More

    ಈ ರಾಜ್ಯದಲ್ಲಿ ರಸ್ತೆ ಬದಿ ಮೀನು ಮಾರಾಟ ಇನ್ಮುಂದೆ ನಿಷೇಧ

    ತಿರುವನಂತಪುರ: ಕೊವಿಡ್​-19 ಸೋಂಕು ನಿಯಂತ್ರಣಕ್ಕಾಗಿ ಕೇರಳ ಸರ್ಕಾರ ಇನ್ನೊಂದು ಪ್ರಮುಖ ನಿರ್ಧಾರ ಕೈಗೊಂಡಿದೆ.
    ರಾಜ್ಯದಲ್ಲಿ ಇನ್ನುಮುಂದೆ ಎಲ್ಲಿಯೂ ರಸ್ತೆ ಬದಿ ಮೀನು ಮಾರಾಟ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಮೀನುಗಾರಿಕಾ ಸಚಿವರಾದ ಜೆ.ಮರ್ಸಿಕುಟ್ಟಿ ಅಮ್ಮಾ ಈ ಸೂಚನೆ ನೀಡಿದ್ದು, ರಸ್ತೆ ಬದಿ ಅಲ್ಲಲ್ಲಿ ಕುಳಿತು ಮೀನು ಮಾರಾಟ ಮಾಡುತ್ತಿರುವವರು ಈಗಲೇ ನಿಲ್ಲಿಸಬೇಕು ಎಂದಿದ್ದಾರೆ.

    ಕೊವಿಡ್​-19 ಸೋಂಕಿನ ಭಯದಿಂದಾಗಿ ಮೀನು ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು. ಆದರೆ ಈಗ ಕರೊನಾ ನಿಯಂತ್ರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡು, ಮತ್ತೆ ಮಾರುಕಟ್ಟೆಗಳನ್ನು ತೆರೆಯಲು ನಿರ್ಧಾರ ಮಾಡಲಾಗಿದೆ. ಮೀನುಗಾರರ ಒಕ್ಕೂಟ ಮತ್ತು ಮೀನುಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎನ್​ಜಿಒಗಳು, ಮೀನು ಮಾರಾಟ ಮಾಡಲು ಅನುಮತಿ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿವೆ. ಹಾಗಾಗಿ ಮೀನು ಮಾರುಕಟ್ಟೆಗಳನ್ನು ತೆರೆಯಲು ತೀರ್ಮಾನ ಮಾಡಲಾಗಿದೆ. ಆದರೆ ಕೆಲವು ಮಾರ್ಗಸೂಚಿಗಳನ್ನು ನೀಡಬೇಕಾಗಿದೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಈ ರಸ್ತೆ ಬದಿ ಮೀನು ಮಾರಾಟ ಮಾಡುತ್ತಿರುವವರು ನಿಲ್ಲಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.

    ಹೀಗಿದ್ದಾಗ್ಯೂ ಎಲ್ಲಾದರೂ ಈ ಮೀನು ಮಾರುಕಟ್ಟೆಗಳು ಕಾರ್ಯ ನಿರ್ವಹಿಸುತ್ತಿದ್ದರೆ ಸ್ಥಳೀಯ ಆಡಳಿತಗಳು ಅದನ್ನು ನಮ್ಮ ಗಮನಕ್ಕೆ ತರಬೇಕು ಎಂದೂ ತಿಳಿಸಿದ್ದಾರೆ. (ಏಜೆನ್ಸೀಸ್​)

    25 ಅಡಿ ತಿಮಿಂಗಲದ ಬೇಟೆಯಾಡಿ ಪೀಸ್‌ಪೀಸ್‌ ಮಾಡಿದವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts