More

    ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ: ಅಭಿಮಾನಿಗಳಿಂದ ಸಂಭ್ರಮಾಚರಣೆ

    ಹಾವೇರಿ: ರಾಜ್ಯ ಸರ್ಕಾರ ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೊಷಿಸಿದ ಹಿನ್ನೆಲೆಯಲ್ಲಿ ನಗರದ ಹೊಸಮಠದ ಮುಂಭಾಗದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಬಸವ ಬಳಗದ ಪದಾಧಿಕಾರಿಗಳು, ಬಸವಾಭಿಮಾನಿಗಳು, ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು.

    ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ವಿಶ್ವಗುರು ಬಸವಣ್ಣನವರ ಹೆಸರು ಘೊಷಿಸಿರುವುದು ಕೋಟ್ಯಂತರ ಬಸವಾಭಿಮಾನಿಗಳಿಗೆ ಸಂತಸ ತಂದಿದೆ. ಈ ಮೂಲಕ ಸರ್ಕಾರ ತನ್ನ ಘನತೆ, ಗೌರವ ಹೆಚ್ಚಿಸಿಕೊಂಡಿದೆ ಎಂದರು.

    ಬಸವ ಬಳಗದ ಗೌರವಾಧ್ಯಕ್ಷ ಮುರಿಗೆಪ್ಪ ಕಡೆಕೊಪ್ಪ, ಅಧ್ಯಕ್ಷ ಚನ್ನಬಸವಣ್ಣ ರೊಡ್ಡನವರ, ಉಳಿವೆಪ್ಪ ಪಂಪಣ್ಣನವರ, ಶಿವಬಸಪ್ಪ ಮುದ್ದಿ, ಶಿವಯೋಗಿ ಬೆನ್ನೂರ, ಕೊಟ್ರೇಶ ವಿಜಾಪುರ, ನಾಗೇಂದ್ರಪ್ಪ ಮಂಡಕ್ಕಿ, ಮಾಲತೇಶ ಅಂಗೂರ, ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts