More

    ರಾಜ್ಯಾದ್ಯಂತ ಇನ್ನಷ್ಟು ಬಿರುಸು ಪಡೆದ ಮಳೆ; ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

    ಬೆಂಗಳೂರು: ಕರಾವಳಿ ಸೇರಿ ರಾಜ್ಯಾದ್ಯಂತ ಮಂಗಳವಾರವೂ ವರುಣಾರ್ಭಟ ಮುಂದುವರಿದಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಜು.26ರಂದು ಅತಿ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಅಲ್ಲದೆ, ಈ ಜಿಲ್ಲೆಗಳಲ್ಲಿ ಜು.27ರಂದು ಆರೆಂಜ್ ಅಲರ್ಟ್ ಇದ್ದರೆ, ಜು.28ರಿಂದ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಇರಲಿದೆ.

    ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಬೆಳಗಾವಿಯಲ್ಲಿಯೂ ಮುಂದಿನ 48 ಗಂಟೆ, ಬೀದರ್ ಮತ್ತು ಕಲಬುರಗಿಯಲ್ಲಿ ಜು.27ರಂದು ಭಾರಿ ಮಳೆ ಸುರಿಯುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ. ಹಾಸನ, ಬಳ್ಳಾರಿಯಲ್ಲಿ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಇರಲಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರಿನಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

    ಉತ್ತರ ಕನ್ನಡದ ಕೋಡ್ಕಣಿ 91 ಮಿ.ಮೀ., ಜಗಲ್ಪೇಟೆ 89.5 ಮಿ.ಮೀ.,ಕೊಪ್ಪ 60 ಮಿ.ಮೀ.,ದಕ್ಷಿಣ ಕನ್ನಡದ ಜಿಲ್ಲೆಯ ಸೋಮೇಶ್ವರ 69.5 ಮಿ.ಮೀ., ಪಲ್ಲಡ್ಕ 64.5 ಮಿ.ಮೀ., ದಾವಣಗೆರೆಯ ನಿಲಗೋಳ 80 ಮಿ.ಮೀ., ಬಳ್ಳಾರಿಯ ದೂಪದಹಳ್ಳಿ 62.9 ಮಿ.ಮೀ., ಬೆಳಗಾವಿಯ ಪರವಾಡ 62.5 ಮಿ.ಮೀ.,ಕೊಡಗಿನ ಮಾಡೆಯಲ್ಲಿ 61.5 ಮಿ.ಮೀ, ಉಡುಪಿಯ ನಡಪಾಳುನಲ್ಲಿ 59.5 ಮಿ.ಮೀ ಮಳೆಯಾಗಿದೆ ಎಂದು ವರುಣಾಮಿತ್ರ ಮಾಹಿತಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts