More

    ಕರೊನಾ ಅಟ್ಟಹಾಸದ ಮಧ್ಯದಲ್ಲೇ ಪ್ರವಾಹದ ರುದ್ರ ನರ್ತನ

    ನೈರೋಬಿ: ಕೀನ್ಯಾದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ ಹಾಗೂ ಭೂಕುಸಿತಕ್ಕೆ 194 ಜನರು ಬಲಿಯಾಗಿದ್ದು, ಲಕ್ಷಾಂತರ ಜನರನ್ನು ಸ್ಥಳಾಂತರಗೊಳಿಸಲಾಗಿದೆ.
    ಒಂದೆಡೆ ಕಿಲ್ಲರ್ ಕರೊನಾ ವೈರಸ್ ಇಡೀ ಜಗತ್ತಿನ ಅಸ್ತಿತ್ವವನ್ನೇ ಬುಡಮೇಲು ಮಾಡುತ್ತ ಮನುಷ್ಯನನ್ನು ಬೆಂಬಿಡದೆ ಕಾಡುತ್ತಿದ್ದರೆ ಮತ್ತೊಂದೆಡೆ ಪ್ರವಾಹ, ಭೂಕುಸಿತ, ಅನಿಲ ದುರಂತದಂತಹ ಘಟನೆಗಳು ಮನುಷ್ಯನ ಪ್ರಾಣ ಹಿಂಡುತ್ತಿವೆ.

    ಇದನ್ನೂ ಓದಿ: 35 ವರ್ಷದ ಹಣಕಾಸು ಸಚಿವೆ ಕರೊನಾ ಸಂಕಷ್ಟದಲ್ಲಿ ದೇಶದ ಆರ್ಥಿಕ ಶಿಸ್ತು ರೂಪಿಸಿದ್ದು ಹೇಗೆ? 

    ಕೀನ್ಯಾದಲ್ಲಿ ಕಳೆದ ಮೂರು ವಾರಗಳಲ್ಲಿ ಪ್ರವಾಹ ಹಾಗೂ ಭೂಕುಸಿತದಿಂದ ಅಂದಾಜು 200 ಜನ ಮೃತಪಟ್ಟಿದ್ದು, ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಗೊಳಿಸಲಾಗಿದೆ.
    ಏಪ್ರಿಲ್​​ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈಗಾಗಲೇ ತೀವ್ರ ಬಾಧಿತವಾದ ಪ್ರದೇಶಗಳಲ್ಲಿ ಮುಂದಿನ ವಾರಗಳಲ್ಲಿ ಮುಂದುವರಿಯುವ ನಿರೀಕ್ಷೆ ಇದೆ ಎಂದು ಕೀನ್ಯಾದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
    ಕಿಲ್ಲರ್ ಕರೊನಾ ದೇಶದಲ್ಲಿ 24 ಜನರನ್ನು ಬಲಿ ತೆಗೆದುಕೊಂಡಿದ್ದು, ಈ ಮಹಾಮಾರಿ ಹರಡುವಿಕೆಯ ವಿರುದ್ಧ ಜನರನ್ನು ರಕ್ಷಿಸುವ ಕಠಿಣ ಕಾರ್ಯದ ಮಧ್ಯೆಯೇ ಈ ಪ್ರವಾಹದಿಂದಾಗಿ ಕಳೆದ ಮೂರು ವಾರಗಳಲ್ಲಿ ಅಂದಾಜು 1 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸರ್ಕಾರಿ ವಕ್ತಾರ ಸೈರಸ್ ಒಗುನಾ ಟ್ವಿಟರ್​​​​ನಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ:  ಸಾವು ಹೆಚ್ಚಲಿದೆ ಎಂದ ಟ್ರಂಪ್  
    ಸ್ಥಳಾಂತರಗೊಂಡ ಜನರಿಗೆ ಆಹಾರ ಹಾಗೂ ಕುಡಿಯುವ ನೀರನ್ನು ಒದಗಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ಮಾಸ್ಕ್​​ಗಳನ್ನು ವಿತರಿಸಬೇಕೆಂದು ಆರೋಗ್ಯ ಸಚಿವಾಲಯಕ್ಕೆ ಅಲ್ಲಿಯ ಸರ್ಕಾರ ಮನವಿ ಮಾಡಿದೆ.
    ಪ್ರವಾಹ ಹಾಗೂ ಭೂಕುಸಿತದಿಂದಾಗಿ ಇಲ್ಲಿಯವರೆಗೆ 194 ಜನ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯಾಡಳಿತ ಸಚಿವ ಯುಗೇನ್ ವಾಮಲ್ವಾ ತಿಳಿಸಿದ್ದಾರೆ.
    ಕೀನ್ಯಾದ ಎರಡು ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ವಾಣಿಜ್ಯ ಸಮುಚ್ಚಯಗಳು, ಮನೆ, ತೋಟಗಳು ಹಾನಿಗೀಡಾಗಿವೆ. ಪ್ರವಾಹ ಸಂತ್ರಸ್ತರ ಹುಡುಕಾಟ ಹಾಗೂ ರಕ್ಷಣಾ ಕಾರ್ಯ ತೀವ್ರಗೊಳಿಸಲಾಗುವುದು, ಸಂತ್ರಸ್ತರಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಔಷಧಗಳನ್ನು ಒದಗಿಸಲಾಗುತ್ತಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವವರಿಗೆ ಸ್ಥಳಾಂತರ ಯೋಜನೆ ರೂಪಿಸಲಾಗಿದೆ ಎಂದು ವಾಮಲ್ವಾ ತಿಳಿಸಿದ್ದಾರೆ. (ಏಜನ್ಸೀಸ್)

    ಅರೆ ಇದೇನಿದು ಎಡವಟ್ಟು: ಸೋಂಕಿತೆಯಲ್ಲದಿದ್ರೂ ತುಂಬು ಗರ್ಭಿಣಿಯನ್ನು ಕರೊನಾ ವಾರ್ಡ್​ಗೆ ಹಾಕಿಬಿಟ್ರಲ್ಲಾ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts