More

    ಮಕ್ಕಳ ವಿದ್ಯಾಭ್ಯಾಸದ ಮೇಲಿರಲಿ ನಿಗಾ

    ನರೇಗಲ್ಲ: ಪಾಲಕರು ಮಕ್ಕಳ ಚಲನ ವಲನಗಳ ಮೇಲೆ ನಿಗಾ ಇಡಬೇಕು. ಅವರ ವ್ಯಕ್ತಿತ್ವ ರೂಪಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಗಮನ ಹರಿಸಬೇಕು ಎಂದು ಮುಖ್ಯಶಿಕ್ಷಕ ಎಸ್.ಎನ್. ಹೂಲಗೇರಿ ಹೇಳಿದರು.

    ಪಟ್ಟಣದ ಶ್ರೀಅನ್ನದಾನ ವಿಜಯಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೊಬೈಲ್‌ಗಳಿಂದ ಮಕ್ಕಳನ್ನು ದೂರವಿಡಬೇಕು. ಕಾಲ ಕಾಲಕ್ಕೆ ಶಾಲೆಗೆ ಭೇಟಿ ನೀಡಿ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯ ಬಗ್ಗೆ ಪರಾಮರ್ಶಿಸಬೇಕು ಎಂದರು.

    ಶಿಕ್ಷಕ ಎ.ಟಿ. ಮಳ್ಳಳ್ಳಿ ಮಾತನಾಡಿದರು. ಪಾಲಕರ ಪ್ರತಿನಿಧಿಯಾಗಿ ಜ್ಯೋತಿ ಹಿರೇಮಠ, ದೇವೇಂದ್ರಗೌಡ ಸಣ್ಣಮಲ್ಲನಗೌಡ್ರ ಪಾಲ್ಗೊಂಡಿದ್ದರು. ಎಸ್.ಎಫ್. ಧರ್ಮಾಯತ, ಎಂ.ಎಸ್. ಅತ್ತಾರ, ಆರ್.ಎಂ.ಶಿಳ್ಳಿನ, ವಿ.ಸಿ. ಚುಳಕಿಮಠ, ಸಂಗಮೇಶ ಕುರಡಗಿ, ಎಸ್.ಶಿವಮೂರ್ತಿ ಇತರರು ಇದ್ದರು. ಶಿಕ್ಷಕ ಬಿ.ಡಿ ಯರಗೊಪ್ಪ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts