More

    ಸಕಾಲದಲ್ಲಿ ಆಸ್ಪತ್ರೆ ತಲುಪದ ವೃದ್ಧೆ ಮೃತ್ಯು

    ಮಂಗಳೂರು: ಕರ್ನಾಟಕ-ಕೇರಳ ಗಡಿ ಪ್ರದೇಶ, ತಲಪಾಡಿ ಗಡಿಭಾಗ ಮುಚ್ಚುಗಡೆ ಮಾಡಿರುವ ಕಾರಣ ಸಕಾಲದಲ್ಲಿ ಆಸ್ಪತ್ರೆ ತಲುಪದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪಾತುಂಞಿ(70) ಎಂಬುವರು ಮೃತಪಟ್ಟಿದ್ದಾರೆ.
    ಬಂಟ್ವಾಳದಿಂದ ಕಾಸರಗೋಡು ಜಿಲ್ಲೆ ಮಂಜೇಶ್ವರದಲ್ಲಿರುವ ತಮ್ಮ ಮಗಳ ಮನೆಗೆ ಅವರು ಬಂದಿದ್ದರು. ಆದರೆ, ಶನಿವಾರ ಸಾಯಂಕಾಲ ಅವರಿಗೆ ಉಸಿರಾಟದ ತೀವ್ರ ಸಮಸ್ಯೆ ಉಂಟಾಗಿತ್ತು. ಕೂಡಲೇ ಮನೆಮಂದಿ ಅವರನ್ನು ಯಾವಾಗಲೂ ಚಿಕಿತ್ಸೆ ಪಡೆಯುತ್ತಿದ್ದ ದೇರಳಕಟ್ಟೆ ಯೇನೆಪೊಯ ಆಸ್ಪತ್ರೆಗೆ ಕೊಂಡೊಯ್ಯಲು ಪ್ರಯತ್ನಿಸಿದ್ದಾರೆ. ಆದರೆ, ತಲಪಾಡಿ ಗಡಿ ಪ್ರದೇಶದಲ್ಲಿದ್ದ ಪೊಲೀಸರು ಹಾಗೂ ಇತರ ಸಿಬ್ಬಂದಿ ತಡೆ ಆಂಬುಲೆನ್ಸ್‌ಗೆ ತಡೆ ಒಡ್ಡಿದರು.
    ಕರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಳೆದ ಕೆಲ ದಿನಗಳಿಂದ ಕರ್ನಾಟಕ-ಕೇರಳ ಸಂಪರ್ಕಿಸುವ ಎಲ್ಲ 21 ಗಡಿಗಳನ್ನು ಮುಚ್ಚಿದೆ. ಬಳಿಕ ಪಾತುಂಞಿ ಅವರನ್ನು ತಲಪಾಡಿಯಿಂದ ಸುಮಾರು 35 ಕಿ.ಮೀ ದೂರದ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿ ಅವರು ರಾತ್ರಿ ಮೃತಪಟ್ಟಿದ್ದಾರೆ. ತಲಪಾಡಿಯಿಂದ 8 ಕಿ.ಮೀ ದೂರದಲ್ಲಿರುವ ದೇರಳಕಟ್ಟೆ ಆಸ್ಪತ್ರೆಗೆ ರೋಗಿಯನ್ನು ಕೊಂಡೊಯ್ಯುತ್ತಿದ್ದರೆ ಅವರು ಬದುಕುವ ಸಾಧ್ಯತೆ ಅಧಿಕವಿತ್ತು ಎನ್ನುವುದು ಸ್ಥಳೀಯರ ಆಕ್ಷೇಪ.

    ಆಂಬುಲೆನ್ಸ್‌ನಲ್ಲಿಯೇ ಮಗು ಜನನ
    ಮಾ.27ರಂದು ತಲಪಾಡಿ ಕೇರಳ ಗಡಿ ಸಮೀಪದ ನಿವಾಸಿ, ಹೆರಿಗೆ ನೋವಿನಲ್ಲಿದ್ದ ಗರ್ಭಿಣಿಯನ್ನೂ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲು ಗಡಿಯಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳು ನಿರಾಕರಿಸಿದ್ದರು. ಬಳಿಕ ಗರ್ಭಿಣಿಯನ್ನು ಕಾಸರಗೋಡಿಗೆ ಕೊಂಡೊಯ್ಯುವ ಸಂದರ್ಭ ಆಕೆ ಮೊಗ್ರಾಲ್ ಪುತ್ತೂರು ಬಳಿ ಆಂಬುಲೆನ್ಸ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದರು.

    ಕಾಸರಗೋಡು ಜಿಲ್ಲೆಯ ಜನರು ಮುಖ್ಯವಾಗಿ ವೈದ್ಯಕೀಯ ಹಾಗೂ ಶೈಕ್ಷಣಿಕ ಅಗತ್ಯಗಳಿಗೆ ಮಂಗಳೂರನ್ನೇ ಅವಲಂಬಿಸಿದ್ದಾರೆ. ಅಲ್ಲಿನ ನೂರಾರು ರೋಗಿಗಳು ಡಯಾಲಿಸಿಸ್‌ನಂತಹ ಚಿಕಿತ್ಸೆಗಳನ್ನು ನಿಯಮಿತವಾಗಿ ಮಂಗಳೂರು ಆಸ್ಪತ್ರೆಯಲ್ಲೇ ಮಾಡಿಸಿಕೊಳ್ಳುತ್ತಿದ್ದಾರೆ. ಇಂತಹ ರೋಗಿಗಳಿಗೆ ಉಭಯ ರಾಜ್ಯಗಳ ಗಡಿ ಬಂದ್‌ನಿಂದ ತೀವ್ರ ಸಮಸ್ಯೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts