More

    ಪಾಕಿಸ್ತಾನ ಜಿಂದಾಬಾದ್ ಎಂದಿದ್ದ ಕಾಶ್ಮೀರಿಗಳಿಗೆ ಜಾಮೀನು ಸಿಗಲು ನಮ್ಮ ಪೊಲೀಸರು ಕಾರಣ!

    ಹುಬ್ಬಳ್ಳಿ: ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಕಾಶ್ಮೀರ ಮೂಲದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 2ನೇ ಜೆಎಂಎಫ್‌ಸಿ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ದೊರೆತಿದೆ. ವಿಶೇಷ ಎಂದರೆ, ಧಾರವಾಡ ಜಿಲ್ಲಾ ಪೊಲೀಸರು 90 ದಿನದೊಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸದೆ ಇರುವುದು ಆರೋಪಿಗಳಿಗೆ ಜಾಮೀನು ಪಡೆಯಲು ಅನುಕೂಲವಾಗಿದೆ.

    ಕಾಶ್ಮೀರಿ ಮೂಲದ ಬಾಸಿತ್ ಸೋಫಿ (19), ಆಮೀರ ಮೊಯಿನುದ್ದೀನ ವಾನಿ (21) ಹಾಗೂ ತಾಲಿಬ್ ವಾನಿ (19) ಜಾಮೀನು ಪಡೆದ ಆರೋಪಿಗಳು. ಕೇಂದ್ರ ಸರ್ಕಾರದ ಕೋಟಾದಡಿ ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಉಚಿತ ಸೀಟು ಗಿಟ್ಟಿಸಿಕೊಂಡಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದ ವಿಡಿಯೋ ವೈರಲ್ ಆಗಿತ್ತು. ಆ ಹಿನ್ನೆಲೆಯಲ್ಲಿ ಗೋಕುಲ ರೋಡ್ ಠಾಣೆ ಪೊಲೀಸರು ಫೆ.15ರಂದು ಬಂಧಿಸಿದ್ದರು. ಪೊಲೀಸ್ ಆಯುಕ್ತರು ವೈಯಕ್ತಿಕ ಬಾಂಡ್ ಮೇಲೆ ಅವರನ್ನುಬಿಡುಗಡೆಗೊಳಿಸಿದ್ದರು.

    ಹಿಂದುಪರ ಸಂಘಟನೆಗಳ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಮಿಷನರೇಟ್ ಪೊಲೀಸರು ಆರೋಪಿಗಳನ್ನು ಮತ್ತೆ ಬಂಧಿಸಿ, ಬೆಳಗಾವಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದರು. ಹುಬ್ಬಳ್ಳಿ ಹೊರವಲಯದ ಕೊಟಗೊಂಡಹುಣಸಿ ಗ್ರಾಮದ ಹಾಸ್ಟೆಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಿದ್ದರು. ತನಿಖಾಧಿಖಾರಿ ಜಾಕ್ಸನ್ ಡಿಸೋಜಾ 90 ದಿನದೊಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸದ ಕಾರಣ ಸಿಆರ್‌ಪಿಸಿ 167 ಅಡಿ ನ್ಯಾಯಾಲಯ ಜಾಮೀನು ನೀಡಿದೆ ಎಂದು ತಿಳಿದುಬಂದಿದೆ.

    ಜಾಮೀನು ನೀಡುವಂತೆ ಆರೋಪಿಗಳು ಜಿಲ್ಲಾ ನ್ಯಾಯಾಲಯ ಮೆಟ್ಟಿಲು ಏರಿದ್ದರು. ದೇಶದ್ರೋಹದಂಥ ಪ್ರಕರಣವಾದ್ದರಿಂದ ಆರೋಪಿಗಳಿಗೆ ಜಾಮೀನು ದೊರೆತಿರಲಿಲ್ಲ. ಇದೀಗ ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್‌ಪೆಕ್ಟರ್, ತನಿಖಾಧಿಕಾರಿ ಜಾಕ್ಸನ್ ಡಿಸೋಜಾ ಎಡವಟ್ಟಿನಿಂದಾಗಿ ಆರೋಪಿಗಳಿಗೆ ಸಲೀಸಾಗಿ ಜಾಮೀನು ಸಿಕ್ಕಂತಾಗಿದೆ.

    ಗಂಭೀರ ಪ್ರಕರಣವಾದರೂ 90 ದಿನದೊಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸದ ಕಾರಣ ಆರೋಪಿಗಳಿಗೆ ಸಲೀಸಾಗಿ ಜಾಮೀನು ದೊರೆತಿದೆ. ಇದಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್‌ಪೆಕ್ಟರ್ ಜಾಕ್ಸನ್ ಡಿಸೋಜಾ ನಿರ್ಲಕ್ಷೃವೇ ಕಾರಣ ಎನ್ನಲಾಗಿದೆ. ಆ ಹಿನ್ನಲೆಯಲ್ಲಿ ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ತನಿಖೆಗೆ ಆದೇಶಿಸಿದ್ದಾರೆ. ಗದಗ ಡಿವೈಎಸ್‌ಪಿ ಅವರನ್ನು ತನಿಖೆಗೆ ನೇಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಜಿಲ್ಲೆ ಬಿಟ್ಟು ಬೇರೆಡೆ ಹೋಗದಂತೆ ಆರೋಪಿಗಳಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ ಎನ್ನಲಾಗಿದೆ. ಹಾಗಾಗಿ, ಗ್ರಾಮೀಣ ಠಾಣೆ ಇನ್ಸ್‌ಪೆಕ್ಟರ್ ಜಾಕ್ಸನ್ ಡಿಸೋಜಾ ನೇತೃತ್ವದ ತಂಡ ಬುಧವಾರ ಆರೋಪಿಗಳನ್ನು ಹುಬ್ಬಳ್ಳಿಗೆ ಕರೆತಂದು ಅಜ್ಞಾತ ಸ್ಥಳದಲ್ಲಿ ಇಟ್ಟಿದೆ ಎಂದು ತಿಳಿದು ಬಂದಿದೆ.

    ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಮೂವರು ವಿದ್ಯಾರ್ಥಿಗಳ ಬಂಧನ, ಐದು ದೂರು ದಾಖಲು: ಹುಬ್ಬಳ್ಳಿ ಧಾರವಾಡ ಆಯುಕ್ತ ದಿಲೀಪ್

    ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯ ವಿಡಿಯೋ ಸಾಗರದಲ್ಲಿ ವೈರಲ್

    ಕುಂದಾಪುರದಲ್ಲೂ ಪಾಕ್ ಪರ ಘೋಷಣೆ

    ಪಾಕ್ ಪರ ಘೋಷಣೆ ಬರೆದ ವಿದ್ರೋಹಿಗಳು

    ಪಾಕ್ ಪರ ಘೋಷಣೆ ಕೂಗಿದಾಕೆಗೆ ನಕ್ಸಲ್ ನಂಟು: ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts