More

    ರಾಜ್ಯ ಸರ್ಕಾರ ತನ್ನ ಖಜಾನೆ ತುಂಬಿಸಿಕೊಳ್ಳಲು ಸರ್ಕಾರಿ ಭೂಮಿಯನ್ನೇ ಮಾರಾಟಕ್ಕೆ ಇಟ್ಟಿದೆ!

    ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರ, ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಸರ್ಕಾರಿ ಭೂಮಿಯನ್ನೇ ಮಾರಾಟ ಮಾಡಲು ಸಿದ್ಧವಾಗಿದೆ!

    ಸರ್ಕಾರಿ ಭೂಮಿಯನ್ನು ಹಲವರು ವಿವಿಧ ಉದ್ದೇಶಕ್ಕಾಗಿ ಗುತ್ತಿಗೆ ಪಡೆದಿದ್ದಾರೆ. ಸರ್ಕಾರಿ ಜಾಗವನ್ನು ಲೀಸ್​ಗೆ ಪಡೆದು ಸಂಘ-ಸಂಸ್ಥೆಗಳು, ಸ್ಕೂಲ್​-ಕಾಲೇಜು, ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿರುವವರಿಂದ ಭೂಮಿ ವಾಪಸ್ ಪಡೆಯಲು ಆಗಲ್ಲ. ಇಂತಿಷ್ಟು ವರ್ಷಕ್ಕೊಮ್ಮೆ ಗುತ್ತಿಗೆ ನವೀಕರಣ ಮಾಡುವ ಪದ್ಧತಿ ಜಾರಿಯಲ್ಲಿದೆ. ಈ ಭಾರಿ ಲೀಸ್​ ನವೀಕರಣ ಮಾಡುವ ಬದಲು ಆ ಭೂಮಿಯನ್ನೇ ಅವರಿಗೆ ಕ್ರಯ ಮಾಡಿಕೊಡಲಾಗುತ್ತದೆ ಎಂದು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಾಧುಸ್ವಾಮಿ ತಿಳಿಸಿದರು. ಇದನ್ನೂ ಓದಿರಿ ಕೋವಿಡ್​ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್​ಡೌನ್​ ಬೇಡ: ಪ್ರತಾಪ್​ಸಿಂಹ

    ಹೌದು, ಅನಾದಿಕಾಲದಿಂದಲೂ ಸರ್ಕಾರಿ ಜಾಗವನ್ನು ಲೀಸ್​ಗೆ ಪಡೆದವರ ಪಾಲಿಗೆ ಜಾಗ ಖಾಯಂ ಆಗುವ ಸಂದರ್ಭ ಬಂದೊದಗಿದೆ. ಸದ್ಯ ಮಾರುಕಟ್ಟೆ ದರ ಏನಿದೆಯೋ ಆ ಬೆಲೆಗೆ ಭೂಮಿ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಲೀಸ್​ಗೆ ಕೊಡುವುದರಿಂದ ಸರ್ಕಾರದ ಬೊಕ್ಕಸ ತುಂಬಲ್ಲ. ಅಲ್ಲದೆ ಪ್ರತಿ ವರ್ಷ ಅಥವಾ ಐದು ವರ್ಷಕ್ಕೊಮ್ಮೆ ಲೀಸ್ ಮುಂದುವರಿಸುತ್ತಲೇ ಇರಬೇಕಾಗುತ್ತದೆ. ಹೀಗಾಗಿ ಆ ಭೂಮಿಯನ್ನು ಗೈಡೆನ್ಸ್ ಬೆಲೆಗೆ ಮಾರಾಟ ಮಾಡಿದ್ರೆ ಸರ್ಕಾರಕ್ಕೆ ಲಾಭ ಆಗಲಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ.

    ಸರ್ಕಾರಿ ಜಾಗ ಗುತ್ತಿಗೆ ಪಡೆದಿರುವವರು ಖರೀದಿ ಮಾಡಲ್ಲ ಅಂದ್ರೆ ಆ ಜಾಗವನ್ನು ಸರ್ಕಾರಕ್ಕೆ ವಾಪಸ್ ಕೊಡಬೇಕು. ಮತ್ತೆ ಗುತ್ತಿಗೆ ನವೀಕರಣ ಮಾಡುವುದಿಲ್ಲ ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಕ್ಕೆ ಇದರಿಂದಾಗುವ ಲಾಭ-ನಷ್ಟ ಕುರಿತ ಚರ್ಚೆ ಆರಂಭವಾಗಿದೆ. ಅಂದಹಾಗೆ ಕೆಲ ಆಯ್ದ ಜಾಗವನ್ನಷ್ಟೇ ಕ್ರಯ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ.

    ಕಿರುಕುಳಕ್ಕೆ ಬೇಸತ್ತ ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಗೃಹ ಕಚೇರಿ ಮುಂದೆ ಧರಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts