More

    ಮೌಲ್ಯಾಧರಿತ, ಸಂಸ್ಕರಾಯುತ ಜೀವನ, ಶ್ರೀ ದತ್ತಾನಂದ ಸರಸ್ವತಿ ಆಶೀರ್ವಚನ- ಕಶೆಕೋಡಿ ದೇವಸ್ಥಾನದಲ್ಲಿ ಲಕ್ಷ ತುಳಸಿ ಅರ್ಚನೆ

    ಮಂಗಳೂರು: ಶ್ರೀ ಕ್ಷೇತ್ರ ಕಶೆಕೋಡಿಯಲ್ಲಿ ದಾಬೋಲಿ ಶ್ರೀ ಮಠದ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವರಿಗೆ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಲಕ್ಷ ತುಳಸಿ ಅರ್ಚನೆ ಸಮರ್ಪಿಸಲಾಯಿತು.

    ಆಶೀರ್ವಚನ ನೀಡಿದ ಸ್ವಾಮೀಜಿ, ತುಳಸಿ ಅರ್ಚನೆ, ಬಿಲ್ವ ಪತ್ರಾರ್ಚನೆ, ತುಳಸಿ ಪೂಜೆ ಹಾಗೂ ತುಳಸಿಯ ಮಹತ್ವವನ್ನು ತಿಳಿಸುತ್ತಾ ಪ್ರತಿಯೊಬ್ಬರು ತಮ್ಮ ನಿತ್ಯ ಜೀವನದಲ್ಲಿ ಮೌಲ್ಯಾಧಾರಿತ ಸಂಸ್ಕಾರಯುತ ಹಾಗೂ ಸಂಘಟಿತ ಜೀವನವನ್ನು ನಡೆಸುವಂತೆ ಹಾರೈಸಿದರು.

    ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ, ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸೇವಾ ಟ್ರಸ್ಟ್ ಕರ್ನಾಟಕ, ಪುರೋಹಿತ ವರ್ಗ, ಆಡಳಿತ ಮಂಡಳಿ ಶ್ರೀ ಕ್ಷೇತ್ರ ಕಶೆಕೋಡಿ, ದಾಬೋಲಿ ಶ್ರೀ ಪೂರ್ಣಾನಂದ ಮಂದಿರ ಪುರುಷರ ಕಟ್ಟೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಕ್ಷೇತ್ರದ ಆಡಳಿತ ಮೊಕ್ತೇಸರ ಸಂಜೀವ ನಾಯಕ್ ಕಲ್ಲೇಗ ಮಾತನಾಡಿ, ಶಕ್ತಿಗಿಂತ ಭಕ್ತಿ ಮುಖ್ಯ, ಮಹಾದಾನಗಳಲ್ಲಿ ಸಮಾಧಾನವೇ ಶ್ರೇಷ್ಠ. ಸಂಘಟಿತ ಪ್ರಯತ್ನದಿಂದ ಯಾವುದೇ ಕಠಿಣ ಕೆಲಸಗಳನ್ನು ಸಾಧಿಸಬಹುದು ಎಂದರು.

    ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ಶೆಣೈ ಕೊಡಿಬೈಲು, ಶ್ರೀಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿಜಯ ಶೆಣೈ ಕೊಡಂಗೆ, ಸಂಘದ ಸ್ಥಾಪಕ ಸದಸ್ಯರಾದ ಗೋಪಾಲ ಶೆಣೈ ಕೊಡಂಗೆ ,ಬೆಂಗಳೂರು ಸಂಘದ ಅಧ್ಯಕ್ಷ ವಾಮನ್ ಶೆಣೈ ಹಂಡೀರು, ಅನುವಂಶಿಕ ಮುಕ್ತೇಸರ ಗೋಪಾಲ ಶೆಣೈ ಕಂಠಿಕ, ಸಂಘದ ಕಾರ್ಯದರ್ಶಿ ದಯಾನಂದ ನಾಯಕ್ ಬೆಳ್ತಂಗಡಿ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮುರಳೀಧರ ಪ್ರಭು ವಗ್ಗ , ಸಂಘದ ನಿಕಟಪೂರ್ವ ಅಧ್ಯಕ್ಷ ಗಣಪತಿ ಶೆಣೈ ಡೆಚ್ಚಾರು, ಹಿರಿಯ ಗೋಪಾಲ ಸಾಮಂತ್ ಮೈರ ಉಪಸ್ಥಿತರಿದ್ದರು. ಡಿ.ರಮೇಶ ನಾಯಕ್ ಮೈರ ಪ್ರಸ್ತಾವಿಸಿದರು. ದಯಾನಂದ ನಾಯಕ್ ಬೆಳ್ತಂಗಡಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ನಾಯಕ್ ವಂದಿಸಿದರು. ಮುಚ್ಲುಕೋಡಿ ಶಾಂತರಾಮ ಪ್ರಭು ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts