More

    ಟೋರ್ಕಮ್​ ಗಡಿ ಮೂಲಕ ಪಾಕ್​ ತೊರೆದ 1.7 ಲಕ್ಷ ವಲಸಿಗರು!

    ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ಅಕ್ರಮವಾಗಿ ತಂಗಿರುವ ವಿದೇಶಿ ಪ್ರಜೆಗಳನ್ನು ಹೊರಹಾಕುವ ಅಭಿಯಾನದ ಭಾಗವಾಗಿ 6,500ಕ್ಕೂ ಹೆಚ್ಚು ಅಫ್ಘಾನಿಸ್ತಾನ ನಾಗರಿಕರು ಟೋರ್ಕಮ್​ ಗಡಿಯ ಮೂಲಕ ದೇಶ ತೊರೆದಿದ್ದಾರೆ.

    ಪಾಕಿಸ್ತಾನದಿಂದ ಹೊರಹೋಗಿರುವ ಅಫ್ಘಾನ್​ ಪ್ರಜೆಗಳ ಒಟ್ಟು ಸಂಖ್ಯೆ 1,70,000 ಮೀರಿದೆ ಎಂದು ಗಡಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಸೆ.17 ರಿಂದ ಒಟ್ಟು 1,74,358 ಆಫ್ಘನ್​ ನಾಗರಿಕರು ಎರಡು ಪ್ರಮುಖ ಗಡಿಗಳಾದ ಟೋರ್ಕಮ್​ ಮತ್ತು ಚಮನ್​ ಮೂಲಕ ತಮ್ಮ ದೇಶಕ್ಕೆ ಮರಳುತ್ತಿದ್ದಾರೆ.

    ವಲಸಿಗರಿಗೆ ನೀಡಲಾದ ಕಾಲಮಿತಿ ಮುಗಿಯುವವರೆಗೂ ದೇಶದ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಇದ್ದರು. ಆದರೆ ಈಗ ಅದು ಕಡಿಮೆಯಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳು ನ. 1ರೊಳಗೆ ಪಾಕಿಸ್ತಾನವನ್ನು ತೊರೆಯುವಂತೆ ಅಲ್ಲಿನ ಸರ್ಕಾರ ಆದೇಶಿಸಿತ್ತು. ಒಂದು ವೇಳೆ ಹಾಗೆ ಮಾಡಲು ವಿಫಲವಾದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿತ್ತು. ಆದೇಶದ ನಂತರ ಅಕ್ರಮವಾಗಿ ವಾಸಿಸುತ್ತಿದ್ದ ವಿದೇಶಿ ಪ್ರಜೆಗಳು ಸ್ವಯಂಪ್ರೇರಿತವಾಗಿ ತಮ್ಮ ದೇಶಕ್ಕೆ ತೆರಳುತ್ತಿದ್ದಾರೆ ಎನ್ನಲಾಗಿದೆ.

    209 ಕೈದಿಗಳ ಬಿಡುಗಡೆ

    ಅಧಿಕೃತ ಅಂಕಿಅಂಶಗಳ ಪ್ರಕಾರ, ಖೈಬರ್​ ಪಖ್ತುಂಖ್ವಾ ಮತ್ತು ಪಂಜಾಬ್​ನ ವಿವಿಧ ಜೈಲುಗಳಿಂದ 209 ಕೈದಿಗಳನ್ನು, 46,936 ಪುರುಷರು, 35,507 ಮಹಿಳೆಯರು ಮತ್ತು 85,331 ಮಕ್ಕಳನ್ನು ವಾಪಸ್​ ಕಳುಹಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts