More

    ಚುನಾವಣೆ ಗೆಲ್ಲಲು ಏನ್ ಬೇಕಾದರು ಮಾಡ್ತಾರೆ: ಬಿಜೆಪಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

    ನವದೆಹಲಿ: ವಿವಾದಾತ್ಮಕ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಚಲಾವಣೆಯಲ್ಲಿ ‘ಅಸಿಂಧು’ಗೊಳಿಸಲಾದ ಎಂಟು ಮತಗಳನ್ನೂ ಸೇರಿಸಿ ಮತಗಳ ಮರುಎಣಿಕೆ ಮಾಡಿ ಫಲಿತಾಂಶ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ, ಎಎಫ್‌ಎಫ್‌ನ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇದನ್ನೂ ಓದಿ:ಕಾರ್ತಿಕೆಯಾ 2 ಖ್ಯಾತಿಯ ನಟ ನಿಖಿಲ್ ಸಿದ್ಧಾರ್ಥ್, ಪಲ್ಲವಿ ದಂಪತಿಗೆ ಗಂಡು ಮಗು ಜನನ

    ವಿಧಾನಸೌದ ಅಧಿವೇನದಲ್ಲಿ ಮಾತನಾಡಿದ ಸಿಎಂ ಕೇಜ್ರಿವಾಲ್​, ಚುನಾವಣೆ ಗೆಲ್ಲಲು ಬಿಜೆಪಿ ಏನು ಬೇಕಾದರೂ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
    ಭಗವದ್ಗೀತೆಯಿಂದ ಉಲ್ಲೇಖಿಸಿ ಮಾತನಾಡಿದ ಕೇಜ್ರಿವಾಲ್, ದೇವರು ಅವರ (ಬಿಜೆಪಿ) ನಿಜವಾದ ರೂಪವನ್ನು ಜನರ ಮುಂದೆ ಇಟ್ಟಿದ್ದಾನೆ. ಈ ಸಂದರ್ಭದಲ್ಲಿ ಅವರು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಸಲ್ಲಿಸಿದರು. ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿದರು.

    ಜನವರಿ 30ರ ಚುನಾವಣಾ ಫಲಿತಾಂಶವನ್ನು ಬದಿಗೊತ್ತಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೇಸರಿ ಪಕ್ಷ ಚುನಾವಣೆ ಗೆಲ್ಲಲು ಏನು ಬೇಕಾದರೂ ಮಾಡುತ್ತದೆ. ಸಿಎಂ ಅರವಿಂದ್ ಕೇಜ್ರೆವಾಲ್ ಅವರು ಶಾಸಕರನ್ನು ಆಮಿಷವೊಡ್ಡಲು ಮತ್ತು ಸರ್ಕಾರಗಳನ್ನು ಬಹಿರಂಗವಾಗಿ ಬೀಳಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ. ಪಕ್ಷ ಏನೇ ಪ್ರಯತ್ನ ಮಾಡಿದರೂ ಅಂತಿಮವಾಗಿ ಧರ್ಮವೇ ಗೆಲ್ಲುತ್ತದೆ ಎಂದರು.

    ಶ್ರೀರಾಮ, ಕೃಷ್ಣ, ಶಿವ-ಪಾರ್ವತಿಯ ಎಲ್ಲಾ ಭಕ್ತರು ದೇಶದಲ್ಲಿದ್ದಾರೆ. ಅಂತಿಮವಾಗಿ ಬಿಜೆಪಿಯ “ಅಧರ್ಮ” ಕೊನೆಗೊಳ್ಳುತ್ತದೆ ಮತ್ತು “ಧರ್ಮ ಮೇಲುಗೈ ಸಾಧಿಸುತ್ತದೆ ಎಂದು ಹೇಳಿದರು.

    ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ರೈತರನ್ನು ನಗರ ಪ್ರವೇಶಿಸಲು ಏಕೆ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡದೆ ಅವರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ಟೀಕಿಸಿದರು.

    ದೇವಸ್ಥಾನ ಪ್ರಸಾದ ಸೇವಿಸಿ 300 ಮಂದಿ ಅಸ್ವಸ್ಥ: ರೋಗಿಗಳಿಗೆ ರಸ್ತೆಯಲ್ಲೇ ಚಿಕಿತ್ಸೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts