More

    ಬುದ್ಧನ ವಿಚಾರಧಾರೆ ಜೀವನದಲ್ಲಿ ಅಳವಡಿಕೊಳ್ಳಿ

    ಚಿಕ್ಕಮಗಳೂರು: ಬುದ್ಧನ ಸಂದೇಶಗಳು ಅಮರ. ಮಹಾತ್ಮರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವೈಚಾರಿಕ ಚಿಂತನೆಗಳನ್ನು ಪಾಲಿಸುವವರು ಬುದ್ಧನ ಅನುಯಾಯಿಗಳಾಗುತ್ತಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ತಿಳಿಸಿದರು.

    ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪರಿಶಿಷ್ಟ ಜಾತಿ, ಪಂಗಡ ಗೌತಮಬುದ್ಧ ಸಹಕಾರ ಸಂಘದಿAದ ಗುರುವಾರ ಏರ್ಪಡಿಸಿದ್ದ ಬುದ್ಧ ಪೂರ್ಣಿಮಾ ಅಂಗವಾಗಿ ವಿಗ್ರಹಕ್ಕೆ ಗುರುವಾರ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬುದ್ಧನ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರಜ್ಞಾವಂತ ಹಾಗೂ ವಿಚಾರವಂತರಾಗಿ ಸನ್ಮಾರ್ಗದಲ್ಲಿ ಸಾಗಬೇಕಿದೆ. ಬುದ್ಧನ ಬೋಧನೆಗಳು ಯಾವುದೇ ಒಂದು ಪ್ರದೇಶ ಅಥವಾ ಜನಾಂಗಕ್ಕೆ ಸೀಮಿತವಾಗಿಲ್ಲ. ಜಗತ್ತಿನಲ್ಲಿ ಶಾಂತಿ, ಸಹೋದರತ್ವ, ಸಹಬಾಳ್ವೆಯ ಜೀವನ ಬಯಸುವವರು ಬುದ್ಧ ಮಾರ್ಗವನ್ನು ಪಾಲಿಸಬೇಕು ಎಂದರು.
    ಬುದ್ಧನ ವಿಚಾರಧಾರೆಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ನಮ್ಮ ಜ್ಞಾನವು ಸಂಪತ್ಭರಿತವಾಗುತ್ತದೆ ಹಾಗೂ ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯವಾಗಲಿದೆ. ಪ್ರತಿಯೊಂದು ಜೀವಿಯನ್ನು ಪ್ರೀತಿಸುವ, ರಕ್ಷಿಸುವ ಮನೋಭಾವ ಬುದ್ಧನ ಮಾರ್ಗವನ್ನು ಅನುಸರಿಸುವುದರಿಂದ ಬರುತ್ತದೆ. ಹೀಗಾಗಿ ಬುದ್ಧನನ್ನು ಪೂಜಿಸುವುದಕ್ಕಿಂತ ಆತನ ಬೋಧನೆಗಳನ್ನು ತಿಳಿದು ವಿಚಾರವಂತರಾಗಿ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.
    ಸಂಘದ ಅಧ್ಯಕ್ಷ ಜಿ.ಕೆ.ಬಸವರಾಜ್ ಮಾತನಾಡಿ, ಸತ್ಯ ಹಾಗೂ ದುಃಖದ ಕಾರಣಗಳನ್ನು ಹುಡುಕುವ ಸಲುವಾಗಿ ಸುಖ ಭೋಗಗಳನ್ನು, ರಾಜ್ಯವನ್ನು ಬಿಟ್ಟು ಸನ್ಯಾಸಿಯಾಗಿ ಧ್ಯಾನಕ್ಕೆ ಕುಳಿತವರು ಬುದ್ಧ. ಅವರ ಹುಟ್ಟು, ಜ್ಞಾನೋದಯ ಹಾಗೂ ಮರಣವು ಹುಣ್ಣಿಮೆ ದಿನದಂದೆ ಸಂಭವಿಸಿರುವುದು ವಿಸ್ಮಯಕಾರಿಯಾಗಿದೆ ಎಂದು ತಿಳಿಸಿದರು.
    ಹುಣ್ಣಿಮೆಯು ಪೂರ್ಣತೆಯ ಸಂಕೇತ ಬುದ್ಧ. ಅವರು ಪರಿಪೂರ್ಣತೆಯನ್ನು ಹೊಂದಿದವರು. ಜಗತ್ತಿನ ಸತ್ಯದ ಬಗ್ಗೆ ಅರಿತು ದುಃಖದಲ್ಲಿರುವವರಿಗೆ ಸುಖದ ದಾರಿಯನ್ನು ತೋರಿಸಿಕೊಟ್ಟವರು. ಅವರನ್ನು ದೇವರೆಂದು ಪೂಜಿಸುವುದಕ್ಕಿಂತ ಜೀವನ ಮಾರ್ಗದರ್ಶಕರೆಂದು ಪೂಜಿಸುವುದು ಉತ್ತಮ ಎಂದರು.
    ಡಿಎಸ್ ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ, ಬುದ್ಧನು ಕೇವಲ ಒಂದು ಧರ್ಮಕ್ಕೆ ಸೀಮಿತರಾದವರಲ್ಲ. ಅವರು ಏಷ್ಯಾದ ಬೆಳಕು. ಸತ್ಯ ಬೋಧನೆಗಳಿಂದ ಏಷ್ಯಾದೆಲ್ಲೆಡೆ ಅವರ ಅನುಯಾಯಿಗಳಿದ್ದಾರೆ. ಬುದ್ಧನು ತನ್ನನ್ನು ತಾನು ದೇವರು ಅಥವಾ ದೇವದೂತನೆಂದು ಎಲ್ಲಿಯೂ ಹೇಳಿಕೊಳ್ಳಲಿಲ್ಲ ಎಂದು ಹೇಳಿದರು.
    ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಬುದ್ಧರÀ ವಿಚಾರಧಾರೆಗಳನ್ನು ತಿಳಿದವರು ಜೀವನವನ್ನು ಸುಲಭ ಮಾರ್ಗದಲ್ಲಿ ಹಾಗೂ ಸುಖಮಯದಿಂದ ನೆಮ್ಮದಿಯ ಜೀವನವನ್ನು ಸಾಗಿಸುತ್ತಾರೆ. ಪ್ರತಿಯೊಬ್ಬರೂ ಅವರ ಅನುಯಾಯಿಗಳಾಗಬೇಕು ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಹಂಪಯ್ಯ, ನಿರ್ದೇಶಕರಾದ ನಾಗರಾಜ್, ಗಂಗಾಧರ, ಪರಮೇಶ್ವರ್, ಮುಖಂಡರಾದ ಹರೀಶ್‌ಮಿತ್ರ, ರವೀಶ್ ಕ್ಯಾತನಬೀಡು, ಬಿಳೇಕಲ್ಲು ಬಾಲಕೃಷ್ಣ, ಗುರುಶಾಂತಪ್ಪ, ಶಹಾಬುದ್ದೀನ್, ಕಬ್ಬಿಕೆರೆ ಮೋಹನ್‌ಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts