More

    25 ವರ್ಷಗಳ ನಂತರ ಆಂಗ್ಲರ ಎದುರು ಸರಣಿ ಗೆದ್ದ ವಿಂಡೀಸ್ : 3ನೇ ಏಕದಿನ ಪಂದ್ಯದಲ್ಲಿ 4 ವಿಕೆಟ್ ಜಯ

    ಬ್ರಿಡ್ಜ್‌ಟೌನ್: ಸರ್ವಾಂಗೀಣ ನಿರ್ವಹಣೆ ತೋರಿದ ಆತಿಥೇಯ ವೆಸ್ಟ್ ಇಂಡೀಸ್ ತಂಡ ಮಳೆ ಬಾಧಿತ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಎದುರು ಡಕ್ವರ್ತ್ ಲೂಯಿಸ್ ನಿಯಮದನ್ವಯ 4 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ 2-1 ರಿಂದ ಸರಣಿ ವಶಪಡಿಸಿಕೊಂಡಿದೆ. ಇದರೊಂದಿಗೆ ವಿಂಡೀಸ್ ತವರಿನಲ್ಲಿ 25 ವರ್ಷಗಳ ನಂತರ ಇಂಗ್ಲೆಂಡ್ ಎದುರು ಏಕದಿನ ಸರಣಿ ಜಯಿಸಿದಂತಾಗಿದೆ.

    ಭಾನುವಾರ ನಡೆದ ಪಂದ್ಯದಲ್ಲಿ ಮಳೆಯಿಂದಾಗಿ 40 ಓವರ್‌ಗೆ ಪಂದ್ಯವನ್ನು ಕಡಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಮ್ಯಾಥ್ಯೂ ಪೋರ್ಡೆ (29ಕ್ಕೆ3) ದಾಳಿಗೆ ಸಿಲುಕಿ 40 ಓವರ್‌ಗಳಲ್ಲಿ 9 ವಿಕೆಟ್‌ಗೆ 206 ರನ್‌ಗಳಿಸಿತು. ನಂತರ ಡಿಎಲ್‌ಎಸ್ ನಿಯಮ ಪ್ರಕಾರ 34 ಓವರ್‌ಗಳಲ್ಲಿ 191 ರನ್‌ಗಳ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್, ಕೀಸ್ ಕಾರ್ಟಿ (50 ರನ್, 58 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧಶತಕ ನೆರವಿನಿಂದ 31.4 ಓವರ್‌ಗಳಲ್ಲಿ 6 ವಿಕೆಟ್‌ಗೆ 191 ರನ್‌ಗಳಿಸಿ ಗೆಲುವಿನ ಕೇಕೆ ಹಾಕಿತು.

    ಇಂಗ್ಲೆಂಡ್: 40 ಓವರ್‌ಗಳಲ್ಲಿ 9 ವಿಕೆಟ್‌ಗೆ 206 (ಜಾಕ್ಸ್ 17, ಬೆನ್ ಡಕೆಟ್ 71, ಲಿಯಾಮ್ 45, ಅಟ್ಕಿನ್ಸನ್ 20*,ಮ್ಯಾಥ್ಯೂ ಪೋರ್ಡೆ 29ಕ್ಕೆ3,ಅಲ್ಜಾರಿ 61ಕ್ಕೆ3).
    ವಿಂಡೀಸ್: 31.4 ಓವರ್‌ಗಳಲ್ಲಿ 6 ವಿಕೆಟ್‌ಗೆ 191 (ಅಥೆನಾಜೆ 45, ಕೀಸ್ ಕಾರ್ಟಿ 50, ರೋಮಾರಿಯೋ 41*, ಪೋರ್ಡೆ 13, ವಿಲ್ ಜಾಕ್ಸ್ 22ಕ್ಕೆ3). ಪಂದ್ಯಶ್ರೇಷ್ಠ: ಮ್ಯಾಥ್ಯೂ ಪೋರ್ಡೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts