More

    ನಾಪತ್ತೆಯಾಗಿ ಉಗ್ರಪಡೆ ಸೇರಿದ ಕಾಶ್ಮೀರಿ ಪದವೀಧರ

    ಶ್ರೀನಗರ: ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಗಂಡರಬಲ್ ಜಿಲ್ಲೆಯಿಂದ ನಾಪತ್ತೆಯಾದ ಪಿಎಚ್​ಡಿ ಪದವೀಧರನೋರ್ವ ಉಗ್ರಗಾಮಿ ಪಡೆ ಸೇರಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
    ಶ್ರೀನಗರ ಜಿಲ್ಲೆಯ ಬೆಮಿನಾ ನಿವಾಸಿ ಹಿಲಾಲ್ ಅಹ್ಮದ್ ಎಂಬಾತನೇ ನಾಪತ್ತೆಯಾಗಿ ಉಗ್ರಪಡೆ ಸೇರಿಕೊಂಡವ.
    ಕಾಶ್ಮೀರ ಐಜಿಪಿ ವಿಜಯ್ ಕುಮಾರ್, ಸುದ್ದಿಗಾರರೊಂದಿಗೆ ಮಾತನಾಡಿ ಅಹ್ಮದ್ ಉಗ್ರಗಾಮಿ ಪಡೆಗೆ ಸೇರಿದ್ದಾನೆಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಸುಶಾಂತ್ ಸಾವಿನ ಕುರಿತು ಸಿಬಿಐ ತನಿಖೆ ನಡೆಯಲಿ: ವಿವಿಧ ಪಕ್ಷಗಳ ಒತ್ತಾಯ

    ಆತನ ಕುಟುಂಬದವರು ಮತ್ತು ಸ್ನೇಹಿತರು ಹೇಳುವಂತೆ ಚಾರಣ, ಪಿಕ್​​ನಿಕ್​​ ಮತ್ತು ವಿಹಾರದ ವೇಳೆ ಆತ ಜೂನ್ 14 ರಂದು ನಾರ್​ನಾಗ್ (ವಾಂಗಟ್) ಪ್ರದೇಶದಿಂದ ನಾಪತ್ತೆಯಾಗಿದ್ದ.
    ಪಿಕ್ನಿಕ್ ವಿಹಾರದ ಸಮಯದಲ್ಲಿ, ಅಹ್ಮದ್ ನ ಸ್ನೇಹಿತರು ಹರ್ಮುಖ್ ಪರ್ವತದ ಬುಡದಲ್ಲಿರುವ ಗಂಗಾಬಲ್ ಸರೋವರಕ್ಕೆ ತೆರಳಿದ್ದರು. ಆತ ನಾರ್​ನಾಗ್​​ನಲ್ಲಿ ಉಳಿದು ಅವರಿಗಾಗಿ ಕಾಯಲು ನಿರ್ಧರಿಸಿದ್ದ. ಆದರೆ ಆತನ ಸ್ನೇಹಿತರು ಮರಳಿ ನಾರ್​​ನಾಗ್​​ಗೆ ಬಂದಾಗ ಆತ ಅಲ್ಲಿರಲಿಲ್ಲ ಎಂದು ಸ್ನೇಹಿತರು ತಿಳಿಸಿದ್ದಾರೆ.

    ಇದನ್ನೂ ಓದಿ: ಗಾಲ್ವಾನ್ ಸಂಘರ್ಷಕ್ಕೆ ಚೀನಾದಲ್ಲಿ ಆದೇಶ ನೀಡಿದವರು ಯಾರು?

    ಕಾಣೆಯಾದ ಯುವಕರನ್ನು ಪತ್ತೆಹಚ್ಚಲು ಸರ್ಕಾರದ ಸಹಾಯ ಕೋರಿ ಸೋಮವಾರ ಅಹ್ಮದ್ ನ ಸಂಬಂಧಿಕರು ಶ್ರೀನಗರದಲ್ಲಿ ಪ್ರತಿಭಟನೆ ನಡೆಸಿದ್ದರು.
    ಈ ವರ್ಷ 49 ಯುವಕರು ವಿವಿಧ ಉಗ್ರಗಾಮಿಗಳಿಗೆ ಸೇರಿದ್ದಾರೆ, ಅದರಲ್ಲಿ 27 ಮಂದಿ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಕಳೆದ ವಾರ ಸೇನೆ ತಿಳಿಸಿದೆ.

    ಇದನ್ನೂ ಓದಿ: ಗಡಿ ಪರಿಸ್ಥಿತಿ ಕುರಿತು ಕೇಂದ್ರ ತಪ್ಪು ಮಾಹಿತಿ ನೀಡಿದೆ ಎಂದ ಮನಮೋಹನ್ ಸಿಂಗ್

    ” ಯುವಕರ ಕ್ರಿಯಾಶೀಲತೆಯನ್ನು ತಟಸ್ಥಗೊಳಿಸುವುದರಿಂದ ನಮಗೆ ಸಂತೋಷವಾಗುವುದಿಲ್ಲ ನಿಜ, ಆದರೆ ಯಾರಾದರೂ ಶಸ್ತ್ರಾಸ್ತ್ರಗಳಿಂದ ಇತರರಿಗೆ ಹಾನಿಯನ್ನುಂಟುಮಾಡುತ್ತಿದ್ದರೆ, ನಾವು ಮಾಡಬೇಕಾದುದ್ದನ್ನು ಮಾಡುತ್ತೇವೆ. ಆದರೆ ಇಂಥ ಚಟುವಟಿಕೆಗಳನ್ನು ಸಂಪೂರ್ಣ ನಿಲ್ಲಿಸಲು, ಹೆಚ್ಚಿನ ಕ್ರಮಗಳು, ಹಂತಗಳು ಬೇಕು ಎಂದು ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ನ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ), ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ಇದನ್ನೂ ಓದಿ: ಈ ವರ್ಷ ಭಾರತೀಯರಿಗಿಲ್ಲ ಹಜ್ ಯಾತ್ರೆ

    ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಮಾತನಾಡಿ, ಉಗ್ರಗಾಮಿ ಪಡೆಗೆ ಸೇರುವ ಕಾಶ್ಮೀರಿ ಯುವಕರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
    “ನಾಗರಿಕ ಸಮಾಜ, ಪೋಷಕರು, ಪೊಲೀಸ್ ಅಧಿಕಾರಿಗಳ ಜಂಟಿ ಪ್ರಯತ್ನದಿಂದಾಗಿ ಇಂಥ ಉಗ್ರಗಾಮಿ ನೇಮಕಾತಿ ಪ್ರಕ್ರಿಯೆ ಗಣನೀಯವಾಗಿ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ನಾವು ಅನೇಕ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.

    ಗಲ್ವಾನ್ ಕಣಿವೆ ಸಂಘರ್ಷ: ಅಮೆರಿಕ ಗುಪ್ತಚರ ವರದಿ ಬಿಚ್ಚಿಟ್ಟ ರಹಸ್ಯವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts