More

    ಬೇಟೆಯಾಡುತ್ತಿದ್ದ ಮೂವರ ಬಂಧನ, ಇಬ್ಬರು ಪರಾರಿ ಬಂದೂಕು, ವಾಹನ ವಶಕ್ಕೆ

    ಕಾಸರಗೋಡು: ಸರ್ಕಾರಿ ರಕ್ಷಿತಾರಣ್ಯದಲ್ಲಿ ವನ್ಯಜೀವಿಗಳನ್ನು ಬೇಟೆಯಾಡಿದ ಮೂವರನ್ನು ಬಂಧಿಸಲಾಗಿದೆ.ರಾ2ಜಾಪುರಂ ಸನಿಹದ ಪಾಣತ್ತೂರು ಕೋಳಿಚ್ಚಾಲ್ ನಿವಾಸಿ ನಾರಾಯಣನ್, ಪಾಣತ್ತೂರು ಕರಿಕ್ಕೆ ನಿವಾಸಿಗಳಾದ ನಿಶಾಂತ್ ಹಾಗೂ ಮಹೇಶ್ ಬಂಧಿತರು. ಇವರ ಜತೆಗಿದ್ದ ಅವಿನಾಶ್ ಹಾಗೂ ಪ್ರಶಾಂತ್ ಪರಾರಿಯಾಗಿದ್ದಾರೆ.

    ಪಾಣತ್ತೂರು ಕಮ್ಮಾಡಿ ಸನಿಹದ ಅರಣ್ಯದಲ್ಲಿ ಪನತ್ತಡಿ ಅರಣ್ಯ ವಿಭಾಗ ಅಧಿಕಾರಿಗಳು ಕ್ಲೀನ್ ಪನತ್ತಡಿ ಆಪರೇಶನ್ ಕಾರ್ಯಾಚರಣೆ ಆರಂಭಿಸಿದ್ದು, ಈ ಸಂದರ್ಭ ಬೇಟೆಯಾಡುತ್ತಿದ್ದ ತಂಡದ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಇವರಿಂದ ಒಂದು ಬಂದೂಕು, ಮದ್ದುಗುಂಡು, ಸಂಚಾರಕ್ಕೆ ಬಳಸಿದ್ದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪನತ್ತಡಿ ಸೆಕ್ಷನ್ ಅರಣ್ಯಾಧಿಕಾರಿ ಬಿ.ಶೇಷಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts