More

    ಲಾಕ್​ಡೌನ್​ ವೇಳೆ ತಾನೇ ತಯಾರಿಸಿದ ವಿಮಾನದಲ್ಲಿ ಕುಟುಂಬ ಸಮೇತ ಯೂರೋಪ್​ ಸುತ್ತಿಬಂದ ಇಂಜಿನಿಯರ್!

    ತಿರುವನಂತಪುರ: ಪ್ರವಾಸ ಕೈಗೊಳ್ಳುವುದು ಯಾರಿಗೆ ಇಷ್ಟವಿಲ್ಲ ಹೇಳಿ, ಪ್ರವಾಸ ಎಂದಾಕ್ಷಣ ಸ್ವಂತ ವಾಹನವನ್ನು ಆಯ್ಕೆ ಮಾಡಿಕೊಳ್ಳುವವರೇ ಹೆಚ್ಚು. ಅದರಲ್ಲೂ ತಾನೇ ತಯಾರಿಸಿದ ವಿಮಾನದಲ್ಲಿ ವ್ಯಕ್ತಿಯೋರ್ವ ವಿದೇಶ ಪ್ರವಾಸ ಕೈಗೊಳ್ಳುವ ದಾಖಲೆ ಬರೆದಿದ್ದಾರೆ. ಕೇರಳ ಮೂಲಕದ ಅಶೋಕ್ ಅಲಿಸೇರಿ ಎಂಬಾತ ಲಾಕ್​ಡೌನ್​ ಸಮಯದಲ್ಲಿ ತಾನು ತಯಾರಿಸಿದ ವಿಮಾನದಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಿದೇಶ ಪ್ರವಾಸ ಮುಗಿಸಿ ಬಂದಿದ್ದಾರೆ.

    ಕೇರಳದ ಪಾಲಕ್ಕಾಡ್ ಇಂಜಿನಿಯರ್​ ಕಾಲೇಜಿನಲ್ಲಿ ಬಿಟೆಕ್​​ ಪದವಿ ಪಡೆದು, ನಂತರ ವಿದೇಶದಲ್ಲಿ ನೆಲೆಸಿದ್ದ ಅಶೋಕ್​, ಲಾಕ್​ಡೌನ್​ ಸಮಯದಲ್ಲಿ ಕೆಲಸವಿಲ್ಲದೇ ಮನೆಯಲ್ಲೇ ಇದ್ದರು. ಈ ವೇಳೆ ಅವರು ವಿಮಾನ ತಯಾರಿಸುವ ಯೋಜನೆಯನ್ನು ಹಾಕಿಕೊಂಡಿದ್ದರು.

    ಶಾಸಕ ಎ ವಿ ಥಮರಕ್ಷನ್ ಅವರ ಪುತ್ರರಾಗಿರುವ ಅಶೋಕ್​ 2006ರಲ್ಲೇ ಇಂಗ್ಲೆಂಡ್​ಗೆ ಹೊಗಿ ಅಲ್ಲೇ ನೆಲೆಸಿದ್ದರು, ಕರೋನಾ ಸಮಯದಲ್ಲಿ  ಕೇರಳಕ್ಕೆ ಆಗಮಿಸಿದ್ದ ಇವರು, ಏನಾದರೊಂದು ಸಾಧನೆಯನ್ನು ಮಾಡಿಬಿಡಬೇಕು ಎಂಬ ಚಿಂತನೆಯಲ್ಲಿದ್ದರು. ಇದೇ ವೇಳೆ ಅವರಿಗೆ ಹೊಳೆದಿದ್ದು, ವಿಮಾನ ತಯಾರಿಸಿ ಅದರಲ್ಲೇ ವಿದೇಶ ಸುತ್ತಬೇಕೆಂದು. ಅಂತೆಯೇ ಕಾರ್ಯಪ್ರವೃತ್ತರಾಗಿ ವಿಮಾನ ತಯಾರಿಸುವ ಬಗ್ಗೆ ಸರ್ಕಾರದಿಂದ ಪರವಾನಗಿಯನ್ನೂ ಪಡೆಯುತ್ತಾರೆ. ನಂತರ ತಮ್ಮದೇ ವೆಚ್ಚದಲ್ಲಿ ವಿಮಾನ ತಯಾರಿಸಿಯೇ ಬಿಡುತ್ತಾರೆ.

    1.4 ಕೋಟಿ ವೆಚ್ಚದಲ್ಲಿ 1500 ಗಂಟೆಗಳ ಕಾಲ ಈ ವಿಮಾನ ತಯಾರಿಸಿದ ಅಶೋಕ್​ ಯೂರೋಪ್​ ದೇಶಗಳಾದ ಆಸ್ಟ್ರಿಯಾ, ಜರ್ಮನಿ ಸುತ್ತಿ ಬಂದಿದ್ದಾರೆ. ಸ್ನೇಹಿತರ ಜತೆಯೂ ವಿದೇಶ ಸುತ್ತಿ ಬಂದಿರುವ ಅಶೋಕ್​ ಅವರ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್​)

    ಸಿನಿಮಾಗಳು ನಷ್ಟವಾಗುವುದು ನನಗೆ ಇಷ್ಟವಿಲ್ಲ, ದಕ್ಷಿಣದ ಸಿನಿಮಾಗಳೇ ಬೆಸ್ಟ್​ ಎಂದ ಸಲ್ಲು!

    ರಶ್ಮಿಕಾ,ತಮನ್ನಾರನ್ನು ಹಿಂದಿಕ್ಕಿದ್ದ ಕೀರ್ತಿ ಸುರೇಶ್​: ದಸರಾ ಚಿತ್ರಕ್ಕಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts