More

    ಕೇರಳ ವಿಜಯ ಯಾತ್ರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಾಲನೆ

    ಕಾಸರಗೋಡು: ಬಿಜೆಪಿಯ ಕೇರಳ ರಾಜ್ಯಮಟ್ಟದ ವಿಜಯ ಯಾತ್ರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಚಾಲನೆ ನೀಡಿದರು.

    ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರಿಗೆ ಅವರು ಧ್ವಜ ಹಸ್ತಾಂತರಿದರು. ಯೋಗಿ ಅವರಿಗೆ ಕಾಸರಗೋಡು ಹಿಂದೂ ಸಮಾಜೋತ್ಸವ ಸಮಿತಿ ಮುಖಂಡರು ಯಕ್ಷಗಾನ ಪುತ್ಥಳಿ, ಬಿಜೆಪಿ ನಾಯಕಿ ಶೋಭಾ ಸುರೇಂದ್ರನ್ ಆರನ್ಮುಳ ಕನ್ನಡಿಯನ್ನು ಉಡುಗೊರೆಯಾಗಿ ನೀಡಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ, ಪತ್ರಕರ್ತ ಸಂದೀಪ್ ಬರೆದ ಕಮ್ಯುನಿಸ್ಟ್ ವಂಚನೆ ನೂರು ವರ್ಷಗಳು ಎಂಬ ಕೃತಿಯನ್ನು ಯೋಗಿ ಬಿಡುಗಡೆಗೊಳಿಸಿದರು. ಯಾತ್ರೆ ಮಾ.7ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.

    ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಒ.ರಾಜಗೋಪಾಲ್, ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಳ್ಳಾಪಳ್ಳಿ, ಕೇಂದ್ರ ಸಚಿವ ವಿ.ಮುರಳೀಧರನ್, ಮುಖಂಡರಾದ ಪಿ.ಕೆ.ಕೃಷ್ಣದಾಸ್, ಸಿ.ಕೆ.ಪದ್ಮನಾಭನ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಾದ ಜೋರ್ಜ್ ಕುರ್ಯಾಕೋಸ್, ಪಿ.ಸುಧೀರ್, ಮುಖಂಡರಾದ ಸಿ.ಕೃಷ್ಣ ಕುಮಾರ್, ಎಂ.ಸಂಜೀವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಪ್ರಮೀಳಾ ಸಿ.ನಾಯ್ಕ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಸದಾನಂದ ಮಾಸ್ತರ್, ಕೇರಳ ಕಾಂಗ್ರೆಸ್ ಮುಖಂಡ ಪಿ.ಸಿ.ಥಾಮಸ್, ಜಿ.ರಾಮನ್ ನಾಯರ್, ಪ್ರಮೀಳಾದೇವಿ, ಪ್ರಪುಲ್ಲನ್, ನಿವೇದಿತಾ, ಎನ್‌ಸಿಪಿ ಮುಖಂಡ ವಿಜೇಶ್, ಕುರುವಿಳ ಮ್ಯಾಥ್ಯು, ಕಾರ್ಕಳ ಶಾಸಕ ಸುನಿಲ್ ಕುಮಾರ್ ಮೊದಲಾದವರು ಮಾತನಾಡಿದರು. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಸ್ವಾಗತಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಕೇರಳದಲ್ಲಿ ಕಳೆದ ಐದು ವರ್ಷಗಳ ಎಡಪಕ್ಷದ ದುರಾಡಳಿತ ಹಿಂದೆಂದೂ ಕಂಡಿರದ ಭ್ರಷ್ಟ, ಕೋಮುವಾದಿ ಆಡಳಿತದ ಮೂಲಕ ಓಟ್ ಬ್ಯಾಂಕ್ ರಾಜಕೀಯದಿಂದ ಜನರನ್ನು ಸಂಕಷ್ಟಕ್ಕೆ ತಳ್ಳಿದೆ.
    – ಕೆ.ಸುರೇಂದ್ರನ್ ರಾಜ್ಯ ಬಿಜೆಪಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts