More

    ಯಲ್ಲಾಪುರದ ಶಿವಪುರ ಗ್ರಾಮದಲ್ಲಿರುವ ತೂಗು ಸೇತುವೆ ಮೇಲೆ ಕಾರು ಚಲಾಯಿಸಿ ಪುಂಡರ ದುರ್ವರ್ತನೆ

    ಕಾರವಾರ: ಗುಜರಾತ್​​ನಲ್ಲಿ ತೂಗು ಸೇತುವೆ ಕುಸಿದು ನೂರಕ್ಕೂ ಅಧಿಕ ಜನ ಮೃತಪಟ್ಟ ಘಟನೆ ಇಡೀ ದೇಶದ ಜನರನ್ನು ತಲ್ಲಣಗೊಳಿಸಿರುವ ಸಂದರ್ಭದಲ್ಲಿ ಯಲ್ಲಾಪುರ ತಾಲೂಕಿನ ಶಿವಪುರ ಗ್ರಾಮಕ್ಕೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವಿನ ಮೇಲೆ ಅಪರಿಚಿತರು ಕಾರನ್ನು ಚಲಾಯಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

    ಕಾರು ಚಲಾಯಿಸಿದ್ದಲ್ಲದೆ, ಪುಂಡರು ಸ್ಥಳೀಯರೊಡನೆ ದುರ್ವರ್ತನೆ ತೋರಿದ್ದಾರೆ. ಈ ತೂಗು ಸೇತುವೆ ಒಂದು ಐತಿಹಾಸಿಕ ತಾಣ. ಉಳುವಿ ಗ್ರಾಮದಿಮದ ಬರುವ ಅನೇಕ ಜನರು ಶಿವಪುರದ ತೂಗು ಸೇತುವೆಯನ್ನು ನೋಡಿಕೊಂಡು ಹೋಗುತ್ತಾರೆ.

    ಜನರ ಓಡಾಟಕ್ಕೆ ಮಾತ್ರ ಸಾಧ್ಯವಿರುವ ಈ ತೂಗು ಸೇತುವೆಯಲ್ಲಿ ಮಹಾರಾಷ್ಟ್ರ ನೋಂದಣಿಯ ಕಾರು ತಂದು ಸೇತುವೆ ಶಿಥಿಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಕಾರು ತರಬಾರದೆಂದು ಹಿರಿಯರು ಕಿವಿಮಾತು ಹೇಳಿದರು ಸಹ ಕೇಳದೆ ಕಾರು ಓಡಿಸಲಾಗುತ್ತಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

    ಈ ಬಗ್ಗೆ ಸ್ಥಳೀಯ ಆಡಳಿತ ಅಥವಾ ಪೊಲೀಸ್​ ಇಲಾಖೆ ಎಚ್ಚೆತ್ತು ಪುಂಡರ ಹಾವಳಿಗೆ ಬ್ರೇಕ್​ ಹಾಕಿ, ಆತಂಕ ನಿವಾರಿಸಬೇಕು ಎಂಬುದು ಜನರ ಮನವಿ ಆಗಿದೆ. ಈಗಾಗಲೇ ಗುಜರಾತ್​ನಲ್ಲಿ ಸಂಭವಿಸಿದ ದುರಂತದಲ್ಲಿ 141 ಜನ ದುರಂತ ಸಾವಿಗೀಡಾಗಿದ್ದಾರೆ. ಇಂತಹ ಘಟನೆ ಮರುಕಳಿಸದಿರಲಿ ಎಂಬುದು ಜನರ ಆಶಯವಾಗಿದೆ.

    ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ನಟ ವಿಶಾಲ್​: ಕಾರಣ ಹೀಗಿದೆ….

    ನಿಮ್ಮ ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿ ಕುರಿಗಳ ಹಿಂಡಿನ ಮಧ್ಯೆ ಇರುವ ತೋಳವನ್ನು ಪತ್ತೆ ಹಚ್ಚುವಿರಾ?

    ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸರ್ಕಾರಿ ಉದ್ಯೋಗ: ಸಿಎಂ ಬೊಮ್ಮಾಯಿ‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts