More

    VIDEO| ತಂದೆಗೆ ಅನಾರೋಗ್ಯವೆಂದು ಕಣ್ಣೀರಿಟ್ಟು ಬೇಡಿಕೊಂಡ್ರು ಬಿಡಲಿಲ್ಲ​: ಹೊತ್ತುಕೊಂಡೇ ಆಸ್ಪತ್ರೆಗೆ ಸಾಗಿದ ಮಗನ ಹಿಂದೆ ಓಡಿಬಂದ ತಾಯಿ

    ತಿರುವನಂತಪುರಂ: ಕರೊನಾ ಲಾಕ್​ಡೌನ್​ನಿಂದಾಗಿ ವಾಹನ ವ್ಯವಸ್ಥೆಯಿಲ್ಲದೇ ಚಿಕಿತ್ಸೆಗಾಗಿ ಸಾರ್ವಜನಿಕರು ಪರದಾಡುತ್ತಿದ್ದರೂ ಮಾನವೀಯತೆ ಮೆರೆಯದ ಕೆಲ ಘಟನೆಗಳು ಮಾನವ ಸಮುದಾಯವನ್ನು ಪ್ರಶ್ನಿಸುವಂತಿವೆ.

    ಇತ್ತೀಚೆಗಷ್ಟೇ ಬಿಹಾರದ ಜೆಹಾನಬಾದ್​ನಲ್ಲಿ ವಾಹನ ಸಿಗದೇ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಮಗು ಸಾವಿಗೀಡಾಗಿತ್ತು. ಬಳಿಕ ಆಸ್ಪತ್ರೆಯ ಸಿಬ್ಬಂದಿಯು ಸಹ ಆಂಬುಲೆನ್ಸ್​ ನೀಡಲು ನಿರಾಕರಿಸಿದ್ದಕ್ಕೆ ತಾಯಿಯೊಬ್ಬಳು ಮಗುವಿನ ಮೃತದೇಹ ಹೊತ್ತು ನಡೆದಿದ್ದ ಘಟನೆ ಮನಕಲಕುವಂತಿತ್ತು.

    ಇದೀಗ ಇದೇ ರೀತಿಯ ಮತ್ತೊಂದು ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ 48 ವರ್ಷದ ರಾಯ್​ ಪಣಲೂರ್​ ಗ್ರಾಮದ ನಿವಾಸಿ. ಅನಾರೋಗ್ಯಕ್ಕೀಡಾಗಿದ್ದ ತಂದೆಯನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಪೊಲೀಸರು ತಡೆದಿದ್ದಾರೆ. ಈ ವೇಳೆ ಎಷ್ಟೇ ಬೇಡಿಕೊಂಡರು ಬಿಡಲು ಒಪ್ಪದಿದ್ದಾಗ, ತಂದೆಯನ್ನು ಮಗುವಿನಂತೆ ತೋಳಿನಲ್ಲಿ ಹೊತ್ತುಕೊಂಡು ಸುಮಾರು 1 ಕಿ.ಮೀ ಸಾಗಿದ್ದಾರೆ. ಈ ವೇಳೆ 83 ವರ್ಷದ ಆತನ ತಾಯಿ ಲೀಲಮ್ಮ ಕೂಡ ಹಿಂದೆ ಓಡಿಬಂದಿದ್ದಾರೆ.

    ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪೊಲೀಸ್​ ಅಧಿಕಾರಿ ಅಮಾನವೀಯತೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

    ಈ ಬಗ್ಗೆ ಮಾತನಾಡಿರುವ ರಾಯ್​, ನನ್ನ ತಂದೆಗೆ 88 ವರ್ಷ. ಅವರು ಮಧುಮೇಹ ರೋಗಿ. ಅಧಿಕ ರಕ್ತದೊತ್ತಡದಿಂದ ಹಾಗೂ ಮೂತ್ರ ಸಂಬಂಧಿ ಕಾಯಿಲೆಯಿಂದಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಓರ್ವ ಪೊಲೀಸ್​ ಅಧಿಕಾರಿ ಆಸ್ಪತ್ರೆ ಸಮೀಪದ ಸೇತುವೆ ಬಳಿ ತಡೆದಿದ್ದಾರೆ. ಅವರಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ಹೊರಡಲು ಅನುಮತಿ ನೀಡಿದ್ದಾರೆ. ಆಟೋ ತೆಗೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ ಮತ್ತೊಬ್ಬ ಪೊಲೀಸ್​ ಅಧಿಕಾರಿ ಆಟೋವನ್ನು ತಡೆದಿದ್ದಾರೆ. ಅವರು ನಾನು ಹೇಳುವುದನ್ನು ಕೇಳಲು ಸಿದ್ಧರಾಗಿರಲಿಲ್ಲ. ಕಣ್ಣೀರಿಟ್ಟು ಬೇಡಿಕೊಂಡೆ. ಆದರೂ ನನ್ನ ಮಾತನ್ನು ಕೇಳಲಿಲ್ಲ. ಬಳಿಕ ನನ್ನ ತಂದೆಯನ್ನು ಹೊತ್ತುಕೊಂಡೆ ಸುಮಾರು 1 ಕಿ.ಮೀ ದೂರದಲ್ಲಿದ್ದ ಆಸ್ಪತ್ರೆಗೆ ತಲುಪಿದೆ ಎಂದು ವಿವರಿಸಿದ್ದಾರೆ.

    ಸದ್ಯ ರಾಯ್​ ತಂದೆಯ ಆರೋಗ್ಯ ಸುಧಾರಿಸಿದ್ದು, ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. ಆದರೆ, ಪೊಲೀಸ್ ಅಧಿಕಾರಿಯ ಅಮಾನವೀಯತೆ ಎಲ್ಲರೂ ಪ್ರಶ್ನಿಸುವಂತಿದೆ. (ಏಜೆನ್ಸೀಸ್​)

    ಕರೊನಾದ ಮೂಲ ಚೀನಾ ಹೌದೋ ಅಲ್ಲವೋ: ಅಮೆರಿಕ ನಡೆಸಲಿದೆ ತನಿಖೆ; ಮುಚ್ಚುಮರೆ ಮಾಡದಿರುವಂತೆ ಟ್ರಂಪ್ ತಾಕೀತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts