More

    ಮಾಸ್ಕ್​ ಬಳಕೆಯ ಜಾಗೃತಿ ಮೂಡಿಸಲು ಈ ದಿನಪತ್ರಿಕೆ ಏನು ಮಾಡಿದೆ ನೋಡಿ…

    ನವದೆಹಲಿ: ಭಾರತದ ಇತರೆಡೆಗಳಂತೆ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಕೂಡ ಕೋವಿಡ್​-ಪಿಡುಗಿನ ಹಾವಳಿ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಈ ರಾಜ್ಯದಲ್ಲಿ ಮಾಸ್ಕ್​ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ಕಾಶ್ಮೀರದ ದಿನಪತ್ರಿಕೆಯೊಂದು ವಿಶಿಷ್ಟ ಮಾದರಿ ಅನುಸರಿಸಿ ಜನಮಾನಸವನ್ನು ಗೆದ್ದಿದೆ.

    ಡೈಲಿ ರೋಶ್ನಿ ಎಂಬ ಪತ್ರಿಕೆ ತನ್ನ ಮಂಗಳವಾರದ ದಿನಪತ್ರಿಕೆಗಳಿಗೆ ಮಾಸ್ಕ್​ಗಳನ್ನು ಲಗತ್ತಿಸಿ, ಮಾಸ್ಕ್​ನ ಬಳಕೆ ಅತ್ಯಗತ್ಯವಾಗಿದೆ ಎಂಬ ಸಂದೇಶದೊಂದಿಗೆ ತನ್ನ ಗ್ರಾಹಕರೆಲ್ಲರಲ್ಲೂ ಜಾಗೃತಿ ಮೂಡಿಸಲು ಪ್ರಯತ್ನಿಸಿದೆ.

    ಮಾಸ್ಕ್​ಗಳನ್ನು ಪ್ಯಾಕ್​ ಮಾಡಿ, ಪತ್ರಿಕೆಗಳಿಗೆ ಅಂಟಿಸಲು ನಾವು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕಾಯಿತು. ಮಾಸ್ಕ್​ಗಳನ್ನು ಲಗತ್ತಿಸಲಾದ ಪ್ರತಿಕೆಗಳನ್ನು ಸಕಾಲದಲ್ಲಿ ಮಾರುಕಟ್ಟೆಗೆ ತಲುಪಿಸುವಲ್ಲಿ ಈ ಸಿಬ್ಬಂದಿಯ ಶ್ರಮ ಶ್ಲಾಘನಾರ್ಹ ಎಂದು ಪತ್ರಿಕೆಯ ಮುಖ್ಯ ಸಂಪಾದಕ ಝಹೂರ್​ ಅಹಮದ್​ ಶೋರಾ ಹೇಳಿದ್ದಾರೆ.

    ಇದನ್ನೂ ಓದಿ: ವಾಲ್ವ್​ ಇರುವ ಎನ್​95 ಮಾಸ್ಕ್​ಗಳನ್ನು ಬಳಸ ಬೇಡಿ, ಅನುಕೂಲಕ್ಕಿಂತ ಅನನಕೂಲವೇ ಹೆಚ್ಚು

    ಪ್ರತಿಯೊಂದು ಪತ್ರಿಕೆಗೆ ಮಾಸ್ಕ್​ಗಳನ್ನು ಲಗತ್ತಿಸಿ, ಅವುಗಳ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಐಡಿಯಾ ಜೆಹಾದ್​ ಶೋರಾ ಅವರದ್ದಾಗಿತ್ತು. ಸಮಾಜದ ಒಳಿತಿಗಾಗಿ ಒಂದಷ್ಟು ಕ್ರಿಯಾಶೀಲತೆಯನ್ನು ಬೆರೆಸುವುದು ನಮ್ಮ ಉದ್ದೇಶವಾಗಿತ್ತು ಎಂದು ತಿಳಿಸಿದ್ದಾರೆ.

    ಕಾಶ್ಮೀರ ಕಣಿವೆಯಲ್ಲಿ ಕರೊನಾ ವೈರಾಣು ಸೋಂಕು ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸರ್ಕಾರ ಕಣಿವೆ ರಾಜ್ಯದಲ್ಲಿ ಜು.12ರಿಂದ ಮತ್ತೊಮ್ಮೆ ಸಂಪೂರ್ಣ ಲಾಕ್​ಡೌನ್​ ಜಾರಿಗೊಳಿಸಿದೆ. ಲಡಾಖ್​ ಕೇಂದ್ರಾಡಳಿತ ಪ್ರದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 14,650ಕ್ಕೆ ಹೆಚ್ಚಳವಾಗಿದ್ದು, ಇದುವರೆಗೆ 259 ಜನರ ಮರಣಿಸಿದ್ದಾರೆ.

    35 ವರ್ಷಗಳ ಬಳಿಕ ತೀರ್ಪು: ರಾಜಸ್ಥಾನದ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಕೊಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts