More

    ಚಿನ್ನದ ರಾಣಿಗೆ ಭಯೋತ್ಪಾದನಾ ಲಿಂಕ್‌? ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ತನಿಖಾ ಸಂಸ್ಥೆ

    ನವದೆಹಲಿ: ತಿರುವನಂತಪುರದ ವಿಮಾನ ನಿಲ್ದಾಣದಲ್ಲಿ ಸಿಕ್ಕ ಚಿನ್ನದ ಬ್ಯಾಗ್‌ ಪ್ರಕರಣ ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಲೇ ಸಾಗಿದೆ. ಇದೀಗ ಆಘಾತಕಾರಿ ಮಾಹಿತಿ ನೀಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೇರಳದ ಚಿನ್ನದ ಕಳ್ಳಸಾಗಣೆ ಪ್ರಕರಣದಿಂದ ಬರುವ ಆದಾಯವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.

    ಕಳೆದ 10 ತಿಂಗಳುಗಳಲ್ಲಿ ಸುಮಾರು 150 ಕೆಜಿ ಚಿನ್ನವನ್ನು ಕೇರಳಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಎಂದು ಎನ್ಐಎ ಬಹಿರಂಗಪಡಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳಾಗಿರುವ ಯುಎಇ ಧೂತಾವಾಸ ಕಚೇರಿಯ ಮಾಜಿ ಉದ್ಯೋಗಿ ಸ್ವಪ್ನಾ ಸುರೇಶ್‌ ಮತ್ತು ಇನ್ನೋರ್ವ ಉದ್ಯೋಗಿ ಸಂದೀಪ್‌ ನಾಯರ್‌ ವಿರುದ್ಧ ಭಯೋತ್ಪಾದನಾ ಚಟುವಟಿಕೆಯ ಆರೋಪ ಕೇಳಿಬಂದಿದೆ. ಭಯೋತ್ಪಾದಕರ ತಂಡಗಳಿಗೆ ಇವರು ಧನಸಹಾಯ ಮಾಡುತ್ತಿರುವುದಾಗಿ ಸಂದೇಹಗಳು ಉಂಟಾಗಿದೆ.

    ಈ ಹಿನ್ನೆಲೆಯಲ್ಲಿ ಭಯೋತ್ಪಾದನಾ ಕೋನದಿಂದಲೂ ತನಿಖೆಯನ್ನು ಇದೀಗ ಶುರು ಮಾಡಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಸ್ವಪ್ನಾ ಮತ್ತು ಸಂದೀಪ್‌ನನ್ನು ಜುಲೈ 21ರವರೆಗೆ ನ್ಯಾಯಾಂಧ ಬಂಧನದಲ್ಲಿ ಇರಿಸಲಾಗಿದೆ.

    ಇದನ್ನೂ ಓದಿ: ಮಗಳಿಂದ ಅಮ್ಮ ಅರೆಸ್ಟ್‌: ಚಿನ್ನದ ರಾಣಿ ಸಿಕ್ಕಿಬಿದ್ದದ್ದೇ ರೋಚಕ!

    ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧವೂ ಭಯೋತ್ಪದನಾ ಚಟುವಟಿಕೆಗೆ ಹಣ ಸಹಾಯ ಸೆಕ್ಷನ್‌ಗಳ ಅಡಿಯಲ್ಲಿ ಮೊಕದ್ದಮೆ ದಾಖಲು ಮಾಡಿಕೊಳ್ಳಲು ತಯಾರಿ ನಡೆಸಲಾಗಿದೆ.

    ಈ ರೀತಿ ಎನ್‌ಐಎಗೆ ನಂಬಿಕೆ ಬರಲು ಕಾರಣವೇನೆಂದರೆ, ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿರುವ ಚಿನ್ನಗಳ ಆಭರಣ ಚಿನ್ನಗಳ ಗುಂಪಿಗೆ ಸೇರಿಲ್ಲ. ಬದಲಾಗಿ, ಅವುಗಳ ಕ್ವಾಲಿಟಿಯಲ್ಲಿ ವ್ಯತ್ಯಾಸವಿದ್ದು, ಅವು ನಗದು ವ್ಯವಹಾರಕ್ಕೆ ಸಂಬಂಧಿಸಿದಂತೆ ಬಳಕೆಯಾಗುವ ಚಿನ್ನ ಎಂಬ ಬಗ್ಗೆ ತಿಳಿದಿರುವ ಹಿನ್ನೆಲೆಯಲ್ಲಿ, ಅದರ ಬಗ್ಗೆ ಕೆದಕಿದಾಗ ಭಯೋತ್ಪಾದನಾ ಚಟುವಟಿಕೆಯ ಬೇರು ಸಿಕ್ಕಿದೆ.

    .ಆರೋಪಿ ಸಂದೀಪ್ ನಾಯರ್ ಯುಎಇ ರಾಜತಾಂತ್ರಿಕ ರಶೀದ್ ಅಲ್ ಶೀಮೆಲಿ ಎಂಬಾತನಿಗೆ ಹಣದ ರವಾನೆ ಮಾಡಿರುವುದು ಬೆಳಕಿಗೆ ಬಂದಿದೆ. ಕೇರಳದ ಚಿನ್ನದ ಕಳ್ಳಸಾಗಣೆ ದಂಧೆಯ ಮೂಲ ಕಾರಣೀಕರ್ತ ಎನ್ನಲಾದ ರಮೀಜ್‌ನನ್ನು ಈಗಾಗಲೇ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ.

    ಯಾರೀ ಸ್ವಪ್ನಾ ಸುರೇಶ್‌? ಈ ಲಿಂಕ್‌ ನೋಡಿ:

    ಈ ‘ಚಿನ್ನದ ರಾಣಿ’ಯ ಇತಿಹಾಸವೇ ರೋಚಕ; ಇವಳಿಂದ ಕೇರಳ ಸಿಎಂ ಕುರ್ಚಿ ಗಡಗಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts