More

    ದೇವದತ್ ಪಡಿಕಲ್ ಅಜೇಯ 99ರನ್, ಕರ್ನಾಟಕ ತಂಡಕ್ಕೆ 2ನೇ ಜಯ

    ವಿಜಯವಾಣಿ ಸುದ್ದಿಜಾಲ, ಬೆಂಗಳೂರು
    ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ (99*ರನ್, 67 ಎಸೆತ, 9 ಬೌಂಡರಿ, 4 ಸಿಕ್ಸರ್) ಶತಕ ವಂಚಿತ ಅಜೇಯ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ಹೋರಾಟದ ಫಲವಾಗಿ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಗೆಲುವಿನ ಹಾದಿ ಹಿಡಿಯಿತು. ಆಲೂರಿನ ಮೂರನೇ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 10 ರನ್‌ಗಳಿಂದ ತ್ರಿಪುರ ತಂಡವನ್ನು ಸೋಲಿಸಿತು. ಇದರೊಂದಿಗೆ ಲೀಗ್‌ನಲ್ಲಿ ಇದುವರೆಗೂ ಆಡಿರುವ 3 ಪಂದ್ಯಗಳಲ್ಲಿ 2 ಜಯ ಹಾಗೂ ಒಂದು ಸೋಲು ಕಂಡಿರುವ ಹಾಲಿ ಚಾಂಪಿಯನ್ ಕರ್ನಾಟಕ ಎಲೈಟ್ ಎ ಗುಂಪಿನಲ್ಲಿ 3ನೇ ಸ್ಥಾನದಲ್ಲಿದೆ.

    ಇದನ್ನೂ ಓದಿ: ಕೇಂದ್ರ ಸಚಿವರ ಕ್ರಿಕೆಟ್ ಅಜ್ಞಾನಕ್ಕೆ ಎರಡೇ ಪದಗಳಲ್ಲಿ ಟಾಂಗ್ ಕೊಟ್ಟ ಹನುಮ ವಿಹಾರಿ!

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ರೋಹನ್ ಕದಂ (31ರನ್, 23 ಎಸೆತ, 4 ಬೌಂಡರಿ) ಹಾಗೂ ದೇವದತ್ ಪಡಿಕಲ್ ಜೋಡಿ ಬಿರುಸಿನ ಆರಂಭದ ನೆರವಿನಿಂದ 5 ವಿಕೆಟ್‌ಗೆ 167 ರನ್ ಕಲೆಹಾಕಿತು. ಪ್ರತಿಯಾಗಿ ನಾಯಕ ಮಣಿಶಂಕರ್ ಮುರಾಸಿಂಗ್ (61*ರನ್, 33 ಎಸೆತ, 3 ಬೌಂಡರಿ, 5 ಸಿಕ್ಸರ್) ಹಾಗೂ ರಜತ್ ಡೇ (44*ರನ್, 29 ಎಸೆತ, 4 ಸಿಕ್ಸರ್) ಜೋಡಿ ಪ್ರತಿಹೋರಾಟದ ನಡುವೆಯೂ 4 ವಿಕಟ್‌ಗೆ 157 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

    ಇದನ್ನೂ ಓದಿ: ಐಪಿಎಲ್ ಹರಾಜಿಗೆ ಮುನ್ನ ಆರ್‌ಸಿಬಿ ತಂಡದಿಂದ ಯಾರು ಔಟ್, ಯಾರು ಸೇಫ್​?

    ಕರ್ನಾಟಕ: 5 ವಿಕೆಟ್‌ಗೆ 167 (ರೋಹನ್ ಕದಂ 31, ದೇವದತ್ ಪಡಿಕಲ್ 99, ರಾಣಾ ದತ್ತಾ 41ಕ್ಕೆ 2, ಮಣಿಶಂಕರ್ ಮುರಾಸಿಂಗ್ 27ಕ್ಕೆ 1, ಸಂಕರ್ ಪೌಲ್ 23ಕ್ಕೆ 1), ತ್ರಿಪುರ : 4 ವಿಕೆಟ್‌ಗೆ 157 (ಮಣಿಶಂಕರ್ ಮುರಾಸಿಂಗ್ 61*, ರಜತ್ ಡೇ 44*, ಮಿಲಿಂದ್ ಕುಮಾರ್ 20, ಅಭಿಮನ್ಯು ಕುಮಾರ್ 28ಕ್ಕೆ 1, ವಾಸುಕಿ ಕೌಶಿಕ್ 45ಕ್ಕೆ 1, ಕೆ.ಗೌತಮ್ 26ಕ್ಕೆ 1, ಪ್ರವೀಣ್ ದುಬೆ 20ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts