More

    ರಾಮಮಂದಿರ ಭೂಮಿ ಪೂಜೆಯ ಮುಹೂರ್ತ ನೋಡಿ ದಿಗ್ಭ್ರಮೆಯಾಗಿದೆ ಎಂದ ಕಾರ್ತಿ ಚಿದಂಬರಂ

    ನವದೆಹಲಿ: ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದ ದಿನ ಹತ್ತಿರ ಬರುತ್ತಿದ್ದಂತೆ, ಆ ಬಗ್ಗೆ ಚರ್ಚೆ ಹೆಚ್ಚಾಗಿಯೇ ನಡೆಯುತ್ತಿದೆ.

    ಪ್ರತಿಪಕ್ಷಗಳ ನಾಯಕರೂ ರಾಮಮಂದಿರ ಭೂಮಿ ಪೂಜೆ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗೇ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರೂ ಕೂಡ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಹಾಗೇ, ಭೂಮಿ ಪೂಜೆ ನಡೆಯಲಿರುವ ಮುಹೂರ್ತ ನೋಡಿ ನನಗೆ ದಿಗ್ಭ್ರಮೆಯಾಗಿದೆ ಎಂದೂ ತಿಳಿಸಿದ್ದಾರೆ.

    ರಾಮಮಂದಿರ ಭೂಮಿ ಪೂಜೆಗೆ ಇಟ್ಟ ಮುಹೂರ್ತ ನೋಡಿ ನಾನು ಕಕ್ಕಾಬಿಕ್ಕಿಯಾಗಿದ್ದೇನೆ. ಜ್ಯೋತಿಷ್ಯದ ಪ್ರಕಾರ ಈಗಿಟ್ಟ ಮುಹೂರ್ತ ಏನು ಗೊತ್ತಾ? ಅಂದು ಬುಧವಾರ 12 ಗಂಟೆಯಿಂದ 1.30ರವರೆಗೆ ರಾಹು ಕಾಲ ಇದೆ. ಅದೇ ಸಮಯದಲ್ಲಿ ಭೂಮಿ ಪೂಜೆ ನಡೆಯಲಿದೆ. ಆದರೆ ರಾಹುಕಾಲದಲ್ಲಿ ಯಾವುದೇ ಶುಭಸಮಾರಂಭಗಳೂ ನಡೆಯುವುದಿಲ್ಲ. ಅಷ್ಟಕ್ಕೂ ನಮಗೆ ಹೊಸ ಪೂಜಾ ಸ್ಥಳಗಳ ಅಗತ್ಯವೂ ಇಲ್ಲ. ನಾನು ಈ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದು ಕಾರ್ತಿ ಹೇಳಿದ್ದಾರೆ. ಇದನ್ನೂ ಓದಿ: ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವತಿಯನ್ನು ರಕ್ಷಿಸಲು ತಮ್ಮ ಜೀವವನ್ನೂ ಲೆಕ್ಕಿಸದೆ ನದಿಗೆ ಹಾರಿದ ಪೊಲೀಸ್​

    ಭಾರತಕ್ಕೆ ಹೊಸ ಮಂದಿರ, ಚರ್ಚ್​, ಮಸೀದಿ, ಗುರುದ್ವಾರಗಳಂತ ಪೂಜಾ ಸ್ಥಳಗಳ ಅಗತ್ಯವೇ ಇಲ್ಲ. ಈಗಾಗಲೇ ಪೂಜೆಗಾಗಿ ಹಲವು ಸ್ಥಳಗಳು ಇವೆ. ಅವುಗಳಲ್ಲೇ ಅನೇಕ ದೇಗುಲ, ಮಸೀದಿ, ಚರ್ಚ್​ಗಳು ಪಾಳುಬಿದ್ದಂತಾಗಿವೆ. ಅವುಗಳನ್ನು ರಕ್ಷಣೆ ಮಾಡಿಕೊಂಡರೆ ಸಾಕು ಎಂದಿದ್ದಾರೆ. (ಏಜೆನ್ಸೀಸ್​)

    ಯೋಗಿ ವಿರುದ್ಧ ದೂರು ಕೊಡಲು ಹೋಗಿದ್ದ ಅತ್ಯಾಚಾರಿಗೀಗ ಜೀವಾವಧಿ ಶಿಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts