More

    ಸಸಿ ನೆಡಲು ಸಾರ್ವತ್ರಿಕ ರಜೆ ಘೋಷಣೆ

    ನೈರೋಬಿ: ಕೀನ್ಯಾ ಸರ್ಕಾರವು 2032ರ ವೇಳೆಗೆ 150 ಕೋಟಿ ಮರಗಳನ್ನು ಬೆಳೆಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ರಾಷ್ಟ್ರವ್ಯಾಪಿ ಸಸಿ ನೆಡಲು ನ.13ರಂದು ಸಾರ್ವಜನಿಕ ರಜೆ ಘೋಷಿಸಿದೆ.

    ಕಳೆದ ವಾರ ಅಧ್ಯ ವಿಲಿಯಂ ರುಟೊ ಅವರ ಅಧ್ಯತೆಯಲ್ಲಿ ನಡೆದ ಕ್ಯಾಬಿನೆಟ್​ ಸಭೆಯ ನಂತರ ಗೃಹ ಸಚಿವ ಕಿಥುರೆ ಕಿಂಡಿಕಿ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ.

    ಸರ್ಕಾರವು ನ.13 ರಂದು ವಿಶೇಷ ರಜಾದಿನವನ್ನು ಘೋಷಿಸಿದೆ. ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮಗಳಿಂದ ನಮ್ಮ ದೇಶವನ್ನು ಉಳಿಸುವ ಪ್ರಯತ್ನ ಬೆಂಬಲಿಸಿ ದೇಶಾದ್ಯಂತ ನಾಗರಿಕರು ಸಸಿ ನೆಡಬೇಕೆಂದು ಕಿಂಡಿಕಿ ಹೇಳಿದ್ದಾರೆ.

    ಕೀನ್ಯಾದ ಭೂಪ್ರದೇಶದಲ್ಲಿ ಶೇ.7ರಷ್ಟಿರುವ ಅರಣ್ಯಪ್ರದೇಶವನ್ನು ಶೇ.10ಕ್ಕೆ ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಸರ್ಕಾರವು ಈ ಆರ್ಥಿಕ ವರ್ಷದಲ್ಲಿ 80 ಮಿಲಿಯನ್​ ಡಾಲರ್​ ಮೀಸಲಿಟ್ಟಿದೆ. ಈಗಾಗಲೇ ಹವಾಮಾನ ಬಿಕ್ಕಟ್ಟು ಕೀನ್ಯಾ ಸೇರಿದಂತೆ ಆಫ್ರಿಕಾದ ಹಲವು ದೇಶಗಳಲ್ಲಿ ಬರಗಾಲ ಸೃಷ್ಟಿಸಿದೆ. ಸತತವಾಗಿ ಐದು 5 ವರ್ಷದಿಂದ ಇಲ್ಲಿ ಮಳೆ ಕೊರತೆ ಉಂಟಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts