More

    ‘ಸ್ವಪ್ನ ಸುಂದರಿ’ ತಂದ ಆಪತ್ತು- ಕೇರಳ ಸಿಎಂ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ನಿರ್ಧಾರ

    ತಿರುವನಂತಪುರ: ಕೇರಳದ ಚಿನ್ನದ ಕಳ್ಳಸಾಗಣೆ ಕೇಸ್‌ ಇದೀಗ ಪ್ರತಿಭಟನೆಗೆ ತಿರುಗಿದ್ದು, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ‘ಯುಡಿಎಫ್‌’ ನಿರ್ಧರಿಸಿದೆ.

    ಜತೆಗೆ, ಸ್ಪೀಕರ್‌ ವಿರುದ್ಧವೂ ನಿರ್ಣಯ ಮಂಡಿಸಲು ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಯುಡಿಎಫ್‌ನ ಸಂಚಾಲಕ ಬೆನ್ನಿ ಹೆನನ್‌ ತಿಳಿಸಿದ್ದಾರೆ.

    ಈ ಮೂಲಕ ಕಳ್ಳ ಸಾಗಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್‌, ಕೇರಳದ ಮುಖ್ಯಮಂತ್ರಿ ಸ್ಥಾನಕ್ಕೇ ಕುತ್ತು ತಂದಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಸ್ವಪ್ನಾ ಅವರಿಗೆ ಮುಖ್ಯಮಂತ್ರಿ ಕಾರ್ಯಾಲಯದಲ್ಲಿಯೂ ಭಾರಿ ಸಪೋರ್ಟ್‌ ಇದ್ದ ಹಿನ್ನೆಲೆಯಲ್ಲಿ ಇಂಥದ್ದೊಂದು ಕಳ್ಳ ಸಾಗಣೆ ಮಾಡಲು ಅನುವು ಆಗಿದೆ ಎಂಬ ಕಾರಣಕ್ಕೆ ಪ್ರತಿಪಕ್ಷಗಳೀಗ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿದ್ದಾರೆ.

    ಇದನ್ನೂ ಓದಿ: ಚಿನ್ನದ ರಾಣಿ ಸಿಕ್ಕಿಬಿದ್ದದ್ದೇ ರೋಚಕ: ಮಗಳಿಂದ ಅಮ್ಮ ಅರೆಸ್ಟ್‌!

    ಈ ನಡುವೆ, ವಿಜಯನ್‌ ಅವರ ಕಚೇರಿಯೇ ಶಾಮೀಲಾಗಿದ್ದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದೆ.

    ‘ಚಿನ್ನದ ಕಳ್ಳಸಾಗಾಣಿಕೆ ಆರೋಪಿಗಳಲ್ಲಿ ಒಬ್ಬರ ಜತೆಗೆ ಸ್ಪೀಕರ್‌ ಸಂಪರ್ಕ ಹೊಂದಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಅವರೂ ಆ ಹುದ್ದೆಯಿಂದ ಕೆಳಗಿಳಿಯಬೇಕು. ಆರೋಪಿಗಳನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ‌ಆದ್ದರಿಂದ ನಾವು ರಾಜ್ಯದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಿದ್ದೇವೆ’ ಎಂದು ಬೆನ್ನಿ ಹೇಳಿದರು.

    ಏನಿದು ಪ್ರಕರಣ? ಇಲ್ಲಿದೆ ನೋಡಿ:

    https://www.vijayavani.net/swapna-suresh-tiruvantapura-gold-case-history/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts