More

    ಮಕ್ಕಳಿಗೆ ಜ್ಞಾನಾರ್ಜನೆ ನೀಡಿದರೆ ಪ್ರಬುದ್ಧ ಸಮಾಜ ನಿರ್ಮಾಣ

    ಕಲಘಟಗಿ: ಸೌಹಾರ್ದಯುತ ಬಾಳಿಗೆ ನ್ಯಾಯದಾನ ನೀಡುತ್ತಿರುವ ನ್ಯಾಯಾಂಗ ಇಲಾಖೆ ಹಾಗೂ ನ್ಯಾಯದ ಚೌಕಟ್ಟಿನಲ್ಲಿ ಜ್ಞಾನ ಧಾರೆ ಎರೆಯುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಅವಿನಾಭಾವ ಸಂಬಂಧವಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಜಿ.ಆರ್. ಶೆಟ್ಟರ್ ಹೇಳಿದರು.


    ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕೇಂದ್ರದಡಿ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


    ಕುಟುಂಬ ಹಾಗೂ ಸಮಾಜವನ್ನು ತಿದ್ದಿ ತೀಡಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಗುರುತರ ಜವಾಬ್ದಾರಿ ಮಹಿಳೆಯರ ಮೇಲಿದೆ. ಕುಟುಂಬದ ಗೌರವವನ್ನು ಹೆಚ್ಚಿಸುತ್ತ ನಿರ್ವಹಣೆಯ ಜವಾಬ್ದಾರಿಯೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಸುಶಿಕ್ಷಿತರಾಗುವುದರೊಂದಿಗೆ ಮಕ್ಕಳಿಗೂ ಜ್ಞಾನಾರ್ಜನೆ ನೀಡಿದಾಗ ಮಾತ್ರ ಪ್ರಬುದ್ಧ ಸಮಾಜ ಕಾಣಬಹುದು ಎಂದರು.


    ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ ಮಾತನಾಡಿ, 5-6 ಸ್ವ-ಸಹಾಯ ಸಂಘಗಳನ್ನು ಒಟ್ಟಿಗೆ ಸೇರಿಸಿ ಒಂದು ಮಹಿಳಾ ಜ್ಞಾನವಿಕಾಸ ಕೇಂದ ತೆರೆಯಲಾಗುತ್ತಿದ್ದು, ತಾಲೂಕಿನಾದ್ಯಂತ 25 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಲಿವೆ ಎಂದರು.


    ದಿವಾಣಿ ನ್ಯಾಯಾಧೀಶ ಗಣೇಶ ಎನ್, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಯೋಜನಾಧಿಕಾರಿ ಮಲ್ಲಿಕಾ, ಯೋಜನಾಧಿಕಾರಿ ಪ್ರಶಾಂತ ನಾಯ್ಕ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್. ಧನಿಗೊಂಡ, ನ್ಯಾಯವಾದಿ ವಾಸಂತಿ ಖಾನಾಪೂರ, ಜನಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪ್ರಭಾಕರ ನಾಯಕ, ಕೃಷಿ ಮೇಲ್ವಿಚಾರಕ ಪ್ರಕಾಶ ಗುಡಿಸಲಮನಿ, ಮಂಜುನಾಥ ರ್ಬಾ, ಮಹಿಳಾ ಜ್ಞಾನವಿಕಾಸ ಸಮನ್ವಯಾಧಿಕಾರಿ ಸುನಿತಾ ಬೋಜಗಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts