More

    ರೈಡಿಂಗ್​ ರದ್ದುಗೊಳಿಸಿ 23 ಲಕ್ಷ ರೂ. ಗಳಿಸಿದ ಡ್ರೈವರ್!

    ವಾಷಿಂಗ್ಟನ್​: ಗ್ರಾಹಕರ ಪ್ರಯಾಣವನ್ನು ರದ್ದುಗೊಳಿಸುವ ಮೂಲಕ 23 ಲಕ್ಷ ರೂಪಾಯಿ ಸಂಪಾದಿಸಿರುವುದಾಗಿ 70 ವರ್ಷದ ಅರೆಕಾಲಿಕ ಉಬರ್​ ಡೆವರ್​ ತಿಳಿಸಿದ್ದಾರೆ. ಕಳೆದ ವರ್ಷ ತಾನು ಶೇ.10ಕ್ಕಿಂತ ಕಡಿಮೆ ರೈಡ್​ ವಿನಂತಿಗಳನ್ನು ಸ್ವೀಕರಿಸಿದ್ದಾಗಿ ಹೇಳಿಕೊಂಡಿದ್ದಾರೆ.

    ಆರು ವರ್ಷಗಳ ಹಿಂದೆ ನಿವೃತ್ತಿಯ ನಂತರ ಅಮೆರಿಕದಲ್ಲಿ ಹೆಚ್ಚುವರಿ ಆದಾಯಕ್ಕಾಗಿ ಉಬರ್​ ಚಾಲನೆ ಮಾಡಲು ಪ್ರಾರಂಭಿಸಿದ ಬಿಲ್​, ಹೆಚ್ಚು ಮೊತ್ತವನ್ನು ಗಳಿಸಲು ಎರಡು ತಂತ್ರಗಳನ್ನು ಅಳವಡಿಸಿಕೊಂಡಿದ್ದಾಗಿ ಹೇಳಿದ್ದಾರೆ. ಮೊದಲನೆಯದು ಶುಕ್ರವಾರ ಮತ್ತು ಶನಿವಾರದಂದು ಬಾರ್​ ಮತ್ತು ವಿಮಾನ ನಿಲ್ದಾಣಗಳಂತಹ ಜನನಿಬಿಡ ಸ್ಥಳಗಳಲ್ಲಿ ತನ್ನ ವಾಹನ ಚಲಿಸುವುದು. ಮತ್ತೊಂದು ಒನ್​ ವೇ ರೈಡ್​ಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.

    ರಾತ್ರಿ ಸಮಯದಲ್ಲಿ ವಿಮಾನದಿಂದ ಬರುವ ಪ್ರಯಾಣಿಕರು ಉಬರ್​ ಆಯ್ಕೆ ಮಾಡುವುದರಿಂದ ಬೆಲೆಯು ದ್ವಿಗುಣವಾಗುತ್ತದೆ. 20 ನಿಮಿಷದ ಪ್ರಯಾಣಕ್ಕೆ 10 ರಿಂದ 20, 40, ಕೆಲವೊಮ್ಮೆ 50ಡಾಲರ್​ ವರೆಗೆ ಹೋಗುತ್ತದೆ. 35 ನಿಮಿಷಕ್ಕೆ 30 ರಿಂದ 60 ಡಾಲರ್​ ಪಡೆಯಬಹುದಾಗಿದೆ ಎಂದಿದ್ದಾರೆ.

    ಒನ್​ ವೇ ರೈಡ್​ನಿಂದಾಗುವ ಆದಾಯವನ್ನು ಒಂದು ಟನೆಯೊಂದಿಗೆ ವಿವರಿಸಿದ ಅವರು, ಒಮ್ಮೆ ತಮ್ಮ ನಗರದಿಂದ ಗ್ರಾಹಕರೊಬ್ಬರನ್ನು ಸುಮಾರು ಎರಡು ಗಂಟೆಗಳ ಕಾಲ ಕರೆದೊಯ್ದು 2,246 ರೂಪಾಯಿ ಪಡೆದುದ್ದಾಗಿ ತಿಳಿಸಿದ್ದಾರೆ. ಈ ತಂತ್ರಗಳನ್ನು ಬಳಸುವುದು ಅಪಾಯಕಾರಿ. ಏಕೆಂದರೆ ಪ್ರಯಾಣಿಕರ ಗಮ್ಯಸ್ಥಾನದ ಆಧಾರದ ಮೇಲೆ ಪ್ರಯಾಣವನ್ನು ಚಾಲಕರು ನಿರಾಕರಿಸುವುದು ಅಥವಾ ರದ್ದುಗೊಳಿಸುವುದನ್ನು ಉಬರ್​ ಪ್ರೋತ್ಸಾಹಿಸುವುದಿಲ್ಲ. ಆದರೆ ಬಿಲ್​, ಉಬರ್​ನಿಂದ ಹೊರಬಂದರು ಸರಿಯೇ ಅಗತ್ಯಮಿರಿ ಕೆಲಸ ಮಾಡುವುದಿಲ್ಲ. ನಾನು ನನ್ನ ಕೆಲಸವನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts