More

    ಅಮರನಾಥದಲ್ಲಿ ಮೇಘಸ್ಫೋಟ ಬೆನ್ನಲ್ಲೇ ಕೇದರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

    ನವದೆಹಲಿ: ಅಮರನಾಥದಲ್ಲಿ ಮೇಘಸ್ಫೋಟ ಸಂಭವಿಸಿದ ಬೆನ್ನಲ್ಲೇ ಕೇದರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ನಡುವೆ ಭಾರೀ ಮಳೆ ಮುಂದುವರಿದಿದ್ದು, ಹವಮಾನ ವೈಪರಿತ್ಯದಿಂದ ಯಾತ್ರೆಯನ್ನು ಸ್ಥಗಿತಗೊಳಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಸೋನಪ್ರಯಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಹಾಗೂ ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾಡಳಿತ ತಿಳಿಸಿದೆ.

    ಅಮರನಾಥ ಗುಹಾ ದೇಗುಲದ ಬಳಿ ಸಂಭವಿಸಿದ ಮೇಘಾಸ್ಫೋಟದಿಂದಾಗಿ 16 ಮಂದಿ ಮೃತಪಟ್ಟಿದ್ದು, 15 ಸಾವಿರಕ್ಕೂ ಅಧಿಕ ಯಾತ್ರಿಕರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ. ಈ ನಡುವೆ ಸೇನೆಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

    ಭಾರೀ ಮಳೆಯಿಂದ 2014ರಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು. ಈ ಬಾರಿಯೂ ಇದೇ ರೀತಿ ಮಳೆ ಮುಂದುವರಿದರೆ ಮತ್ತೆ ಪ್ರವಾಹ ಎದುರಾಗುವ ಭೀತಿಯಿಂದಾಗಿ ಯಾತ್ರೆಯನ್ನೇ ರದ್ದುಗೊಳಿಸಲಾಗಿದೆ. (ಏಜೆನ್ಸೀಸ್​)

    ಎಲ್ಲೆಡೆ ಮಳೆ ಜತೆಗೆ ಶೀತಗಾಳಿ ಅನುಭವ: ರಾಜ್ಯದಲ್ಲಿ ಇನ್ನೆಷ್ಟು ದಿನ ಇರಲಿದೆ ಮಳೆ? ಇಲ್ಲಿದೆ ಸಂಪೂರ್ಣ ವಿವರ

    ಮಲೈಕಾ ಬಟ್ಟೆ ನೋಡಿ ಗಾಬರಿಯಾದ ನೆಟ್ಟಿಗರು ಹೇಳಿದ್ದು ಹೀಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts