More

    VIDEO: ವೈರಲ್ ಆಗಿದೆ ಜೂನಿಯರ್ ಫುಟ್‌ಬಾಲ್ ತಾರೆಯ ಫ್ರಿ ಕಿಕ್ಸ್ ವಿಡಿಯೋ

    ತಿರುವನಂತಪುರಂ: ದೇವರ ನಾಡು ಕೇರಳದಲ್ಲಿ ಕ್ರಿಕೆಟ್‌ಗಿಂತಲೂ ಫುಟ್‌ಬಾಲ್‌ಗೆ ಒಲವು ಜಾಸ್ತಿ. ರಾಷ್ಟ್ರೀಯ ಫುಟ್‌ಬಾಲ್ ತಂಡಕ್ಕೆ ಹಲವು ಆಟಗಾರರನ್ನು ಕೇರಳ ಕೊಟ್ಟಿದೆ. ಇದೀಗ ಕೇವಲ 12 ವರ್ಷದ ಬಾಲಕನೊಬ್ಬನ ಫ್ರಿಕ್ ಕಿಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇರಳ ಮಲಪ್ಪುರಂನ ಶಾಲಾ ಬಾಲಕನೊಬ್ಬ ಫುಟ್‌ಬಾಲ್ ಗೋಲ್‌ಪೋಸ್ಟ್‌ನ ಮೇಲ್ಬಾಗದಲ್ಲಿ ಇಟ್ಟಿದ್ದ ಸಣ್ಣ ರಿಂಗ್ ಒಳಗೆ ಕಿಕ್ ಒದೆಯುವ ಮೂಲಕ ಗಮನಸೆಳೆದಿದ್ದಾನೆ. ಮೆಸ್ಸಿ ಅವರ ಅಪ್ಪಟ್ಟ ಅಭಿಮಾನಿಯಾಗಿರುವ ಮಿಶಾಲ್, ಅರ್ಜೆಂಟೀನಾ ಹಾಗೂ ಬಾರ್ಸಿಲೋನಾ ಫುಟ್‌ಬಾಲ್ ತಂಡದ ಜೆರ್ಸಿ ತೊಟ್ಟು ಫ್ರಿ ಕಿಕ್ ಮಾಡಿದ್ದಾನೆ. ಮೆಸ್ಸಿ ಬಿಟ್ಟರೆ ಮಿಶಾಲ್‌ಗೆ ಪೋರ್ಚುಗಲ್ ತಂಡದ ಕ್ರಿಶ್ಚಿಯಾನೊ ರೋನಾಲ್ಡೊ ಅವರ ಎರಡನೇ ಅಭಿಮಾನಿಯಂತೆ.

    ಇದನ್ನೂ ಓದಿ: ಗಂಗೂಲಿ ಭಾರತೀಯ ಕ್ರಿಕೆಟ್‌ನ ಬದಲಾವಣೆಯ ಹರಿಕಾರ ಎಂದ ಹುಸೇನ್

    ಮಲಪ್ಪುರಂನ ಸರ್ಕಾರ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿ ಮಿಶಾಲ್ ಅಬೊಲಾಯಿಸ್ ಒದ್ದಿರುವ ಫ್ರಿಕ್ ಕಿಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಫ್ರಿ ಕಿಕ್‌ಗಳಿಗೆ ಎಕ್ಸ್‌ರ್ಟ್ ಆಗಿರುವ ಮೆಸ್ಸಿಗಾಗಿ ಬಾಲಕ ವಿವಿಧ ಸ್ಥಳಗಳಿಂದ ನಿಂತು ಫ್ರಿ ಕಿಕ್ ಒದ್ದಿದ್ದಾನೆ. ಕೇರಳದ ಸೆವೆನ್ಸ್ ಫುಟ್‌ಬಾಲ್ ಸಂಸ್ಥೆ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಈ ವಿಡಿಯೋ ಪ್ರಕಟಿಸಿದೆ. ಇದೀಗ ಈ ವಿಡಿಯೋ ಎಲ್ಲೆಡೆ ಸದ್ದುಮಾಡುತ್ತಿದೆ. 

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts