More

    ಕರೊನಾಗೆ ನಮ್ಮಲ್ಲಿದೆ ಗುರಾಣಿ : ದೆಹಲಿ ಸಿಎಂ ಕೇಜ್ರಿವಾಲ್

    ನವದೆಹಲಿ: ನಾಡಿ ಆಕ್ಸಿಮೀಟರ್‌ ಸಹಾಯದಿಂದ ಹೋಮ್ ಐಸೋಲೇಷನ್ ನಲ್ಲಿಯೇ ಕೋವಿಡ್ -19 ನಿಂದ ಸಂಭವಿಸಬಹುದಾದ ಸಾವಿನ ಪ್ರಕರಣಗಳನ್ನು ತಗ್ಗಿಸಲು ನಮಗೆ ಈಗ ಸಾಧ್ಯವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.
    ಅವರು ಇದನ್ನು ರಕ್ಷಣಾತ್ಮಕ ಅಸ್ತ್ರ ಅಥವಾ “ಸುರಕ್ಷಾ ಕವಾಚ್” ಎಂದು ಬಣ್ಣಿಸಿದ್ದಾರೆ. “ರೋಗಿಗಳು ತಮಗೆ ಆಮ್ಲಜನಕ ಪ್ರಮಾಣ ಕುಸಿಯುತ್ತಿರುವುದು ಕಂಡುಬಂದರೆ, ಅವರು ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಬಹುದು. ನಾವು ತಕ್ಷಣವೇ ಅವರ ಮನೆಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಕಳುಹಿಸುತ್ತೇವೆ ಅಥವಾ ಆಸ್ಪತ್ರೆಗೆ ಕರೆದೊಯ್ಯುತ್ತೇವೆ ”ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

    ಇದನ್ನು ಓದಿ: ಗುಡ್​ನ್ಯೂಸ್…! ವಿಮಾನಯಾನಕ್ಕೆ ಅನುಮತಿ ಪಡೆಯಲು ಇನ್ನು ಮೂರು ವಾರಗಳ ಮಾನದಂಡ ಪೂರೈಸಿದರೆ ಸಾಕು….

    ಕೋವಿಡ್ -19 ದೃಢಪಟ್ಟ ತನ್ನ ಸ್ನೇಹಿತನಿಗೆ ಸಮಯಕ್ಕೆ ಸರಿಯಾಗಿ ಆಕ್ಸಿಮೀಟರ್ ತಲುಪಿಸಿದ ದೆಹಲಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಟ್ವೀಟರ್ ಬಳಕೆದಾರರೊಬ್ಬರಿಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ ಈ ರೀತಿ ಹೇಳಿದ್ದಾರೆ.
    ಕಳೆದ ತಿಂಗಳು, ಭಾಷಣವೊಂದರಲ್ಲಿ, ಕೇಜ್ರಿವಾಲ್ ಅವರು ಮಾತನಾಡುತ್ತ ‘ಹೋಮ್ ಕ್ವಾರಂಟೈನ್ ನಲ್ಲಿರುವ ಕೋವಿಡ್ ರೋಗಿಗಳು ಎದುರಿಸುತ್ತಿರುವ ಒಂದು ಸಮಸ್ಯೆಯೆಂದರೆ, ಆಮ್ಲಜನಕದ ಮಟ್ಟವು ಹಠಾತ್ತಾಗಿ ಇಳಿಯುವುದು. ಅಂತಹ ಎಲ್ಲಾ ರೋಗಿಗಳಿಗೆ ಅವರ ಆಮ್ಲಜನಕದ ಮಟ್ಟ ನಿರ್ವಹಿಸಲು ನಾಡಿ ಆಕ್ಸಿಮೀಟರ್‌ಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರಲ್ಲದೆ ರೋಗಿಯು ಚೇತರಿಸಿಕೊಂಡ ನಂತರ, ಆಕ್ಸಿಮೀಟರ್‌ಗಳನ್ನು ಹಿಂತಿರುಗಿಸಬಹುದು ಎಂದು ತಿಳಿಸಿದರು.

    ಅಮಿತಾಭ್​ ಬಚ್ಚನ್​, ಅಭಿಷೇಕ್​ ಬಚ್ಚನ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ ನೇಪಾಳ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts