More

    ರಾಜ್ಯದಲ್ಲಿ 2ನೇ ಡೋಸ್ ನೀಡಲು ವ್ಯಾಕ್ಸಿನ್ ಕೊರತೆ : 3 ದಿನಗಳಲ್ಲಿ ಕ್ರಮ ಕೈಗೊಳ್ಳಲು ಹೈಕೋರ್ಟ್​ ನಿರ್ದೇಶನ

    ಬೆಂಗಳೂರು : ಕರ್ನಾಟಕದಲ್ಲಿ 65.83 ಲಕ್ಷ ಜನರಿಗೆ 2ನೇ ಡೋಸ್ ಕರೊನಾ ಲಸಿಕೆ ನೀಡಬೇಕಾಗಿದೆ. ಆದರೆ ಪ್ರಸ್ತುತ ರಾಜ್ಯ ಸರ್ಕಾರದ ಬಳಿ 7.76 ಲಕ್ಷ ಡೋಸ್ ಮಾತ್ರವಿದೆ ಎನ್ನಲಾಗಿದೆ. ಹೀಗಾಗಿ ರಾಜ್ಯಕ್ಕೆ ಶೀಘ್ರವಾಗಿ ಹೆಚ್ಚಿನ ಲಸಿಕೆಗಳು ಪೂರೈಕೆಯಾಗಬೇಕಿದೆ ಎಂದು ಕರ್ನಾಟಕ ಹೈಕೋರ್ಟ್​ ಹೇಳಿದೆ.

    ಅದಾಗಲೇ ಮೊದಲನೇ ಡೋಸ್​ ಲಸಿಕೆ ಪಡೆದು ಎರಡನೇ ಡೋಸ್​​ ಪಡೆಯಬೇಕಾದ ಫಲಾನುಭವಿಗಳಿಗೆ ಲಸಿಕೆ ಕೊರತೆ ಇರುವ ಬಗ್ಗೆ ಹೈಕೋರ್ಟ್​ ಇಂದು ಕಳವಳ ವ್ಯಕ್ತಪಡಿಸಿತು. ಈ ನಿಟ್ಟಿನಲ್ಲಿ ಎರಡನೇ ಡೋಸ್​​ಗಾಗಿ ಸಾಕಷ್ಟು ಲಸಿಕೆಗಳನ್ನು ನೀಡಬೇಕೆಂದು ಕೋರಿ ಇಂದೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತು.

    ಇದನ್ನೂ ಓದಿ: ಶೇ.78 ರಷ್ಟು ನಗರ ಪೊಲೀಸರಿಗೆ ಲಸಿಕೆ ಪೂರ್ಣ ; 754 ಕರೊನಾ ಪ್ರಕರಣಗಳು

    ರಾಜ್ಯ ಸರ್ಕಾರದ ಈ ಮನವಿಯನ್ನು ಕೇಂದ್ರ ಸರ್ಕಾರ 3 ದಿನಗಳೊಳಗೆ ಪರಿಗಣಿಸಬೇಕು ಎಂದಿರುವ ಕೋರ್ಟ್​​, ಈ ಬಗೆಗಿನ ಸಂದಿಗ್ಧ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು. ಲಸಿಕೆ‌ ಉತ್ಪಾದಕರೊಂದಿಗೆ ಸಮಾಲೋಚಿಸಿ, ಶೀಘ್ರ ಲಸಿಕೆ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

    ಕರೊನಾ ಲಸಿಕೆ ಪಡೆಯಲು ಕೋವಿನ್ ಆ್ಯಪ್​​​ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಎಷ್ಟೋ ಜನರು ಅದಕ್ಕಾಗಿ ಕಷ್ಟ ಪಡುತ್ತಿದ್ದಾರೆ. ಆದ್ದರಿಂದ ಜನರ ನೋಂದಣಿಗೆ ನೆರವಾಗಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ ನೀಡಿದೆ.

    VIDEO | ಕೇಂದ್ರ ಸಚಿವರ ವಾಹನದ ಮೇಲೆ ‘ಟಿಎಂಸಿ ಗೂಂಡಾ’ಗಳಿಂದ ಅಟ್ಯಾಕ್​ !

    ಭಾರತದ ಪ್ರಯಾಣಿಕರನ್ನು ನಿಷೇಧಿಸಿದ ಶ್ರೀಲಂಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts