More

    ಆ್ಯಪ್ ಮೂಲಕ ನೋಂದಣಿ ಕಾರ್ಯಕಾರಿಣಿ ನಿರ್ಣಯ; ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಸ್ಪಷ್ಟನ

    ಹಾವೇರಿ: ಈ ಹಿಂದಿನ ಸಮ್ಮೇಳನಗಳಲ್ಲಿ ಕಸಾಪ ಜಿಲ್ಲಾಧ್ಯಕ್ಷರನ್ನು ಹುಡುಕಿಕೊಂಡು ಹೋಗಿ ಪ್ರತಿನಿಧಿ ನೋಂದಣಿ ಹಾಗೂ ಮಳಿಗೆಗಳ ನೋಂದಣಿ ಮಾಡಬೇಕಾಗಿತ್ತು. ಈ ಪ್ರಕ್ರಿಯೆಯಲ್ಲಿ ಹಲವು ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ಬಾರಿ ತಂತ್ರಜ್ಞಾನ ಬಳಸಿಕೊಂಡು ಆ್ಯಪ್ ಮೂಲಕ ಸಾಹಿತ್ಯ ಸಮ್ಮೇಳನದ ಪ್ರತಿನಿಧಿಯಾಗುವುದಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಇದು ನನ್ನೊಬ್ಬನ ನಿರ್ಧಾರವಲ್ಲ. ಕಾರ್ಯಕಾರಿಣಿ ಸಮಿತಿಯಲ್ಲಿ ಚರ್ಚಿಸಿ ಕೈಗೊಂಡ ನಿರ್ಣಯ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಸ್ಪಷ್ಟಪಡಿಸಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮೇಳನಕ್ಕಾಗಿ ಸರ್ಕಾರ 20 ಕೋಟಿ ರೂ. ಕೊಟ್ಟಿರುವಾಗ 500 ರೂ. ಶುಲ್ಕ ಯಾಕೆ ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ಹಿಂದಿನ ಸಮ್ಮೇಳನದಲ್ಲಿ 250 ರೂ. ಶುಲ್ಕ ಪಡೆಯಲಾಗಿತ್ತು. ಪ್ರತಿನಿಧಿಗಳಾದವರಿಗೆ ಪುಸ್ತಕ, ಪೆನ್, ಊಟ, ಉಪಾಹಾರದ ಕೂಪನ್ ಸೇರಿದಂತೆ ಇತರೆ ವಸ್ತುಗಳಿರುವ ಕಿಟ್ ನೀಡಲಾಗುವುದು. ಈಗ ಎಲ್ಲ ಬೆಲೆಯೂ ಹೆಚ್ಚಾದ ಹಿನ್ನೆಲೆಯಲ್ಲಿ 500 ರೂ. ಪಡೆಯಲಾಗುತ್ತಿದೆ ಎಂದರು.
    ವಚನಗಳಿಗೆ ಶಕ್ತಿ ಕೊಟ್ಟಂಥ ಹಾನಗಲ್ಲ ಕುಮಾರಸ್ವಾಮಿಯವರು ಹಾವೇರಿ ಜಿಲ್ಲೆಯವರು. ಹಾಗಾಗಿ, ವಚನಗೋಷ್ಠಿ ಸೇರಿಸುವಂತೆ ಕೆಲವರು ಸೂಚನೆ ನೀಡಿದ್ದರು. ಅದನ್ನೂ ಸೇರಿಸಲಾಗಿದೆ. ಹಂಪಿ ಉತ್ಸವವನ್ನು ಜನವರಿ 27, 28, 29ಕ್ಕೆ ಮುಂದೂಡಲಾಗಿದೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ವಿದೇಶ ಘಟಕಗಳ ಗೌರವ ಸಂಚಾಲಕ ಪವನ ದೇಸಾಯಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts