More

    ಕವಲೂರು ಗ್ರಾಪಂ ವಿಶೇಷ ಸಭೆ,

    ಅಳವಂಡಿ: ಸಮೀಪದ ಕವಲೂರು ಗ್ರಾಮ ಪಂಚಾಯತ ಸಭಾಭವನದಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಲ್ಲಮ್ಮ ಬಾಳಪ್ಪ ಬಿಸರಳ್ಳಿ ಅಧ್ಯಕ್ಷತೆಯಲ್ಲಿ ಬುಧವಾರ ವಿಶೇಷ ಸಭೆ ನಡೆಯಿತು.

    ಇದನ್ನೂ ಓದಿ: ವಶಪಡಿಸಿಕೊಂಡ ಪ್ಲಾಸ್ಟಿಕ್ ಮಾರಾಟಕ್ಕೆ ಯತ್ನ? ನಗರಸಭೆ ಅಧಿಕಾರಿಗಳ ವಿರುದ್ಧ ಆರೋಪ

    ಕಾರ್ಯದರ್ಶಿ ಸಣ್ಣಜಂಬಣ್ಣ ಮಾತನಾಡಿ, ಕವಲೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮೇ, ಸೆರೆಂಟಿಕ್ ರಿನ್ಯೂವೆಬಲ್ ಇಂಡಿಯಾ ಸೋಲಾರ ಕಂಪನಿ ಸೋಲಾರ ಘಟಕ ಸ್ಥಾಪಿಸುತ್ತಿದ್ದು ಎನ್‌ಓಸಿ ಕೊಡುವ ಕುರಿತು ಚರ್ಚಿಸಬೇಕು ಎಂದರು.

    ಸೋಲಾರ ಕಂಪನಿ ಲಿಮಿಟೆಡ್ ಕಂಪನಿಯಾಗಿದ್ದು, ಇದು ಗ್ರಾಪಂ ತೆರಿಗೆ ಕಟ್ಟುವ ಬಗ್ಗೆ ತಿಳಿಸಲಾಗಿತ್ತು. ಈ ಕಂಪನಿ ಸುಮಾರು 700 ಎಕರೆ ಎನ್‌ಎ ಅಗಿರುವ ವಿಚಾರ ತಿಳಿದು ಬಂದಿದೆ.

    ಸರಕಾರದ ನಿಯಮಾವಳಿ ಪ್ರಕಾರ ಎನ್‌ಓಸಿ ಶುಲ್ಕ 50 ಸಾವಿರ ಮತ್ತು ತೆರಿಗೆ ಕಟ್ಟ ಬೇಕಾದ ಮೊತ್ತ 15,42,569 ಗ್ರಾಪಂ ಪಾವತಿಸಬೇಕು. ಒಂದು ವಾರದೊಳಗೆ ತೆರಿಗೆ ಪಾವತಿಸದಿದ್ದರೆ ಗ್ರಾಪಂ ಅಂತಿಮ ನಿರ್ಣಕೈಗೊಳ್ಳುವುದು.

    ಉಪಾಧ್ಯಕ್ಷೆ ಅನ್ನಪೂರ್ಣ ಪೂಜಾರ, ಸದಸ್ಯರಾದ ಲೀಲಾವತಿ ಉಟಗನೂರ, ಶಾಂತವ್ವ ವಡ್ಡರ, ನಾಗರಾಜ ಹಕ್ಕಂಡಿ, ಮುತ್ತಯ್ಯ ಲಿಂಬಿಕಾಯಿಮಠ, ಈರಪ್ಪ ಕೆಳಗಡೆ, ಬದ್ರುದ್ದೀನಶಾ ಮಕಾನದಾರ, ಶರಣಪ್ಪ ಯರಾಶಿ, ರೇಣವ್ವ ಬಂಡಿ,
    ದೀಪ ಪಕೀರಪ್ಪ ಬಂಡಿ, ಗವಿಸಿದ್ದಪ್ಪ ದ್ಯಾಂಪೂರ, ಪದ್ದವ್ವ ರಾಮಣ್ಣಗುಡಿಹಿಂದಲ, ಸಿಬ್ಬಂದಿಗಳಾದ ಲಿಂಗರಾಜ, ನಾಗಯ್ಯ, ರವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts