ವ್ಯಾಟಿಕನ್ ಸುಮ್ಮನಿರುವುದಿಲ್ಲ. ಸೌದಿ, ಅರಬ್ಬಿ ಶಕ್ತಿಗಳು ಸುಮ್ಮನಿರುವುದಿಲ್ಲ. ಮೈನಾರಿಟಿ ವೋಟುಗಳನ್ನೇ ಅವಲಂಬಿಸಿರುವ ಸೆಕ್ಯುಲರ್ ಪಕ್ಷಗಳು ಬಾಯಿಗೆ ಮಣ್ಣು ತೂರಿಸಿಕೊಂಡು, ಸುಮ್ಮನೆ ಕುಳ್ಳಿರುವುದಿಲ್ಲ. ರಾಷ್ಟ್ರೀಯ ಹಿತ ಬಯಸುವವರನ್ನೇ ‘ಭಯೋತ್ಪಾದಕರು’ ಎಂದು ಮುದ್ರಿಸಲು ಯತ್ನಿಸಿ, ಕೈ ಸುಟ್ಟುಕೊಂಡವರು ತೆಪ್ಪಗೆ ಇರುವುದು ಜಾಯಮಾನದಲ್ಲಿಲ್ಲ. ಆದರೆ, ಇಂಥ ಆಪತ್ತುಗಳಲ್ಲೂ ರಾಷ್ಟ್ರವನ್ನು ಪಾರುಮಾಡಿದ ಮಹಾ ಅತಿಮಾನುಷ ಪುರುಷರು ನಮ್ಮ ಇತಿಹಾಸದಲ್ಲೇ ಇದ್ದಾರೆ. ಸೋಗಲಾಡಿ ಮಧ್ಯಸ್ಥಿತಿಯ, ಮೌನೀ ಭೀಷ್ಮದ್ರೋಣರನ್ನು ಮಣ್ಣು ಮುಕ್ಕಿಸುವುದು ಅಸಾಧ್ಯವಾದ ಕಾಲದಲ್ಲೇ ಶ್ರೀಕೃಷ್ಣ ಜನಿಸಿ ಬಂದ! ‘ಧರ್ವಧರ್ಮ ಹೋರಾಟದಲ್ಲಿ ತಾಟಸ್ಥ್ಯ ಸಲ್ಲದು’ ಎಂಬುದಲ್ಲವೇ ಗೀತೆಯ ಆಶಯ? ಬೋಧೆ? ಇದೇ ಮಾತು ಸಂವಿಧಾನಕ್ಕೆ ಅನ್ವಯವಾಗಿ, ಈಗ ಎಡಬಿಡಂಗಿ ತಾಟಸ್ಥ್ಯಕ್ಕೆ ತಿಲಾಂಜಲಿ ಬೇಕಾಗಿದೆ. ನೈಜಧರ್ಮ ಯಾರ ವಿರುದ್ಧವೂ ಇಲ್ಲ. ಇಸ್ಲಾಮಿ, ಈಸಾಯಿಗಳಿಗೆ, ಸ್ವಂತ ಆಚರಣೆಗೆ ಯಾರ ಅಡಚಣೆಯೂ ಇಲ್ಲಿ, ಇರಬಾರದು-ಮತ-ಮುಖವಾಡದ ಆಕ್ರಮಣಕ್ಕೆ, ಧರ್ಮನಾಶಕ್ಕೆ, ಅವಕಾಶ ಇರಬಾರದು. ಇಲ್ಲಿ ಸಂವಿಧಾನದ ಸ್ಪಷ್ಟ ಕಾಯಿದೆಗೆ ಅನುರೂಪವಾದ ಪರಿಚ್ಛೇದಗಳು ಬೇಕು. ತುರ್ತಾಗಿ ಬೇಕು.

  ಇಂಥದೇ ಇನ್ನೊಂದು ಆಪತ್ಕಾಲ ನವನಂದರದ್ದು. ‘ನೆಗೆಟಿವ್’ ಎನ್ನಬಹುದಾದ ವಿಚಾರಗಳು, ಆಚಾರಗಳ ಸಮುದಾಯದ ಕೊಬ್ಬನ್ನು ಇಳಿಸಿ ದೇಶದ ಸಾರ್ವಭೌಮತೆಯನ್ನು ರಕ್ಷಿಸಿದ ಮಹಾಪುರುಷ ಆಚಾರ್ಯ ಚಾಣಕ್ಯ! ಶ್ರೀಕೃಷ್ಣ, ಶ್ರೀರಾಮ, ಶ್ರೀವಿದ್ಯಾರಣ್ಯ, ಸಮರ್ಥ ರಾಮದಾಸ, ಶಿವಾಜಿಯಂಥವರು ಬೇರೆ-ಬೇರೆ ದೇಶಗಳಲ್ಲಿ ಹುಟ್ಟಿ ಬರಲಿಲ್ಲವೇಕೆ? ಸುಭಾಷ, ಸಾವರ್ಕರರು ಇಲ್ಲೇ ಏಕೆ ಹುಟ್ಟಿ ಬಂದರು? ರಷ್ಯಾದ ಅಧ್ಯಕ್ಷ ಪುತಿನ್ ಹೇಳಿದ್ದು ನೆನಪಿದೆಯೇ? ‘ಮೋದಿ ನನ್ನ ದೇಶದಲ್ಲಿ ಹುಟ್ಟಿ ಬಂದಿದ್ದರೆ, ಅವರಿಗಾಗಿ ನಾನು ಪದವಿ ಬಿಟ್ಟುಕೊಡುತ್ತಿದ್ದೆ’ ಎಂಬ ಮಾತು ಇತಿಹಾಸದ ಎಂಥ ದಿಟ್ಟ ಮಾತು? ಎಂಥ ಸತ್ಯ ಅದರಲ್ಲಿ ಅಡಗಿದೆ? ಯೋಚಿಸಿ.

  ಈಗ ‘ಸಂವಿಧಾನ’ ಹೆಸರಲ್ಲಿ ನಡೆಯುತ್ತ ಬಂದಿರುವುದು ಹಿಂದೂ ಶೋಷಣೆ, ರಾಷ್ಟ್ರೀಯತೆಯ ತಿರಸ್ಕಾರ, ಆಕ್ರಮಣಶೀಲದ ಬೆಂಬಲ, ಪರೋಕ್ಷ ರಾಷ್ಟ್ರನಾಶ! ಇದನ್ನು ತಡೆದು ದೇಶವನ್ನು ಉಳಿಸಲು ಈಗ ವಿಕ್ರಮಾದಿತ್ಯರು ಬೇಕು. ಚುನಾವಣಾ ಕಾಯ್ದೆಗಳೇ ಮರುರೂಪ ಹೊಂದಬೇಕಾಗಿವೆ. ವಾಜಪೇಯಿ ಕಾಲದಲ್ಲಿ, ‘ಸಂವಿಧಾನ ಮರು ಪರಿಶೀಲನೆಗೆ ಅವಕಾಶ ಬೇಕೇ?’ ಎಂಬ ಪ್ರಶ್ನೆಗೆ ಒಂದು ಕಮಿಷನ್ ನೇಮಿಸಲಾಯ್ತು. ನಿವೃತ್ತ ಸುಪ್ರೀಂ ನ್ಯಾಯಾಧೀಶರಿಗೆ ಆ ಅವಕಾಶ ಕೊಟ್ಟರೂ, ಅವರು, ನುಣುಚಿ, ಹೆದರಿ, ‘ಅವಕಾಶ ಬೇಕಾಗಿಲ್ಲ’ ಎಂದೇ ತೀರ್ಪು ಕೊಟ್ಟರು. ಇದು ಯಾರಿಗೆ ಸಹಾಯಕವಾಯ್ತು? ವಾಜಪೇಯಿ ಹೋದರೂ, ಪ್ರಶ್ನೆ ಉಳಿಯಿತು. ಈಗ ಪ್ರಶ್ನೆಗಳು ಪರಿಹಾರವಾಗಲೇ ಬೇಕು. ವಿಶ್ವ ಪರಿಸ್ಥಿತಿ ಭಾರತಕ್ಕೆ ಅನುಕೂಲಕರವಾಗಿದೆ. ‘ಯಾವುದಕ್ಕೆ ಏನು ಸಂಬಂಧ?’ ಎಂದು ಆಕಳಿಸಬೇಡಿ. ಭಯೋತ್ಪಾದಕ ಕಡಾಯಿ ಪಾಕಿಸ್ತಾನ ನಿರ್ನಾಮವಾಗಿ, ನಾವು ಕಳೆದುಕೊಂಡ ಭಾಗಗಳು ಮತ್ತೆ ಭಾರತಕ್ಕೆ ಸೇರುವುದು ಇದೆ. ಟಿಬೆಟ್ ಸ್ವತಂತ್ರವಾಗಿ, ಟಿಬೆಟ್ ಸೇನೆಯೊಂದು ಅಲ್ಲಿ ಕಾರ್ಯಪ್ರವೃತ್ತವಾಗಿರಲು ಯತ್ನ ನಡೆದಿದೆ. ನೇಪಾಳ ದಾರಿಗೆ ಬರಬೇಕು. ಅಲ್ಲಿ ಮಾವೋ, ನಕ್ಸಲ್, ತಾಲಿಬಾನ್ ಶಕ್ತಿಗಳೂ ಅವರಿಂದ ಪ್ರೇರಿತವಾದ ವೋಟುಬ್ಯಾಂಕುಗಳೂ ನಿರ್ನಾಮವಾಗಬೇಕಾದ್ದು ಸಕಾಲಿಕ. ಡ್ರಗ್ಸ್ ಮಾಫಿಯಾ ನಿರ್ನಾಮದ ಕಾಲವಲ್ಲವೇನಿರಯ್ಯ? ಸಿನಿಮಾ, ಕ್ರಿಕೆಟ್ ಕ್ಷೇತ್ರಗಳೂ ದೋಷಮುಕ್ತವಾಗಬೇಕಿವೆ. ಒಂದೇ ಮಾತಿನಲ್ಲಿ, ನೆಗೆಟಿವ್ ಶಕ್ತಿಗಳ ನಾಶದಲ್ಲೇ ಹೊಸ ಭಾರತ ಉದಯವಾಗಬೇಕಾಗಿದೆ. ಇಲ್ಲಿ ಪಟ್ಟಭದ್ರರು ಶತಾಯಗತಾಯ ಹೋರಾಟ ಮಾಡುತ್ತಾರೆ. ಉದ್ಧವ್ ಠಾಕ್ರೆಯವರನ್ನೇ ಹಿಡಿದವರು ಸಾಮಾನ್ಯರೇ? ಪವಾರ್, ಸೋನಿಯಾ ಬ್ರಿಗೇಡು ಪೂರ್ಣ ಅಳಿಯಬೇಕು. ಬಂಡೆಯ ಮೇಲೆ ಏಸುವನ್ನು ಇಟ್ಟವರಿಗೆ ಜ್ಞಾನೋದಯ ಆಗುವುದು ಕಷ್ಟ. ಜೈಲು ಅನೇಕರಿಗೆ ಪಾಠ ಕಲಿಸಿದೆ. ಕೆಲವರಿಗೆ ಏನೂ ಆಗಿಲ್ಲ. ಗಾಂಧಿ, ನೆಹ್ರೂರು ಜೈಲಲ್ಲಿ ಏನೂ ಕಲಿಯಲಿಲ್ಲ! ತಿಲಕರೂ, ಸಾವರ್ಕರರೂ ಅಲ್ಲಿ ಯುದ್ಧವನ್ನೇ ಆರಂಭಿಸಿದರು. ಜೈಲಲ್ಲೇ ಹುಟ್ಟಿದ ಕೃಷ್ಣ,, ಭಾರತದ ಸೆರೆಯನ್ನೇ ಬಿಡಿಸಿದ ಎಂದರೆ ನಂಬುತ್ತೀರಾ?

  ಅಯ್ಯಾ! ಇಲ್ಲಿ ಬೇಕು ಶ್ರೀಕೃಷ್ಣ, ಶ್ರೀರಾಮ. ಸ್ಟಾಲಿನ್, ಲೆನಿನ್ ಅಲ್ಲ. ಇಲ್ಲಿ ಬೇಕು ಶಂಕರ, ರಾಮಾನುಜ, ಬಸವ, ಮಧ್ವರು, ರಾಮಕೃಷ್ಣ, ವಿವೇಕಾನಂದ, ಅರವಿಂದ, ರವೀಂದ್ರರು. ಮಾರ್ಕ್, ಫ್ರಾಯ್ಡ್ ಅಲ್ಲ. ಮರಳುಗಾಡ ಮಾತುಗಳು ಮರಳುಗಾಡಿಗೆ ಮರಳಲಿ! ಅದಕ್ಕೆ ಅಂದಿನ ವಸಿಷ್ಠ, ಜಮದಗ್ನಿ, ಅತ್ರಿ, ಅಗಸ್ಱರಂತೆ, ಇಂದೂ ಚಿಂತಕ, ಸೇನಾನಿ, ದಾರ್ಶನಿಕರು ಬೇಕು. ಈಗ ನಡೆದಿರುವುದು ಪ್ರಚ್ಛನ್ನ ಕುರುಕ್ಷೇತ್ರ ಯುದ್ಧ. ಹಿಂದೆ ದ್ರೌಪದೀ ಮಾನಸಂರಕ್ಷಣಾ ಪ್ರಸಂಗ. ಇಂದು ಭಾರತ ಸಂವಿಧಾನ ರಕ್ಷಣಾ ಪ್ರಸಂಗ. ನಿಮಗೆ ತಿಳಿಯದಾದರೆ ನೀವು ಧೃತರಾಷ್ಟ್ರರು! ಕಾಳ್ಗಿಚ್ಚಿನಲ್ಲಿ ಸಾಯುವುದು ವಾನಪ್ರಸ್ಥ ನಿಯಮವಲ್ಲ. ಅದು ದುರ್ವಿಧಿ, ಕರ್ಮ, ಪ್ರಾಯಶ್ಚಿತ.

  (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

  ‘ಆಸೆಯೇ ದುಃಖಕ್ಕೆ ಮೂಲ’ ಎನ್ನಲಿದ್ದಾರಾ ಬಿಗ್​-ಬಿ ಅಮಿತಾಭ್ ಬಚ್ಚನ್​?

  ರಾಜ್ಯೋತ್ಸವ ರಸಪ್ರಶ್ನೆ - 25

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts