More

    ಸೂರಗೊಂಡನಕೊಪ್ಪಕ್ಕೆ ಮಾಲಾಧಾರಿಗಳ ಪಾದಯಾತ್ರೆ

    ಹೂವಿನಹಡಗಲಿ: ಸಂತ ಸೇವಾಲಾಲ್ ಜಯಂತ್ಯುತ್ಸವದ ಅಂಗವಾಗಿ ಅವರ ಜನ್ಮಸ್ಥಳ ಸೂರಗೊಂಡನಕೊಪ್ಪ ಗ್ರಾಮಕ್ಕೆ ತಾಲೂಕಿನ ಲಿಂಗನಾಯಕನಹಳ್ಳಿ ತಾಂಡಾದ ಸೇವಾಲಾಲ್ ಮಾಲಾಧಾರಿಗಳು ಭಾನುವಾರ ಪಾದಯಾತ್ರೆ ಕೈಗೊಂಡರು.

    ಗ್ರಾಮದ 60ಕ್ಕಿಂತ ಹೆಚ್ಚು ಭಕ್ತರು ಮಾಲೆ ಧರಿಸಿದ್ದು, ಸೇವಾಲಾಲರ ನಾಮಸ್ಮರಣೆ, ಭಜನೆಯೊಂದಿಗೆ ಹೆಜ್ಜೆ ಹಾಕಿದರು. ರಾಣೆಬೆನ್ನೂರು, ಹಲಗೇರಿ, ಹೊನ್ನಾಳಿ, ಸವಳಂಗ ಮಾರ್ಗವಾಗಿ ನ್ಯಾಮತಿ ತಾಲೂಕಿನ ಸೂರಗೊಂಡಕೊಪ್ಪಗೆ ತಲುಪಲಿದ್ದು, ಫೆ.15ರಂದು ನಡೆಯಲಿರುವ ಸೇವಾಲಾಲ್ ಅವರ 285ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಗ್ರಾಮಕ್ಕೆ ಮರಳಲಿದ್ದಾರೆ.

    ಸೇವಾಲಾಲ್ ದೇವಸ್ಥಾನದ ಪೂಜಾರಿ ಬೋಧ್ಯನಾಯ್ಕ ರಾಠೋಡ್, ಮಾಲಾಧಾರಿಗಳಾದ ನಿಂಗಾನಾಯ್ಕ ರಾಠೋಡ್, ರವಿನಾಯ್ಕ ರಾಠೋಡ್, ಗಣೇಶ್, ಗೌಡ್ರ ವೆಂಕಟೇಶ್ ನಾಯ್ಕ, ಶಂಕರನಾಯ್ಕ, ದೇವರಾಜ ಕಟ್ಟಿ, ಗ್ರಾಪಂ ಸದಸ್ಯ ಸೋಮಪ್ಪ ಗೌಡ, ಮಾಜಿ ಅಧ್ಯಕ್ಷ ಪರಶುರಾಮ ಬಣಕಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts