More

    ಭಾರತ್​ ಜೋಡೋ ಪಾದಯಾತ್ರೆಗೆ ವರುಣ್​ ಗಾಂಧಿ!? ಸುದ್ದಿಗೋಷ್ಠಿಯಲ್ಲಿ ಮಹತ್ವದ ವಿಚಾರ ಸ್ಪಷ್ಟಪಡಿಸಿದ ರಾಹುಲ್​

    ಚಂಢಿಗಡ: ಕಾಂಗ್ರೆಸ್​ನ ರಾಷ್ಟ್ರ ನಾಯಕ ರಾಹುಲ್​ ಗಾಂಧಿ ನಡೆಸುತ್ತಿರುವ ಭಾರತ್​ ಜೋಡೋ ಪಾದಯಾತ್ರೆಯಲ್ಲಿ ಸಹೋದರ ವರುಣ್​ ಗಾಂಧಿ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿ ಸೇರಿರುವ ನೆಹರು-ಗಾಂಧಿ ಕುಟುಂಬದ ಕುಡಿ ವರುಣ್​ ಗಾಂಧಿ ಕಾಂಗ್ರೆಸ್​ಗೆ ಮರಳಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

    ಸದ್ಯ ಪಂಜಾಬ್​ನಲ್ಲಿ ಭಾರತ್​ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್​ ಗಾಂಧಿ, ಮಂಗಳವಾರ ಹೋಶಿಯಾರ್‌ಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಂತೆ-ಕಂತೆಗೆ ತೆರೆ ಎಳೆಯಲು ಯತ್ನಿಸಿದರು. ನನ್ನ ಮತ್ತು ವರುಣ್​ ಅವರ ಐಡಿಯಾಲಜಿ ಹೊಂದಿಕೆ ಆಗುವುದಿಲ್ಲ. ನಾನೆಂದೂ ಆರ್​ಎಸ್​ಎಸ್​ ಕಚೇರಿಯ ಮೆಟ್ಟಿಲು ಹತ್ತಲ್ಲ ಎಂದರು.

    ವರುಣ್ ಗಾಂಧಿ ಬಿಜೆಪಿಯಲ್ಲಿದ್ದಾರೆ. ಇಲ್ಲಿಗೆ ಬಂದರೆ ಅವರಿಗೆ ತೊಂದರೆ ಆಗಬಹುದು. ಅವರ ಸಿದ್ಧಾಂತಗಳನ್ನು ಒಪ್ಪಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ನನ್ನ ಕುಟುಂಬಕ್ಕೆ ಒಂದು ಸಿದ್ಧಾಂತವಿದೆ, ವರುಣ್ ಇನ್ನೊಂದು ಸಿದ್ಧಾಂತವನ್ನ ಅಳವಡಿಸಿಕೊಂಡಿದ್ದಾರೆ. ನಾನು ಆರ್‌ಎಸ್‌ಎಸ್ ಕಚೇರಿಗೆ ಹೋಗಲು ಸಾಧ್ಯವಿಲ್ಲ, ಅಂತ ಸ್ಥಿತಿ ಬಂದರೆ ನನ್ನ ತಲೆ ಕಡಿದುಕೊಳ್ಳುವೆ. ಸಂಬಂಧವೇ ಬೇರೆ, ರಾಜಕಾರಣವೇ ಬೇರೆ. ವರುಣ್​ ಅಳವಡಿಸಿಕೊಂಡಿರುವ ರಾಜಕೀಯ ಸಿದ್ಧಾಂತವನ್ನ ನಾನು ಸ್ವೀಕರಿಸಲಾರೆ. ನನ್ನ ಅಜ್ಜಿ ಮತ್ತು ತಂದೆಯ ಸಿದ್ಧಾಂತ ನನ್ನಲ್ಲಿದೆ ಎಂದು ರಾಹುಲ್​ ಗಾಂಧಿ ಹೇಳಿದರು. ಇನ್ನು ಕಾಂಗ್ರೆಸ್ ಸಿದ್ಧಾಂತ ಸ್ವೀಕರಿಸಿದರೆ ಒಟ್ಟಾಗಬಹುದು ಎಂಬಂತೆ ಪರೋಕ್ಷವಾಗಿ ಹೇಳಿದರು.

    ಇತ್ತೀಚಿಗೆ ವರುಣ್​ ಗಾಂಧಿ ಅವರು ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುತ್ತಾ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಬೆಳವಣಿಗೆ ನಡುವೆಯೇ ಭಾರತ್​ ಜೋಡೋ ಯಾತ್ರೆಗೆ ವರುಣ್​ ಬರ್ತಾರೆ ಎಂಬ ಸುದ್ದಿ ಮಹತ್ವ ಪಡೆದಿದೆ.

    ಸಂಜಯ್​ ಗಾಂಧಿ ಮತ್ತು ಮನೇಕಾ ಗಾಂಧಿ ಅವರ ಪುತ್ರ ವರುಣ್ ಗಾಂಧಿ ಉತ್ತರಪ್ರದೇಶದ ಫಿಲಿಬಿತ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮೊಮ್ಮಗ. ರಾಜೀವ್​ ಗಾಂಧಿ ಅವರ ಮಕ್ಕಳಾದ ಪ್ರಿಯಾಂಕಾ ಮತ್ತು ರಾಹುಲ್​ ಕಾಂಗ್ರೆಸ್​ನ ಸಾರಥ್ಯ ವಹಿಸಿದ್ದಾರೆ.(ಏಜೆನ್ಸೀಸ್​)

    ಪ್ರೀತಿಸಲು ಒಲ್ಲೆ ಎಂದಿದ್ದಕ್ಕೆ ಚೂರಿಯಿಂದ ಇರಿದು ಹತ್ಯೆಗೈದ!

    VIDEO | 1 ಕಿ.ಮೀ ದೂರ ವ್ಯಕ್ತಿಯನ್ನು ಎಳೆದೊಯ್ದ ಬೈಕ್ ಸವಾರ; ಬೆಂಗಳೂರಿನಲ್ಲೊಂದು ಆಘಾತಕಾರಿ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts