ಅಳವಂಡಿ: ಶಿಕ್ಷಣದಿಂದ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯವಾಗಲಿದ್ದು, ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಇಟಗಿಯ ಶ್ರೀ ಗದಿಗೆಪ್ಪ ಅಜ್ಜ ಹೇಳಿದರು.
ಡಾ.ಅಂಬೇಡ್ಕರ್, ಬಾಬು ಜಗಜೀವನ ರಾಮ್ ಜಯಂತಿ ಅಂಗವಾಗಿ ಕವಲೂರು ಗ್ರಾಮದಲ್ಲಿ ಶ್ರೀ ಶಾಹು ಮಹಾರಾಜ್ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ, ಡಾ.ಅಂಬೇಡ್ಕರ್ ಯುವಕ ಸಂಘ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರ್ ಘೋಷ ವಾಕ್ಯವಾಗಿದ್ದು, ಅವರ ಆಶಯದಂತೆ ಎಲ್ಲರೂ ಶಿಕ್ಷಣವಂತರಾಗಬೇಕು. ಸಾಮೂಹಿಕ ವಿವಾಹದಿಂದ ಬಡವರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಸರಳ ವಿವಾಹಗಳು ಒಗ್ಗಟ್ಟಿನ ಭಾವನೆ ಮೂಡಿಸುತ್ತವೆ. ಹೊಸ ಜೋಡಿಗಳು ಅನ್ಯೋನ್ಯದಿಂದ ಜೀವನ ನಡೆಸಬೇಕು ಎಂದರು. 13 ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇದನ್ನೂ ಓದಿ: ಥಿಯೇಟರ್ ಒಳಗೆ ನೋಡ ನೋಡ್ತಿದ್ದಂತೆ ಯುವಕ.. ಕಹಿ ಘಟನೆ ಬಿಚ್ಚಿಟ್ಟ ಲೈಂಗಿಕ ಶಿಕ್ಷಣದ ಯೂಟ್ಯೂಬರ್

ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ್ ಮಾತನಾಡಿ, ಶೋಷಿತ, ದಲಿತ, ಹಿಂದುಳಿದ ವರ್ಗಕ್ಕೆ ಸಮಾನ ಹಕ್ಕು ನೀಡಿದ ಡಾ.ಅಂಬೇಡ್ಕರ್ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ದೇಶದಲ್ಲಿ ಹಸಿವನ್ನು ನೀಗಿಸಿದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ ರಾಮ್ ದೇಶದ ಕೃಷಿ ವ್ಯವಸ್ಥೆಗೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.
ಪೂರ್ಣಾನಂದ ಸ್ವಾಮೀಜಿ, ಅರ್ಚಕ ರಣದಪ್ಪ ಪೂಜಾರ, ಪ್ರಮುಖರಾದ ಪ್ರದೀಪಗೌಡ ಮಾಲಿಪಾಟೀಲ್, ಭರಮಪ್ಪ ನಗರ, ತೋಟಪ್ಪ, ಮಹಾಂತೇಶ, ಗುರುಬಸವರಾಜ, ನಾಗರಾಜ, ನಿಂಗಪ್ಪ, ಮುತ್ತಣ್ಣ, ಹನುಮಂತ, ಸಾರೆಪ್ಪ, ಭರಮಪ್ಪ, ದುರುಗೇಶ, ಪ್ರಭು, ನಾಗಪ್ಪ, ಮಲ್ಲಿಕಾರ್ಜುನ, ಮಂಜು, ಚನ್ನಪ್ಪ, ಮುದಕಪ್ಪ, ಪ್ರದೀಪ, ಕೆಂಗಪ್ಪ, ಚಿರಂಜೀವಿ, ಮಾಯಪ್ಪ, ರಾಮಣ್ಣ, ನೀಲಪ್ಪ, ಸುಂಕಪ್ಪ, ಮಹೇಶ, ಮಹಾಲಿಂಗಪ್ಪ, ಭೀಮೇಶಪ್ಪ, ಹೊನ್ನಪ್ಪಗೌಡ ಇತರರಿದ್ದರು.