More

    ಕರ್ನಾಟಕದಲ್ಲಿ ಹೂಡಿಕೆಗೆ ಮುಂದಾದ ಅಮೆರಿಕ ಮೂಲದ ಲಾಕೀಡ್ ಮಾರ್ಟಿನ್ ಕಂಪನಿ: ಸಿಎಂ ಯಡಿಯೂರಪ್ಪಗೆ ಸಂಸ್ಥೆ ಪತ್ರ

    ಬೆಂಗಳೂರು: ಏರೋಸ್ಪೇಸ್ ವಲಯದ ಮುಂಚೂಣಿಯಲ್ಲಿರುವ ಲಾಕೀಡ್ ಮಾರ್ಟಿನ್ ಕಂಪನಿ ಕರ್ನಾಟಕದಲ್ಲಿ ಬಂಡವಾಳ ಹೂಡಲು ಮುಂದಾಗಿದೆ.

    ರಾಜ್ಯದಲ್ಲಿ ಬಂಡವಾಳ ಹೂಡುವ ಬಗ್ಗೆ ಕಂಪನಿಯ ಉಪಾಧ್ಯಕ್ಷ ರಿಚರ್ಡ್ ಎಫ್. ಎಂಬ್ರೋಸ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ವಿಷಯ ತಿಳಿಸಿದ್ದಾರೆ.

    ಅಮೆರಿಕ ಮೂಲದ ಏರೋಸ್ಪೇಸ್ ವಲಯದ ಬೃಹತ್ ಕಂಪನಿಯಾದ ಲಾಕೀಡ್ ಮಾರ್ಟಿನ್​ ಸಿಎಂಗೆ ಬರೆದ ಪತ್ರದಲ್ಲಿ ಕಂಪನಿಯ ಭಾರತದ ಮುಖ್ಯಸ್ಥರು ತಮ್ಮನ್ನು ಸಂಪರ್ಕಿಸಲಿದ್ದಾರೆ ಎಂದು ತಿಳಿಸಿದೆ.

    ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಲು ಲಾಕೀಡ್ ಮಾರ್ಟಿನ್​ ಕಂಪನಿ ಉತ್ಸುಕವಾಗಿದೆ. ನಮ್ಮ ದಾವೋಸ್ ಪ್ರವಾಸ ಫಲಪ್ರದವಾಗಿರುವುದಕ್ಕೆ ಇದು ಉದಾಹರಣೆ. ಈ ಪತ್ರ ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಿಸುವ ನಮ್ಮ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ ಎಂದು ಮಾಧ್ಯಮಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

    ಅಲ್ಲದೆ, ನಮ್ಮ ದಾವೋಸ್ ಭೇಟಿ ಬಗ್ಗೆ ಅನುಮಾನ ವ್ಯಕ್ತಪಡಿಸುವವರಿಗೆ ಇದು ಉತ್ತರವಾಗಿದೆ. ದಾವೋಸ್ ಭೇಟಿಯಿಂದಾಗಿ ನಮ್ಮ ರಾಜ್ಯಕ್ಕೆ ಬಂಡವಾಳ ಹರಿದು ಬರುವಲ್ಲಿ ಅನುಮಾನವಿಲ್ಲ ಎಂದಿದ್ದಾರೆ.

    ನವೆಂಬರ್​ನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ (ಜಿಐಎಂ) ಇನ್ನಷ್ಟು ಯಶಸ್ವಿ ಕಾಣುತ್ತೇವೆ ಎಂಬ ನಮ್ಮ ನಂಬಿಕೆ ಗಟ್ಟಿಯಾಗಿದೆ ಎಂದು ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts