More

    ಕೇಂದ್ರ ‘ಒನ್ ನೇಷನ್, ಒನ್ ಯೂನಿಫಾರ್ಮ್’ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ

    ಬೆಂಗಳೂರು: ಕೇಂದ್ರ ಗೃಹ ಸಚಿವಾಲಯದ ‘ಒಂದು ರಾಷ್ಟ್ರ ಒಂದು ಪೊಲೀಸ್ ಸಮವಸ’ ಜಾರಿಗೆ ರಾಜ್ಯ ಗೃಹ ಇಲಾಖೆ ತಾರ್ಕಿಕ ಒಪ್ಪಿಗೆ ಸೂಚಿಸಿದೆ.

    2022ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ, ಒಂದು ರಾಷ್ಟ್ರ ಒಂದು ಪೊಲೀಸ್ ಸಮವಸ್ತ್ರ ಜಾರಿಗೆ ತರುವ ಸಲುವಾಗಿ ಎಲ್ಲ ರಾಜ್ಯಗಳಿಂದ ಒಪ್ಪಿಗೆ ಕೋರಿ ಪತ್ರ ಬರೆದಿತ್ತು. ರಾಜ್ಯ ಗೃಹ ಸಚಿವಾಲಯ ಕೇಂದ್ರದ ಯೋಜನೆ ಕುರಿತು ಚರ್ಚೆ ನಡೆಸಿ ಒಪ್ಪಿಗೆ ಸೂಚಿಸಿ ಪತ್ರ ಬರೆದಿದೆ. ಇದೀಗ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಂದ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧರ ತೆಗೆದುಕೊಂಡು ಜಾರಿ ತರಲಿದೆ.

    ಇತ್ತೀಚೆಗೆ ಹರಿಯಾಣದಲ್ಲಿ ಸೂರಜ್‌ಕುಂಡ್‌ನಲ್ಲಿ ನಡೆದಿದ್ದ ಎಲ್ಲ ರಾಜ್ಯಗಳ ಗೃಹ ಸಚಿವರ ಚಿಂತನ್ ಶಿವರ್‌ನ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಒಂದು ರಾಷ್ಟ್ರ ಒಂದು ಸಮವಸ್ತ್ರ ಜಾರಿಗೆ ಸಲಹೆ ನೀಡಿದ್ದರು. ಪೊಲೀಸರಿಗೆ ಗುರುತು ಅನನ್ಯವಾಗಿರಬೇಕು. ಇದು ಪರಿಕಲ್ಪನೆ ಅಷ್ಟೇ ಆಗಿದ್ದು, ಹೇರಿಕೆ ಅಲ್ಲ. ಈ ಸಲಹೆಯನ್ನು ಪರಿಗಣಿಸುವಂತೆ ರಾಜ್ಯಗಳಿಗೆ ಪ್ರಧಾನಿ ಸಲಹೆ ನೀಡಿದ್ದರು. ಅದರಂತೆ ದೇಶದ ಎಲ್ಲ ರಾಜ್ಯಗಳ ಪೊಲೀಸರಿಗೆ ಅನ್ವಯ ಆಗುವಂತೆ ಏಕರೂಪ ಸಮವಸ ರೂಪಿಸಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ಅಭಿಪ್ರಾಯ ಕೋರಿ ಪತ್ರ ಬರೆದಿದ್ದರು. ಇದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಒಪ್ಪಿಗೆ ಸೂಚಿಸಿದ್ದಾರೆ.

    ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಜಾರಿಗೆ ಇರುವ ಸಮವಸ್ತ್ರಕ್ಕೂ ಮತ್ತು ಕೇಂದ್ರ ಗೃಹ ಸಚಿವಾಲಯ ಸಲ್ಲಿಸಿರುವ ಒಂದು ದೇಶ ಒಂದು ಪೊಲೀಸ್ ಸಮವಸ್ತ್ರಕ್ಕೂ ಯಾವುದೇ ವ್ಯಾತ್ಯಾಸ ಕಂಡು ಬಂದಿಲ್ಲ. ಈಗಾಗಲೇ ರಾಜ್ಯದ ಪೊಲೀಸರ ಸಮವಸ್ತ್ರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಕಾನೂನು ಮತ್ತು ಸುವ್ಯವಸ್ಥೆ (ಸಿವಿಲ್): ಖಾಕಿ ಸಮವಸ್ತ್ರ, ಖಾಕಿ ಸ್ಲೋಚ್ ಟೋಪಿ, ಕಪ್ಪು ಆ್ಯಂಕಲ್ ಶೂ, ಪಿಯು ರಬ್ಬರ್ ಸೋಲ್, ಕಪ್ಪು ಬೆಲ್ಟ್, ಎಂಬ್ಲೇಮ್.

    ಸಂಚಾರ ಪೊಲೀಸರು: ಬಿಳಿ ಶರ್ಟ್, ಖಾಕಿ ಪ್ಯಾಂಟ್, ಬಿಳಿ ಸ್ಲೋಚ್ ಟೋಪಿ, ಕಪ್ಪು ಆ್ಯಂಕಲ್ ಶೂ, ಪಿಯು ರಬ್ಬರ್ ಸೋಲ್, ಕಪ್ಪು ಬೆಲ್ಟ್, ಎಂಬ್ಲೇಮ್.

    ಮಹಿಳಾ ಪೊಲೀಸರು: ಖಾಕಿ ಸಮವಸ್ತ್ರ, ಖಾಕಿ ಬೆರೆಟ್ ಟೋಪಿ, ಖಾಕಿ ಸೀರೆ (ಗರ್ಭಿಣಿ), ಕಪ್ಪು ಮಹಿಳಾ ಶೂ, ಕಪ್ಪು ಬೆಲ್ಟ್, ಎಂಬ್ಲೇಮ್.

    ಸಶಸ್ತ್ರ ಪೊಲೀಸರು : ಖಾಕಿ ಸಮವಸ್ತ್ರ, ಖಾಕಿ ಸ್ಲೋಚ್ ಟೋಪಿ, ಕಪ್ಪು ಬೆಲ್ಟ್, ಎಂಬ್ಲೇಮ್.

    ಸಹಾಯಕ ಸಬ್‌ಇನ್‌ಸ್ಪೆಕ್ಟರ್: ಖಾಕಿ ಸಮವಸ್ತ್ರ, ಖಾಕಿ ಪೀಕ್ ಕ್ಯಾಪ್, ಬ್ರೌನ್ ಆಕ್ಸ್‌ರ್ಡ್ ಶೂ, ಬ್ರೌನ್ ಬೆಲ್ಟ್, ಎಂಬ್ಲೇಮ್.

    ಮಹಿಳಾ ಎಎಸ್‌ಐ: ಖಾಕಿ ಸಮವಸ್ತ್ರ, ಖಾಕಿ ಪೀಕ್ ಕ್ಯಾಪ್, ಖಾಕಿ ಸೀರೆ(ಗರ್ಭಿಣಿ), ಬ್ರೌನ್ ಆಕ್ಸ್‌ರ್ಡ್ ಶೂ, ಬ್ರೌನ್ ಬೆಲ್ಟ್, ಎಂಬ್ಲೇಮ್.

    ಸಬ್‌ಇನ್‌ಸ್ಪೆಕ್ಟರ್: ಖಾಕಿ ಸಮವಸ್ತ್ರ, ಖಾಕಿ ಪೀಕ್ ಕ್ಯಾಪ್, ಬ್ರೌನ್ ಆಕ್ಸ್‌ರ್ಡ್ ಶೂ, ಬ್ರೌನ್ ಬೆಲ್ಟ್, ಎಂಬ್ಲೇಮ್.

    ಮಹಿಳಾ ಸಬ್‌ಇನ್‌ಸ್ಪೆಕ್ಟರ್: ಖಾಕಿ ಸಮವಸ್ತ್ರ, ಖಾಕಿ ಪೀಕ್ ಕ್ಯಾಪ್, ಖಾಕಿ ಸೀರೆ (ಗರ್ಭಿಣಿ), ಬ್ರೌನ್ ಆಕ್ಸ್‌ರ್ಡ್ ಶೂ, ಬ್ರೌನ್ ಬೆಲ್ಟ್, ಎಂಬ್ಲೇಮ್.

    ಭಾರತ್​ ಜೋಡೋ ಪಾದಯಾತ್ರೆಗೆ ವರುಣ್​ ಗಾಂಧಿ!? ಸುದ್ದಿಗೋಷ್ಠಿಯಲ್ಲಿ ಮಹತ್ವದ ವಿಚಾರ ಸ್ಪಷ್ಟಪಡಿಸಿದ ರಾಹುಲ್​

    VIDEO | 1 ಕಿ.ಮೀ ದೂರ ವ್ಯಕ್ತಿಯನ್ನು ಎಳೆದೊಯ್ದ ಬೈಕ್ ಸವಾರ; ಬೆಂಗಳೂರಿನಲ್ಲೊಂದು ಆಘಾತಕಾರಿ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts