More

    2018, 2019ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ದತ್ತಿ ಪ್ರಶಸ್ತಿ ಪ್ರಕಟ

    ಬೆಂಗಳೂರು: 2018 ಹಾಗೂ 2019ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಶುಕ್ರವಾರ ಪ್ರಕಟಿಸಿದೆ. 2019ನೇ ಸಾಲಿನ ಗೌರವ ದತ್ತಿ ಪ್ರಶಸ್ತಿಯನ್ನು ಕೆ.ಜಿ. ನಾಗರಾಜಪ್ಪ, ಬಾಬು ಕೃಷ್ಣಮೂರ್ತಿ, ಉಷಾ ಪಿ. ರೈ, ಲಕ್ಷ್ಮಣ ತೆಲಗಾವಿ, ಡಾ. ವೀರಣ್ಣ ರಾಜೂರ ಅವರಿಗೆ ನೀಡಲಾಗಿದೆ.

    2019ನೇ ಸಾಲಿನ ಸಾಹಿತ್ಯ ಪ್ರಶಸ್ತಿಯನ್ನು ಡಾ. ಅಮರೇಶ ನುಗಡೋಣಿ, ಡಾ. ವಿ.ಎಸ್.ಮಾಳಿ, ಸುಬ್ಬು ಹೊಲೆಯಾರ್, ಡಾ. ಶಾರದಾ ಕುಪ್ಪಂ, ಪಿ. ಶಿವಣ್ಣ, ಡಾ. ಎಂ.ಎಸ್. ವೇದಾ, ಎಫ್.ಟಿ. ಹಳ್ಳಿಕೇರಿ, ಡಾ. ಮಾಧವ ಪೆರಾಜೆ, ವಸುಧೇಂದ್ರ, ಡಾ. ಜಿ. ಪ್ರಶಾಂತ ನಾಯಕ ಅವರಿಗೆ ನೀಡಲಾಗಿದೆ.

    10 ಜನರಿಗೆ 2019ನೇ ಸಾಲಿನ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿ, 2018ರ ವರ್ಷದ ಪುಸ್ತಕ ಬಹುಮಾನ ಮತ್ತು 2018ರ ವರ್ಷದ ಅಕಾಡೆಮಿಯ 9 ದತ್ತಿನಿಧಿ ಬಹುಮಾನ ಘೊಷಿಸಲಾಗಿದೆ.  ಕಾ.ತ. ಚಿಕ್ಕಣ್ಣ, ಜಿ.ಕೆ. ರವೀಂದ್ರಕುಮಾರ್, ಎಸ್.ಆರ್. ವಿಜಯಶಂಕರ್ ಸೇರಿ 19 ಮಂದಿಗೆ ಪುಸ್ತಕ ಬಹುಮಾನ ಪ್ರಕಟಿಸಲಾಗಿದೆ. ಲಕ್ಮೀಷ ತೊಳ್ಪಾಡಿ, ಲೋಕೇಶ್ ಅಗಸನಕಟ್ಟೆ ದತ್ತಿ ಪ್ರಶಸ್ತಿಗೆ ಪಾತ್ರರಾದ ಪ್ರಮುಖರು.

    2018ರ ವರ್ಷದ ಪುಸ್ತಕ ಬಹುಮಾನಕ್ಕೆ ಕಾವ್ಯ, ಕಾದಂಬರಿ, ಸಣ್ಣ ಕತೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಆತ್ಮಕಥೆ, ಮಕ್ಕಳ ಸಾಹಿತ್ಯ, ವಿಜ್ಞಾನ, ಅನುವಾದ, ಅಂಕಣ ಬರಹ ಸೇರಿ 19 ವಿಭಾಗದಿಂದ ಪುಸ್ತಕಗಳನ್ನು ಆರಿಸಿಕೊಳ್ಳಲಾಗಿದೆ.

    ಪ್ರಶಸ್ತಿಯು 25 ಸಾವಿರ ರೂ. ಪ್ರಮಾಣ ಪತ್ರ ಒಳಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2019ನೇ ಸಾಲಿನ ವರ್ಷದ ಗೌರವ ಪ್ರಶಸ್ತಿ 50 ಸಾವಿರ ರೂ. ನಗದು, ಫಲಕ ಮತ್ತು ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ. ಸಾಹಿತ್ಯ ಶ್ರೀ ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಮಾಣಪತ್ರಗಳಿರುತ್ತವೆ.

    9 ದತ್ತಿ ಬಹುಮಾನ 

    • ಕಾವ್ಯ- ಹಸ್ತಪ್ರತಿ (ಚಿ. ಶ್ರೀನಿವಾಸರಾಜು ದತ್ತಿನಿಧಿ) ಒಂದು ಅಂಕ ಮುಗಿದು – ಸ್ಮಿತಾ ಮಾಕಳ್ಳಿ
    • ಕಾದಂಬರಿ (ಚದುರಂಗ ದತ್ತಿನಿಧಿ) ಅತೀತ ಲೋಕದ ಮಹಾಯಾಂತ್ರಿಕ – ಡಾ. ಲೋಕೇಶ ಅಗಸನಕಟ್ಟೆ
    • ಲಲಿತಪ್ರಬಂಧ (ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ) -ಮೂರನೇ ಕಣ್ಣು – ಚಿದಾನಂದ ಸಾಲಿ
    • ಜೀವನ ಚರಿತ್ರೆ (ಸಿಂಪಿ ಲಿಂಗಣ್ಣ ದತ್ತಿನಿಧಿ) ಬೇಸಾಯದ ಕೃತಿ – ಚಂದ್ರಶೇಖರ ಸುಭಾಸಗೌಡ ಪಾಟೀಲ್
    • ಸಾಹಿತ್ಯ ವಿಮರ್ಶೆ (ಪಿ. ಶ್ರೀನಿವಾಸರಾವ್ ದತ್ತಿನಿಧಿ) ಹಲವು ಬಣ್ಣದ ಹಗ್ಗ -ಸುರೇಶ್ ನಾಗಲಮಡಿಕೆ
    • ಅನುವಾದ-1 (ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ) ರವೀಂದ್ರ ಗದ್ಯ ಸಂಚಯ – ಜಿ. ರಾಮನಾಥ ಭಟ್
    • ಲೇಖಕರ ಮೊದಲ ಸ್ವತಂತ್ರ ಕೃತಿ (ಮಧುರಚೆನ್ನ ದತ್ತಿನಿಧಿ) ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ – ಡಾ.ಲಕ್ಷ್ಮಣ ವಿ.ಎ.
    • ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ) ದಿ ಅದರ್ ಫೇಸ್ ಹಾಗೂ ವೈಚಾರಿಕ – ಎನ್. ತಿರುಮಲ ಭಟ್‌
    • ಅಂಕಣ ಬರಹ (ಬಿ.ವಿ. ವೀರಭದ್ರಪ್ಪ ದತ್ತಿನಿಧಿ) ಮಹಾಭಾರತ ಅನುಸಂಧಾನದ ಭಾರತ ಯಾತ್ರೆ – ಲಕ್ಷ್ಮೀಶ ತೋಳ್ಪಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts